
ಅಯೋಧ್ಯ ಕ್ರಾಪ್ಸ್ ಅಕ್ಯಾಡಮಿ ಪ್ರೈವೇಟ್ ಲಿಮಿಟೆಡ್ಉದ್ಘಾಟನೆ
ಕೃಷಿ ಮಾನವ ಜೀವನದ ಮೂಲ ಕಸುಬು : ಗವಿ ಶ್ರೀ
ಕರುನಾಡ ಬೆಳಗು ಸುದ್ದಿ
ಕೊಪ್ಪಳ-01 – ನಾವು ಬದುಕಲು ಹಾಗೂ ಇನ್ನೊಬ್ಬರನ್ನು ಬದುಕಿಸಲು ರೈತರು ದುಡಿಯಬೇಕೆಂದು ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಅಯೋಧ್ಯ ಕ್ರಾಪ್ಸ್ ಅಕ್ಯಾಡಮಿ ಹೆಸರಿನಿಂದ ರೈತರಿಗೆ ಹೆಚ್ಚು ಬೆಳೆ ಬೆಳೆಯುವ ಮಾರ್ಗದರ್ಶನ ಕೊಡುವ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿಮಾತನಾಡುತ್ತಿದ್ದರು.
ಕೃಷಿಯೇ ಮಾನವ ಜೀವನದ ಮೂಲ ಕಸಬು ನದಿ ದಡದಲ್ಲಿ ಕೃಷಿಗೆ ಹೆಚ್ಚು ಆದ್ಯತೆ ಕೊಡಲಾದುದನ್ನು ಎತ್ತಿ ತೋರಿಸಿ ಹರಪ್ಪ ಮಂಜೋದಾರ ಚರಿತ್ರೆಯಲ್ಲಿ ಕೃಷಿಗೆ ಪ್ರಾಧ್ಯಾನತೆ ನೀಡಿದ್ದನ್ನು ನೆನಪಿಸಿದರು.
ಭಾರತ ಸರ್ಕಾರದ ಒಣ ಬೇಸಾಯದ ಅಭಿವೃದ್ಧಿ ನಿಗಮದ ಡೈರೆಕ್ಟರ್ ಡಾ ಅಶೋಕ ದಳವಾಯಿ ಮಾತನಾಡಿ 4,3,000 ಸಾವಿರ ವರ್ಷಗಳ ಹಿಂದೆ ಮಾನವ ಜನಿಸಿದ ಕಾಡು ಮೇಡು ತುಳಿತದಿಂದ ನಾಗರಿಕ ಜಗತ್ತಿಗೆ ಬಂದ ರೈತ ಕೃಷಿ ಉದ್ಯೋಗಕ್ಕೆ ಬಂದ ಜಗತ್ತಿನ ಬಹುಭಾಗದ ಕೃಷಿ ವಲಯ ಪಾಕಿಸ್ತಾನ ಇರಾನ್ ದೇಶದಲ್ಲಿದೆ ಜಾಗತಿಕ ವಲಯದ ತಾಪಮಾನ 4 1/2ಡಿಗ್ರಿಯಲ್ಲಿದ್ದು ಅದು ಒಂದು ಡಿಗ್ರಿಗೆ ಇಳಿಯಬೇಕು.ಆಗ ರೈತರು ಹೆಚ್ಚು ನಿರೀಕ್ಷೆಯ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಕೃಷಿ ವಲಯ ಇಲ್ಲಿಯ ತನಕ ಸರ್ಕಾರದ ಹಿರಿತನದಲ್ಲಿತ್ತು ಈಗ ಹೆಚ್ಚು ಉತ್ಪಾದನೆ ತೆಗೆಯುವ ಘಟಕಗಳು ಖಾಸಗಿ ವಲಯಕ್ಕೆ ಕೆಲಭಾಗ ಹಸ್ತಾಂತರವಾದ ಬಳಿಕ ಹೆಚ್ಚು ಆಹಾರ ಉತ್ಪಾದನೆ ಆಗುತ್ತಿವೆ ಎಂದು ಹೇಳಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ ಜಿಲ್ಲೆಯಲ್ಲಿ ಕೃಷಿಯನ್ನು ಅವಲಂಬಿಸಿದ ರೈತರಿಗೆ ಈ ಸಂಸ್ಥೆ ಮಾರ್ಗದರ್ಶನ ನೀಡಿ ಸುಧಾರಿತ ಬೇಸಾಯ ಹೆಚ್ಚು ಬೆಳೆ ಬೆಳೆಯುವ ಪಾಠ ಕಲಿಸಿಕೊಡಲೆಂದು ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯದಲ್ಲಿ ಪ್ರಗತಿಯ ನಕಾಶೆಯಲ್ಲಿ ದಾಖಲಾಗಲು ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ರವರ ಕ್ರಿಯಾಶೀಲ ಕಾರ್ಯಶೈಲಿಕಾರಣ ಎಂದು ಹೇಳಿದರು.
ಬಸವರಾಜ್ ಪಾಟೀಲ್ ಸೇಡಂ ಮಾಜಿ ರಾಜ್ಯಸಭಾ ಸದಸ್ಯರು ಕಲಬುರ್ಗಿ ಮನೋಹರ ಮಸ್ಕಿ ಮಾಜಿ ಎಂಎಲ್ಸಿ ಮುಖ್ಯ ಭಾಷಣಕಾರರಾಗಿ ಹಿತೋಪ ದೇಶ ನೀಡಿದರು. ಸುಕೋ ಬ್ಯಾಂಕ್ ಸಹಕಾರಿ ಸಂಘದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗಿದ ವಿವರ ನೀಡಿದ ಮಸ್ಕಿಯವರು 800 ಕೋಟಿ ವ್ಯವಹಾರ ಮಾಡುವದಾದ ಚಿತ್ರಣ ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಹೇಮಲತಾ ನಾಯಕ ಎಂಎಲ್ ಸಿˌ ಕೆ. ಶರಣಪ್ಪ ಮಾಜಿ ಶಾಸಕರುˌ ರಾಜಶೇಖರ ಹಿಟ್ನಾಳˌ ವೀರಣ್ಣ ಕಮತರˌ ಕೃಷ್ಣ ಉಕ್ಕುಂದˌ ವೆಂಕಟ ರಾವಣ್ ಹೆಗಡೆˌಡಾ| ವಿ. ಸಿ. ಪಾಟೀಲˌ ವೀರಬಸಪ್ಪ ಪಟ್ಟಣಶೆಟ್ರ ಡಿ.ಎ.ಹಾಲಸಮುದ್ರˌಶೇಖರಗೌಡ್ರ ಉಳ್ಳಾಗಡ್ಡಿˌಶಂಕ್ರಪ್ಪ ಚವಡಿˌಯಂಕಣ್ಣ ಯರಾಶಿˌದೇವೀಂದ್ರಪ್ಪ ಬಳ್ಳೂಟಗಿˌಡಾ|ಅಮರೇಗೌಡ್ರ ˌಹಿರೇಗೌಡ್ರ ಯಂಕನಗೌಡ್ರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ|ಎಂ.ಬಿ.ಪಾಟೀಲರು ಮಾಡಿದರು. ವಿಜಯ ಮಹಾಂತೇಶ.ಶ. ಬಳೆಗಾರ ಕೊನೆಯಲ್ಲಿ ಒಂದಿಸಿದರು.