IMG-20240121-WA0027

  ಕೊಪ್ಪಳದಲ್ಲಿ ಸಂಭ್ರಮದಿಂದ  ಶೋಭಾಯಾತ್ರೆ

ಕರುನಾಡು ಬೆಳಗು ಸುದ್ದಿ

ಕೊಪ್ಪಳ, 21- ಅಯೋಧ್ಯಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆ ಕೊಪ್ಪಳದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಅನುಮತಿ ನಿರಾಕರಣೆ ನಡುವೆಯೇ ಭಾನುವಾರ ಸಂಜೆ ಅದ್ಧೂರಿಯಾಗಿ‌ ನಡೆಯಿತು.

ನಗರದ ರಾಘವೇಂದ್ರ ಮಠದಿಂದ ಆರಂಭವಾದ ಶೋಭಾಯಾತ್ರೆ ಬ್ರಾಹ್ಮಣ ವಿದ್ಯಾರ್ಥಿ ‌ಸದಾಚಾರ ಸದನದಲ್ಲಿ ಸಂಪನ್ನಗೊಂಡಿತು. ಟಾಟಾ ಏಸ್ ವಾಹನದಲ್ಲಿ ಅಳವಡಿಸಿದ್ದ ಶ್ರೀರಾಮನ ಬೃಹತ್ ಭಾವಚಿತ್ರದೊಂದಿಗೆ‌ ಶೋಭಾಯಾತ್ರೆ ಆರಂಭಗೊಂಡಿತು. ಶೋಭಾಯಾತ್ರೆಯಲ್ಲಿ ಮಹಿಳೆಯರ ಭಜನೆ ಗಮನ‌ ಸೆಳೆಯಿತು. ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಮಹಿಳೆಯರು, ಬ್ರಾಹ್ಮಣರು ಸೇರಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಶೋಭಾಯಾತ್ರೆ ಯಲ್ಲಿ ಭಾಗವಹಿಸಿದರು.

ಪರವಾನಗಿ ನಿರಾಕರಣೆ: ಕೊಪ್ಪಳ ಬ್ರಾಹ್ಮಣ ಸಮಾಜ ಭಾನುವಾರ ಬೆಳಗ್ಗೆ ಬೈಕ್ ರ‌್ಯಾಲಿ ಮತ್ತು ಅಂಜೆ ಶೋಭಾಯಾತ್ರೆ ಆಯೋಜಿಸಿತ್ತು. ಪೊಲೀಸರು ಕಾನೂನು ಸುವ್ಯವಸ್ಥೆ ನೆಪವೊಡ್ಡಿ, ಬೈಕ್ ರ‌್ಯಾಲಿಗೆ ಪರವಾನಗಿ ನೀಡಲಾಗುವುದಿಲ್ಲ ಎಂದು ಶನಿವಾರ‌ ಸಂಜೆ ಮಾಹಿತಿ‌ ನೀಡಿದ್ದರು. ಈ ವೇಳೆ ಶೋಭಾಯಾತ್ರೆ ಮಾಡಬಹುದು ಎಂದು ಮೌಕಿಕವಾಗಿ ಹೇಳಿದ್ದರು. ಈ ಹಿನ್ನೆಲೆ ಬ್ರಾಹ್ಮಣ ಸಮಾಜದ ಮುಖಂಡರು ಶನಿವಾರ ಸಂಜೆ ಬೈಕ್ ರ‌್ಯಾಲಿ ರದ್ದು ಮಾಡಿದ್ದರು.

ತಕರಾರು: ಶೋಭಾಯಾತ್ರೆಗೆ ಮಾಡಲು ಅನುಮತಿಸಿದ್ದ ಕೊಪ್ಪಳ ಪೊಲೀಸರು ಭಾನುವಾರ ಸಂಜೆ ಮತ್ತೇ ತಾಕೀತು ಮಾಡಿದ್ದಾರೆ. ಯಾತ್ರೆ ಆರಂಭವಾಗುವ ರಾಘವೇಂದ್ರ ಮಠದ ಬಳಿ ಬಂದು ಶೋಭಾಯಾತ್ರೆಗೂ ಅನುಮತಿ ನೀಡಲು ಆಗುವುದಿಲ್ಲ ಎಂದು ಮಾಹಿತಿ‌ ನೀಡಿದ್ದಾರೆ. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಸೇರಿ ಇತರರು ಸ್ಥಳಕ್ಕೆ ಆಗಮಿದ್ದು, ಪೊಲೀಸರು ಮತ್ತು ಯಾತ್ರೆ ‌ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಮತಿ ನಿರಾಕರಣೆ ಮಧ್ಯೆಯೂ ಶೋಭಾಯಾತ್ರೆ ಆರಂಭಿಸಲಾಗಿದೆ.‌ ಈ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ನಿಯೋಜನೆ ಮಡಲಾಗಿದೆ. ಯಾವುದೇ ಅಹಿತಕರ ಘಟನೆ ‌ನಡೆಯದಂತೆ ಯಾತ್ರೆ ಸಂಪನ್ನಗೊಂಡಿದೆ.

Leave a Reply

Your email address will not be published. Required fields are marked *

error: Content is protected !!