
ಕೊಪ್ಪಳ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೪- ತ್ವರಿತವಾಗಿ ಕರ ಸೇವಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕದಿಂದ ಕಾರ್ಯಕರ್ತರು ಪೊಲೀಸ್ ಉಪಾಧೀಕ್ಷರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೊಪ್ಪಳದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಿರತ ನಾನೂ ಕರ ಸೇವಕ, ನಮ್ಮನ್ನು ಬಂಧಿಸಿ ಎಂದು ಆಗ್ರಹಿಸಿದರು. ರಾಮ ಭಕ್ತರ ಮೇಲೆ ತುಘಲಕ್ ದರ್ಬಾರ್ ಮಾಡುತ್ತಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ನಮ್ಮೆಲ್ಲರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಂಜೀವ ಜರಗುಂಟಿ , ಗವಿರಾಜ ಗೊರವರ್, ಸಂಜೀವ ಜರಕುಂಟಿ, ಅರ್ಜುನ ಗುಗ್ಗರಿ, ಅಕ್ಷಯ್, ಅರುಣ್, ಮಹಾವೀರ ಜೈನ್, ಪ್ರತಾಪ್, ಕಿರಣ್, ನೀಲಕಂಠ, ವಿಶ್ವನಾಥ ಇದ್ದರು.