IMG_20231105_180503

ಸಾಹಿತಿ ‘ಅಕ್ಬರ್ ಕಾಲಿಮಿರ್ಚಿ ಸಾಹಿತ್ಯ ಮತ್ತು ಸಾಂಸ್ಕೃತಿಕ        ಅನುಸಂಧಾನ 

ಮೂರು ದಶಕಗಳ ಇವರ ಕಾವ್ಯಯಾನದಲ್ಲಿ ಗ್ರಾಮೀಣ ಭಾರತದ ಸಂವೇದನೆ ಇದೆ – ಡಾ. ಜಾಜಿ ದೇವೇಂದ್ರಪ್ಪ

ಕರುನಾಡ ಬೆಳಗು ಸುದ್ದಿ

ಕೊಪ್ಪಳ ,  05- ಸಾಹಿತಿ ‘ಅಕ್ಬರ್ ಕಾಲಿಮಿರ್ಚಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನುಸಂಧಾನ’ ಸಮಾರಂಭದಲ್ಲಿ ಒಟ್ಟು ಆರು ಗೋಷ್ಠಿ ಗಳು ಜರುಗಿದವು. ನಾಡಿನ ಸಾಹಿತ್ಯ ಲೋಕದ ವಿವಿಧ ಗಣ್ಯಮಹನೀಯರು ಗೋಷ್ಠಿಗಳಲ್ಲಿ ತಮ್ಮ ವಿಚಾರ ಪ್ರಸ್ತುತ ಪಡಿಸಿದರು.

ಅಕ್ಬರ್ ಕಾಲಿಮಿರ್ಚಿ ‘ಕಾವ್ಯ : ವರ್ತಮಾನದ ಪ್ರಜ್ಞೆ ಮತ್ತು ಮನುಷ್ಯ ಸಂಬಂಧಗಳು’ ಕುರಿತು ಗಂಗಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾಜಿ ದೇವೇಂದ್ರಪ್ಪ ಅವರು ಮಾತನಾಡಿ ಕಾಲಿಮಿರ್ಚಿಯವರು ಕಾವ್ಯ ರಚನೆಯಲ್ಲಿ ಯಾವುದೇ ಸಿದ್ದಾಂತಕ್ಕೆ ಜೋತು ಬೀಳದೆ, ರೆಬೆಲ್ ಮಾದರಿ ಅನುಸರಿಸದೆ ತಣ್ಣನೆಯ ಪ್ರತಿರೋಧ ಗುಣ ಇವರ ಕಾವ್ಯದಲ್ಲಿದೆ.

ಕಾವ್ಯ ಹೇಗೆ ಧಾನ್ಯಸ್ಥ ರೂಪವೊ ಇವರ ಕಾವ್ಯ ಸಂಕಲನದ ಶೀರ್ಷಿಕೆಗಳು ಧ್ಯಾನಸ್ಥ ಭಾವ ಹೊಂದಿವೆ.
ಮೂರು ದಶಕಗಳ ಇವರ ಕಾವ್ಯಯಾನದಲ್ಲಿ ಗ್ರಾಮೀಣ ಭಾರತದ ಸಂವೇದನೆ ಇದೆ ಎಂದರು.

ಅಕ್ಬರ್ ಕಾಲಿಮಿರ್ಚಿ ‘ಲೇಖನಗಳು : ಆಶಯ ಮತ್ತು ಅಭಿವ್ಯಕ್ತಿ ‘ ಕುರಿತು ಕೃಷಿ ಇಲಾಖೆ ಉಪನಿರ್ದೇಶಕ ಸಹದೇವ ಯರಕೊಪ್ಪ ಮಾತನಾಡಿ ಕಾಲಿಮಿರ್ಚಿಯವರ 30 ಕೃತಿಗಳ ರಚನೆ ನಂತರ ಅವುಗಳ ಅನುಸಂಧಾನ ಸಮಾರಂಭ ನಡೆಯುತ್ತಿರುವುದು ಸಂತಸ. ಪ್ರಸ್ತುತ ಕಾಲಘಟ್ಟದ ಹತ್ತಾರು ಸಮಸ್ಯೆ ಸಂಕಟಗಳ ಬಗ್ಗೆ ನೇರವಾಗಿ ಸ್ಪಷ್ಟವಾಗಿ ಅಭಿವ್ಯಕ್ತಿಸಿದ್ದಾರೆ. ಕವಿ, ಬರಹಗಾರ ಸಾಮಾಜಿಕ ನೋವು, ಮಾತು ಕೇಳಿಸಿಕೊಳ್ಳುವುದು ಹೆಚ್ಚಿದಂತೆ ಮಾಗುತ್ತ ಹೋಗುತ್ತಾನೆ. ಆಗ ಉತ್ಕೃಷ್ಟ ಸಾಹಿತ್ಯ ರಚನೆ ಸಾಧ್ಯ ಎಂದರು.

ಅಕ್ಬರ್ ಕಾಲಿಮಿರ್ಚಿ ‘ ಕಥಾ ಸಾಹಿತ್ಯ : ಸಮಾಜಮುಖಿ ನೆಲೆಗಳು ‘ ಕುರಿತು ಧಾರವಾಡ ವಿದ್ಯಾ ಶಿಕ್ಷಣ ಸಮಿತಿ ಪ್ರಾಚಾರ್ಯರಾದ ಡಾ. ಶರಣಮ್ಮ ಗೊರೆಬಾಳ ಮಾತನಾಡಿ ಕತೆಗಾರ ಕಾಲಿಮಿರ್ಚಿ ಹಿಂದು ಮುಸ್ಲಿಂ ಸಂಸ್ಕೃತಿ ಅರಿತು ಕತೆ ರಚಿಸಿದ್ದಾರೆ. ಸಾಮಾಜಿಕ ಸಮಸ್ಯೆಗಳ ದುಖ ನೋವು ಹತಾಶೆ ಆಸೆ ಕನಸುಗಳ ದಟ್ಟ ಭಾವನೆಗಳ ವಾಸ್ತವ ನೆಲೆಗಟ್ಟಿನಲ್ಲಿ ಕತೆಗಳು ಒಡಮೂಡಿವೆ.‌ ಸಮಾಜ ಮುಖಿ ಕತೆ ಹಂದರ ಇವರ ಕತೆಗಳ ವಿಶೇಷತೆ.

ಎಲ್ಲ ಪ್ರಕಾರದ ಸಾಹಿತ್ಯ ರಚಿಸಿದ ಕಾಲಿಮಿರ್ಚಿಯವರ ಆತ್ಮಕತೆ ಬರಲಿ ಎಂದರು.

ಅಕ್ಬರ್ ಕಾಲಿಮಿರ್ಚಿ ‘ ಬದುಕು ವ್ಯಕ್ತಿತ್ವ : ಕೆಲವು ಗ್ರಹಿಕೆಗಳು’ ಕುರಿತು ಪಯೋನಿಯರ್ ಸ್ಕೂಲ್ ಪ್ರಾಚಾರ್ಯ ದತ್ತಾತ್ರೇಯ ಸಾಗರ, ಕಾಲಿಮಿರ್ಚಿ ‘ ಸೃಜನೇತರ ಸಾಹಿತ್ಯ : ಜೀವಪರ ನಿಲುವುಗಳು’ ಕುರಿತು ಹೊಸಪೇಟೆ ಪ್ರಾಧ್ಯಾಪಕ ಡಾ. ಸಂಗಮೇಶ ಗಣಿ, ಕಾಲಿಮಿರ್ಚಿ ‘ಮಕ್ಕಳ ಸಾಹಿತ್ಯದ ನೈತಿಕ ನೋಟಗಳು’ ಕುರಿತು ಹೆಬಸೂರಿನ ಉಪನ್ಯಾಸಕ ರಮಜಾನ ಕಿಲ್ಲೆದಾರ ಮಾತನಾಡಿದರು.

ಈ ಸಂದರ್ಭದಲ್ಲಿ ಛಾಯಾಗ್ರಹಣದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಕಾಶ ಕಂದಕೂರ, ಕಸಾಪ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೆಹಬೂಬ ಮಠದ, ಲಾಡ್ಲಿ ಮೀಡಿಯಾ ಅವಾರ್ಡ್ ಪುರಸ್ಕೃತ ಪತ್ರಕರ್ತ ಹುಸೇನ ಪಾಷಾ, ಶ್ರೀಕೃಷ್ಣದೇವರಾಯ ವಿವಿ ಸಂಶೋಧನಾ ವಿದ್ಯಾರ್ಥಿನಿ ಕು.ಹನುಮಂತಮ್ಮ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಾಹಿತಿ ವಿಜಯಲಕ್ಷ್ಮಿ ಕೊಟಗಿ ಉಪಸ್ಥಿತರಿದ್ದರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಸಂಕನಗೌಡರ ಸ್ವಾಗತಿಸಿದರು. ಮೈಲಾರಗೌಡ ಹೊಸಮನಿ ನಿರೂಪಿಸಿದರು. ಡಾ. ಸಂಗಮೇಶ್ವರ ಪಾಟೀಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!