IMG_20240122_133156

ಬ್ರಾಹ್ಮಣ ಸಮಾಜದಿಂದ ಸಂಭ್ರಮದ ರಾಮೋತ್ಸವ

ಶತಕೋಟಿ ರಾಮತಾರಕ ನಾಮಜಪ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ ಈ ಸಮಯದಿಂದ ಸಮಸ್ತ ಹಿಂದೂಗಳ ಭಾಗ್ಯದ ಬಾಗಿಲು ತೆರೆದಂತಾಗಿದೆ. ನಮ್ಮ ದೇಶದಲ್ಲಿ ನಾವು ಹಿಂದೂಗಳು‌ ಎಂದು ಹೇಳಿಕೊಳ್ಳಲು ಕಷ್ಟ ಎನ್ನುವ ಪರಿಸ್ಥಿತಿಯಿತ್ತು. ಈ ದಿನ ಬಂದಿರುವುದು ನಮ್ಮೆಲ್ಲರ ಭಾಗ್ಯ. ರಾಮ ಅವತಾರ ಪುರುಷ’ ಎಂದು ರಾಯರ ಮಠದ ಮುಖ್ಯಅರ್ಚಕ ರಘು ಪ್ರೇಮಾಚಾರ್  ಹುನುಗುಂದ ಹೇಳಿದರು
ಅವರು ಅಖಿಲ‌ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದಲ್ಲಿ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞ ಮತ್ತು ಶ್ರೀರಾಮ ತಾರಕ ಮಹಾಯಾಗ ನಡೆಯಿತು.   ಅಯೋಧ್ಯೆಯಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಇಲ್ಲಿಯೂ ಶತಕೋಟಿ ರಾಮತಾರಕ ನಾಮಜಪದ ಪೂರ್ಣಾಹುತಿ ನಂತರ ಮಾತನಾಡಿದರು.

ಭಗವಂತ ರಾಮನಾಗಿ ಅವತರಿಸಿ ಲೋಕ ಶಿಕ್ಷಣ ನೀಡಲು ಬಂದಿದ್ದಾನೆ. ಸಮಗ್ರ ರಾಮಾಯಣ ಅಧ್ಯಯನ ಮಾಡಿದರೆ ಲೋಕ ಶಿಕ್ಷಣ ಗೊತ್ತಾಗುತ್ತದೆ. ಉಳಿದ ಶಿಕ್ಷಣದ ಜೊತೆಗೆ ರಾಷ್ಟ್ರ ಭಕ್ತಿ ಹೇಗಿರಬೇಕು ಎನ್ನುವುದನ್ನು ರಾಮ ಹೇಳುತ್ತಾನೆ. ರಾಮ ತನ್ನ ಜನ್ಮಭೂಮಿಯ ಬಗ್ಗೆ ಹೇಳುವ ಮಾತು ಎಲ್ಲರಿಗೂ ಮಾದರಿ. ದೇವರು ಕೊಟ್ಟಿದ್ದನ್ನು‌ ನಾಲ್ಕು ಜನರಿಗೆ ಹಂಚಿದರೆ ಮಾತ್ರ ಪಡೆಯುವ ಭಾಗ್ಯ ಸಿಗುತ್ತದೆ. ಹಂಚಿ‌ಜೀವನ ಮಾಡುವುದು ಮನುಷ್ಯ‌ ಜನ್ಮದ ಸಾರ್ಥಕತೆ. ಇದು ರಾಮ ಕೊಟ್ಟ ಸಂದೇಶ’ ಎಂದರು.

ರಾಮ ಆದರ್ಶ ಪುರುಷ ಎಂದರೂ ಕೆಲವರು ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದಾರೆ. ಆಕ್ಷೇಪ ಮಾಡುವವರು ಓದಬೇಕಿಲ್ಲ. ಉತ್ತರ ಕೊಡಬೇಕಾದವರು ಓದಬೇಕಾದ ಕಾರಣ ಎಲ್ಲರೂ ರಾಮನ ಬದುಕಿನ ಕುರಿತು ತಿಳಿದುಕೊಂಡು ಉತ್ತರ ಕೊಡಬೇಕು. ರಾವಣ ಕೂಡ ತಪ್ಪಸ್ಸು ಮಾಡಿದ್ದ. ಆದರೆ ಮಾಡಿದ ಉದ್ದೇಶ ಸರಿಯಿಲ್ಲದ ಕಾರಣ ಯಾರೂ ರಾವಣನ ಮೂರ್ತಿ ಪ್ರತಿಷ್ಠಾನ ಮಾಡಿಲ್ಲ. ಕೆಟ್ಟ ಉದ್ದೇಶದಿಂದ ಮಾಡಿದ ಯಾವ ಕೆಲಸವೂ ಯಶಸ್ಸು ಆಗುವುದಿಲ್ಲ. ಜಗತ್ತಿನಲ್ಲಿ‌ ನಾವು ಹೇಗೆ ಇರಬೇಕು ಎನ್ನುವುದನ್ನು ರಾಮನಿಂದ ಕಲಿಯಬೇಕು ಎಂದರು.

ಪಂಡಿತ್‌ ಪ್ರಮೋದಾಚಾರ್ ಮಾತನಾಡಿ ನಮ್ಮದು‌ ಹನುಮನ‌ನಾಡು, ರಾಮ ಇಲ್ಲಿ ಬಂದು ಇಲ್ಲಿ ಓಡಾಡಿದ್ದಾನೆ. ನಾವೇ ಪುಣ್ಯವಂತರು. ಎಲ್ಲರನ್ನೂ ಪ್ರೀತಿಸಬೇಕು, ಗೌರವದಿಂದ ಕಾಣಬೇಕು, ರಾಮ ತನಗಾಗಿ ದುಡಿದು ಹಾಗೂ ಮಡಿದವರಿಗೆ ಸಂಸ್ಕಾರ ಮಾಡಿದ್ದಾನೆ. ಪ್ರಾಮಾಣಿಕ ಭಕ್ತಿ ಹಾಗೂ ಶಕ್ತಿ ಮುಖ್ಯ’ ಎಂದರು.

ರಾಮ ಆದರ್ಶ ಪುರುಷ ಎಂದರೂ ಕೆಲವರು ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದಾರೆ. ಆಕ್ಷೇಪ ಮಾಡುವವರು ಓದಬೇಕಿಲ್ಲ. ಉತ್ತರ ಕೊಡಬೇಕಾದವರು ಓದಬೇಕಾದ ಕಾರಣ ಎಲ್ಲರೂ ರಾಮನ ಬದುಕಿನ ಕುರಿತು ತಿಳಿದುಕೊಂಡು ಉತ್ತರ ಕೊಡಬೇಕು. ರಾವಣ ಕೂಡ ತಪ್ಪಸ್ಸು ಮಾಡಿದ್ದ. ಆದರೆ ಮಾಡಿದ ಉದ್ದೇಶ ಸರಿಯಿಲ್ಲದ ಕಾರಣ ಯಾರೂ ರಾವಣನ ಮೂರ್ತಿ ಪ್ರತಿಷ್ಠಾನ ಮಾಡಿಲ್ಲ. ಕೆಟ್ಟ ಉದ್ದೇಶದಿಂದ ಮಾಡಿದ ಯಾವ ಕೆಲಸವೂ ಯಶಸ್ಸು ಆಗುವುದಿಲ್ಲ. ಜಗತ್ತಿನಲ್ಲಿ‌ ನಾವು ಹೇಗೆ ಇರಬೇಕು ಎನ್ನುವುದನ್ನು ರಾಮನಿಂದ ಕಲಿಯಬೇಕು ಎಂದರು.

ರಾಜ್ಯ ಪುರೋಹಿತ ಹಾಗೂ ಅರ್ಚಕರ ಸಂಘದ ಜಿಲ್ಲಾ ಅಧ್ಯಕ್ಷ ಸುನೀಲ್ ವೈದ್ಯ, ಬ್ರಾಹ್ಮಣ ಸಮಾಜದ ಮುಖಂಡರಾದ ನಾಗರಾಜ ಸಿದ್ದಾಂತಿ‌ ವಕೀಲರು, ಪ್ರಾಣೇಶ ಮಾದಿನೂರು, ಮಧುರಾ ಕರಣಂ, ಕುಸುಮಾ ಶಾರದಾ, ಹನುಮಂತರಾವ್ ದೇಶಪಾಂಡೆ, ಗೋವಿಂದಾಚಾರ್ ಬಾದರ್ಲಿ, ವಸಂತ ಪೂಜಾರ, ಶ್ರೀಕೃಷ್ಣ ಪದಕಿ, ವೇಣುಗೋಪಾಲಚಾರ್ ಜಹಗೀರದಾರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!