
ಕೊಪ್ಪಳದಲ್ಲಿ ಮುಂದುವರೆದ ಕಳ್ಳರ ಕೈಚಳಕ
ರವಿವಾರ ರಾತ್ರಿ ಮೂರು ಮನೆಗೆ ಕನ್ನ
ಮನೆಯಲ್ಲಿದ್ದ ಭಾರಿ ಪ್ರಮಾಣದ ಬಂಗಾರ – ನಗದು ಕಳ್ಳತನ
ಕರುನಾಡು ಬೆಳಗು ಸುದ್ದಿ
ಕೊಪ್ಪಳ, 18- ನಗರದ ಕಿನ್ನಾಳ ರಸ್ತೆಯ ಎಫ್. ಸಿ.ಐ ಗೋಡೊನ ಎದುರುಗಡೆ ಇರುವ ಉಲ್ಲಾಸ್ ವೆಂಕಟೇಶ ರಾಯ್ಕರ್ ಅವರ ಮನೆ ಸೇರಿದಂತೆ ಮೂರು ಮನೆ ಕಳ್ಳತನ ವಾಗಿದ್ದು ಭಾರಿ ಪ್ರಮಾಣದ ಬೆಳ್ಳಿ – ಬಂಗಾರ ಕಳ್ಳತನ ವಾದ ಘಟನೆ ಜರುಗಿದೆ.
ರವಿವಾರ ತಡರಾತ್ರಿ ಈ ಘಟನೆ ನಡೆದಿರಭಹುದೆಂದು ಶಂಕಿಸಲಾಗಿದೆ ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ಕಳ್ಳತನ ವಾಗಿದೆ.
ಬಂಗಾರದ ಅಂಗಡಿ ಮಾಲಿಕ ಉಲ್ಲಾಸ ಅವರ ಮನೆಯಲ್ಲಿ ಸುಮಾರು 50 ತೋಲೆ ಬಂಗಾರ ಹಾಗೂ ಐವತ್ತು ಸಾವಿರ ರೂ ಹಣ ಕಳ್ಳತನವಾಗಿರ ಬಹುದು ಎಂದು ಪ್ರಾಥಮಿಕ ಹಂತದಲ್ಲಿ ತಿಳಿದು ಬಳದಿದೆ.
ಉಲ್ಲಾಸ ಅವರು ಇತ್ತೀಚೆಗೆ ಬಂಗಾರ ಅಂಗಡಿ ಪ್ರಾರಂಭಿಸಿದ್ದರು. ಹೊಸ ಅಂಗಡಿಯಲ್ಲಿ ಲಾಕರ್ ಇರದೆ ಇರುವ ಕಾರಣ ಮನೆಯಲ್ಲಿ ಬಂಗಾರ ಹಾಗೂ ಹಣ ಇಟ್ಟಿದ್ದರು ಮನೆಯಲ್ಲಿ ಎಲ್ಲರೂ ಊರಿಗೆ ಹೋಗಿದ್ದರು ಎನ್ನಲಾಗಿದೆ.
ನಗರ ಠಾಣೆಯ ಪೋಲಿಸ್ ರು ಮನೆಗೆ ಬೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.