
ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೋಳ್ಳಿ – ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೩- ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಸ್ವಾವಲಂಬಿಗಳಾಗಿ ಇತರರಿಗೆ ಮಾದರಿಯಾಗಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಕೊಪ್ಪಳದಲ್ಲಿ ಎಸ್ಸಿಪಿ ( ಗಂಗಾ ಕಲ್ಯಾಣ) ಯೋಜನೆಯಡಿ ಆಯ್ಕೆಯಾದ ಅಳವಂಡಿ ರೈತ ಈರವ್ವ ಗಂಡ ಬರಮಪ್ಪ ಪೂರದ ಅವರಿಗೆ ಬೊರ್ವೇಲ್ ಮೋಟಾರ ಹಾಗೂ ವಿದ್ಯುತ್ ಸಂಭದಿಸಿದ ಸಾಮಾನುಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ರೈತ ಆರ್ಥಿಕ ,ಸಾಮಾಜಿಕ ವಾಗಿ ಬೆಳೆದು ಇತರ ರಯತರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗವಿಸಿದ್ಧಪ್ಪ ಬೆಲ್ಲದ್, ಮಂಜುನಾಥ ಪಾಟೀಲ್, ಶಂಕರ್ ನಾಯಕ, ಬಸವರಾಜ ಹೇಸರೂರ, ಅಭ್ಜಲ್ ಪಟೇಲ್, ಮೈಲಾರಪ್ಪ ,ಸಂತೋಷ ಓಜನಹಳ್ಳಿ ಇತರರು ಇದ್ದರು.