6f2f8ae9-4d61-46f2-8e63-8e5dcee53d13

 

ಕೊಪ್ಪಳದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ಆಡಳಿತ ವೈಫಲ್ಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,೨೨- ದೇಶ ತಲೆ ತಗ್ಗಿಸುವಂತಹ  ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.

ಅವರು ಶುಕ್ರವಾರದಂದು ನಗರದ ಅಶೋಕ ವೃತ್ತದಲ್ಲಿ ಸಂಸತ್ ಅಧಿವೇಶನದಿಂದ ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.

ಬಿಜೆಪಿ ನೇತೃತ್ವದ  ಕೇಂದ್ರ ಸರಕಾರದ ಭದ್ರತೆ ವೈಫಲ್ಯದಿಂದ ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿಯಾಗಿದೆ.ದಾಳಿ ಮಾಡಿದವರಿಗೆ ಪಾಸ್ ನೀಡಿರುವ ಸಂಸದ ಪ್ರತಾಪ್ ಸಿಂಹನ ವಿಚಾರಣೆ ಇಲ್ಲ, ಅವರ ಮೇಲೆ ಕ್ರಮ ಇಲ್ಲ. ಅಬ್ದುಲ್, ನಜೀರ್, ಖಾನ್ ಆರೋಪಿತರಾಗಿದ್ದರೆ ಅದರ ಚಿತ್ರಣವೇ ಬೇರೆ ಆಗುತ್ತಿತ್ತು. ಈ ಬಗ್ಗೆ ಮಾತನಾಡದ ಮೈಸೂರು ಸಿಂಹ ಈಗ ಕಾಡಿಗೆ ಹೋಗಿದೆ ಎಂದು ಲೇವಡಿ ಮಾಡಿದರು.

ಬದ್ರತೆ ಬಗ್ಗೆ ಪ್ರಶ್ನೀಸಿದ ಕಾಂಗ್ರಸ್‌ ಹಾಗೂ  ಮಿತ್ರ ಪಕ್ಷದ ಸಂಸದರನ್ನು ಹೊರಗೆ ಹಾಕುವ ಕೆಲಸ ಮಾಡಿದ್ದಾರೆ. ತಮ್ಮ ಲೋಪ ಮುಚ್ಚಿ ಹಾಕಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ, ಅಧಿಕಾರ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಸತ್ ಒಳಗೆ ರೈತರು, ನಿರುದ್ಯೋಗಿಗಳು, ಕಟ್ಟ ಕಡೆಯ ವ್ಯಕ್ತಿ ಬಗ್ಗೆ ಮಾತನಾಡುವ ಬದಲು, ಹೊರಗಡೆ ಕೋಮು, ರಾಮನ ಬಗ್ಗೆ ಮಾತನಾಡುತ್ತೀರಿ. ಮಣಿಪುರಕ್ಕೆ ಹೋಗಲಿಲ್ಲ. ಕುಸ್ತಿ ಪಟುಗಳಿಗೆ ಅನ್ಯಾಯವಾದರೂ ಮಾತನಾಡಿಲ್ಲ. ಪ್ರಧಾನಿ ಮೋದಿ ಕಳೆದ ಒಂಬತ್ತು ವರ್ಷದಿಂದ ಮಾದ್ಯಮದ ಮುಂದೆ ಬಂದು ಮಾತನಾಡಿಲ್ಲ. ಮನ್ ಕಿ ಬಾತ್ ನಿಂದ ದೇಶದ ಜನರ ಹೊಟ್ಟೆ ತುಂಬಲ್ಲ. ದೇಶದಲ್ಲಿ ಹಿಟ್ಲರ್ ಆಡಳಿತವಿದೆ  .

ಉಪರಾಷ್ಟ್ರಪತಿಯವರ ಬಗ್ಗೆ ಅಣಕು ಮಾಡಿದರು ಎಂದು ಸ್ಥಳೀಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಹಾಗಿದ್ದರೆ ಅಣಕು ಮಾಡುವವರನ್ನೆಲ್ಲ ದೇಶದಿಂದ ಹೊರಗೆ ಹಾಕಿ. ಅಣಕು ಮಾಡುವುದೊಂದು ಕಲೆ, ರಾಜಕೀಯ ನಾಯಕರನ್ನು ಅಣಕು ಮಾಡುವುದು ಸಹಜ. ಅವರ ಪ್ರತಿಭಟನೆ ಕಲೆಗೆ, ಕಲಾವಿದರಿಗೆ ಅವಮಾನ ಮಾಡಿದಂತೆ.‌ ಸಂಸತ್ ಭವನಕ್ಕೆ ಭದ್ರತೆ ಕೊಡಲು ವಿಫಲರಾದವರು ದೇಶಕ್ಕೇನು ಭದ್ರತೆ ನೀಡುತ್ತಾರೆ. ನೀವು ದೇಶ ಭಕ್ತರಲ್ಲ, ಮೋದಿ ಭಕ್ತರು ಎಂದು ಎಂದರು.

ಕೊಪ್ಪಳ  ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಂಸತ್ ಭವನದಿಂದ ಕಾಂಗ್ರೆಸ್ ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಿರುವ ದುರ್ಘಟನೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯ. ಪುಲ್ವಾಮಾ ದಾಳಿ, ಸಂಸದರ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಅಹಂ, ಅಹಂಕಾರ, ಮದ, ಮತ್ಸರಗಳಿಂದ ತುಂಬಿರುವ ಕೇಂದ್ರ ಸರಕಾರ ವಿರೋಧ ಪಕ್ಷದ ನಾಯಕರ ಮೇಲೆ ಇ.ಡಿ, ಸಿಬಿಐ ದಾಳಿ ಮಾಡಿಸುತ್ತಿದೆ ಬಿಜೆಪಿ ಜನ ವಿರೋದಿ ನೀತಿ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಕೇಂದ್ರ ಸರಕಾರದ ಆಡಳಿತ ವೈಫಲ್ಯವು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ. ಸಂಸತ್ ಭವನಕ್ಕೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದ್ದು, ಇದನ್ನು ಮುಚ್ಚಿಹಾಕಲು ಸಂಸದರನ್ನು ಅಮಾನತುಗೊಳಿಸುವ ಕೆಲಸ ಮಾಡಿರುವುದು ದುರಂತ ಎಂದು ಡೀಕಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣ ಇಟ್ಟಂಗಿ, ಯಂಕನಗೌಡ್ರ ಹಿರೇಗೌಡ್ರು, ಮಾನ್ವಿ ಪಾಷಾ, ಗಾಳೆಪ್ಪ ಪೂಜಾರ, ಜ್ಯೋತಿ ಗೊಂಡಬಾಳ, ಕಿಶೋರಿ ಬೂದನೂರ, ಮಾಲತಿ ನಾಯಕ್, ಸಲೀಂ ಅಳವಂಡಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!