50385563-1997-4de9-bd8b-bac9d00a559e

 ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಾಯಕರ ಅವಮಾನ 

 ಕೊಪ್ಪಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೨೧- ಉಪರಾಷ್ಟ್ರಪತಿಗೆ ಕಾಂಗ್ರೆಸ್ ನಾಯಕರ ಅವಮಾನದ ಹಿನ್ನೆಲೆ ಕೊಪ್ಪಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿದರು.

ಗುರುವಾರ  ಮಧ್ಯಾಹ್ನ   ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ  ಟಿಎಂಸಿ ರಾಜ್ಯಸಭಾ ಸದಸ್ಯ ಕಲ್ಯಾಣ ಬ್ಯಾನರ್ಜಿ ವಿರುದ್ಧ ಪ್ರತಿಭಟನೆ. ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.ಕಾಂಗ್ರೆಸ್ ವಿರುದ್ಧವು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ನಡೆದ ಘಟನೆ ದೇಶದ ಸಂವಿಧಾನ ಹುದ್ದೆಯನ್ನು ಹೊಂದಿದ ಯಾವುದೇ ಪಕ್ಷಕ್ಕೆ ಸೇರದ ವ್ಯಕ್ತಿ ಮತ್ತು ದೇಶದ ಎರಡನೆಯ ಪ್ರಜೆ ಆಗಿರುವ ಉಪ ರಾಷ್ಟ್ರಪತಿಗಳಾದ  ಜಗದೀಶ್ ಧನಕರ್ ಇವರ ಬಗ್ಗೆ ಅಣುಕು ಪ್ರದರ್ಶನವನ್ನು ಲೋಕಸಭೆ ಸಂಸದರ ಭವನ ಮುಂದೆ ಮಾಡಿದ್ದು ಇಡೀ ದೇಶಕ್ಕೆ ಅಪಮಾನ ಮಾಡಿದ ಸಂಕೇತ ತಕ್ಷಣ ರಾಹುಲ್ ಗಾಂಧಿ ಮತ್ತು ಇತರ ಸಂಸದರು ದೇಶದ ಜನತೆಗೆ ಕ್ಷಮೆ ಕೋರಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ  ಬಳ್ಳಾರಿ ವಿಭಾಗ ಸಹ ಪ್ರಬಾರಿ ಚಂದ್ರಶೇಖರ್ ಪಾಟೀಲ್ ಹಲಗೇರಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ನರಸಿಂಗರಾವ್ ಕುಲಕರ್ಣಿ.ರಮೇಶ್ ನಾಡಿಗೇರಿ. ಶ್ರೀಮತಿ ಮಂಜುಳಾ ಅಂಬರೀಶ್ ಕರಡಿ.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಶಿವುಕುಮಾರ್ ಅರಿಕೇರಿ. ನಗರ ಅಧ್ಯಕ್ಷರು ಸುನೀಲ.ಜಿಲ್ಲಾ ವಕ್ತಾರರು ಮಹೇಶ್ ಅಂಗಡಿ. ಉಮೇಶ್ ರವಿಚಂದ್ರನ್. ಪುಟ್ಟರಾಜ.ಮಹಾಲಕ್ಷ್ಮಿ ಕಂದಾರಿ.ಅಮಿತ್ ಕಂಪ್ಲೆೇಕರ್.ಪಂಪಯ್ಯ. ಅವಿನಾಶ್.ರಾಜು ವಸ್ತ್ರದ.ಗವಿರಾಜ್. ಕಂಠಯ್ಯ ಹಿರೇಮಠ್. ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು

 

Leave a Reply

Your email address will not be published. Required fields are marked *

error: Content is protected !!