IMG20240716122836

ಕೋಚಿಂಗ್ ಸೆಂಟರ್ ಪುನಃ ಆರಂಭಿಸಲು ಹೈ-ಕ ಯುವ ಸಂಘಟನೆ ಒತ್ತಾಯ

ಇತ್ತೀಚೆಗೆ ಕುಷ್ಟಗಿ ತಾಲೂಕಿನ ಒಟ್ಟು ೨೭ ಕೋಚಿಂಗ್ ಸೆಂಟರ್ ಗಳನ್ನು ಅನಧಿಕೃತ ಕೋಚಿಂಗ್ ಸೆಂಟರ್ ಎಂದು ಮುಚ್ಚಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳ, ನಿರುದ್ಯೋಗಿ ಯುವಕರ, ಬಡ ಪಾಲಕರ ಮಕ್ಕಳ ಪರಿಸ್ಥಿತಿ ಗಂಭೀರವಾಗಿದ್ದು ಕೂಡಲೇ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕೋಚಿಂಗ್ ಸೆಂಟರ್ ಗಳನ್ನು ಪುನಃ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಹೈದ್ರಾಬಾದ-ಕರ್ನಾಟಕ ಯುವಶಕ್ತಿ ಸಂಘಟನೆ ಒತ್ತಾಯಿಸಿದೆ. 

ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆ ಸಂಸ್ಥಾಪಕ ಬಸವರಾಜ ಗಾಣಿಗೇರ, ಕಿರಣ.ಡಿ. ಜ್ಯೋತಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ಇದುವರೆಗೂ ಯಾವುದೇ ಕೋಚಿಂಗ್ ಸೆಂಟರ್ ಕುರಿತು ದೂರು ಇಲ್ಲದೇ ಇದ್ದರೂ ನಮ್ಮ ತಾಲೂಕಿನಲ್ಲಿ ಬಂದ್ ಮಾಡಲಾಗಿದೆ. ಇದರಿಂದ ಬಡ ಮದ್ಯಮ, ಕೃಷಿ ಕೂಲಿ ಕಾರ್ಮಿಕ ಮಕ್ಕಳಿಗೆ ತೊಂದರೆಯಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ನಮ್ಮದು. ವಿವಿಧ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಲಿ ಎಂಬ ಉದ್ದೇಶದಿಂದ ಕೋಚಿಂಗ್ ಗೆ ಪಾಲಕರು ಸೇರಿಸುತ್ತಾರೆ. ಆದರೆ ಈಗ ಅನಧಿಕೃತ ಅಂತ ಬಂದ್ ಆಗಿದ್ದು ಎಲ್ಲರಿಗೂ ತೊಂದರೆ, ಮಕ್ಕಳ ಕನಸು ಭಗ್ನವಾಗಿದೆ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಕ್ಕಿದ್ದರೆ ಕೋಚಿಂಗ್ ಸೇರುವ ಅವಶ್ಯಕತೆಯೇ ಇರಲಿಲ್ಲ. ಇದೊಂದು ವರ್ಷ ಇಲಾಖೆ ನಿಯಮಾವಳಿ ಪ್ರಕಾರ ಕೋಚಿಂಗ್ ಅವರಿಗೆ ಅವಕಾಶ ಮಾಡಿಕೊಡಿ ಎಂಬುದು ನಮ್ಮ ಉದ್ದೇಶ. 

ಇತ್ತೀಚೆಗೆ ಶಾಸಕ ರಾಯರೆಡ್ಡಿ ಯವರಿಂದ ಅಲಿಖಿತ ನಿರ್ಧಾರ ಕೈಗೊಳ್ಳಲಾಗಿದೆ. ಯಲಬುರ್ಗಾದಲ್ಲಿ ಅವರ ತಾಲೂಕಿನವರಿಗೆ ೭೫% ಪ್ರವೇಶಾತಿ ಎನ್ನುವಂತೆ ರೂಪಿಸಿದ್ದಾರೆ. ಈ ನಿಯಮವನ್ನು ಹಿಂಪಡೆಯಬೇಕು ಎಂಬುದು ನಮ್ಮ ಒತ್ತಾಯ. 

ಎಲ್ಲಾ ರಂಗದಲ್ಲೂ ಸ್ಪರ್ದಾತ್ಮಕತೆ ಹೆಚ್ಚು ಇದ್ದು ಅದರಲ್ಲೂ ಶಿಕ್ಷಣ ರಂಗ ಹೊರತಾಗಿಲ್ಲ. ಇಡೀ ರಾಜ್ಯಾಧ್ಯಂತ ಕೋಚಿಂಗ್ ಸೆಂಟರ್ ಇದ್ದರೂ ನಮ್ಮ ತಾಲೂಕಿಗೆ ಮಾತ್ರ ಯಾಕೆ ಬಂದ್ ಮಾಡಿದ್ದೀರಿ? ಇದನ್ನು ಪರಿಶೀಲಿಸಿ. ಬಡವರು ನಿರುದ್ಯೋಗಿ ಪದವೀಧರರು ಕೋಚಿಂಗ್ ಅವಲಂಬನೆ ಹೊಂದಿದ್ದು ಅವರ ಗತಿ ಏನು? ತಮ್ಮ ಪಾಡಿಗೆ ತಾವು ಕೋಚಿಂಗ್ ನಡೆಸುವ ನಿರುದ್ಯೊಗಿಗಳ ಮೇಲೆ ದಬ್ಬಾಳಿಕೆ ಏಕೆ? ಕೋಚಿಂಗ್ ನವರಿಗೆ ಅವಕಾಶ ಮಾಡಿಕೊಡಿ. ಮುಂದೆ ಸರಕಾರದ ನಿಯಮಾವಳಿಯಂತೆ ಪರವಾನಿಗೆ ಪಡೆದು ಆರಂಭಿಸಲು ಅವಕಾಶ ನೀಡಬೇಕು ಎಂದರು. 

ಅದೇ ರೀತಿ ಸರಕಾರಿ ಶಾಲೆಯಲ್ಲಿ ಎಲ್ ಕೆಜಿ ಯುಕೆಜಿ ಸರಕಾರಿ ಶಾಲೆಯಲ್ಲಿ ಆರಂಭಿಸಬೇಕು. ನುರಿತ ಶಿಕ್ಷಕರಿಂದ ಮಾಡಲಾಗುತ್ತದೆಯೊ, ಅಥವಾ ಅಂಗನವಾಡಿ ನಿರ್ವಾಹಕರಿಂದ ಮುನ್ನಡೆಸಲಾಗುತ್ತದೆ ಎಂಬುದು ಸ್ಪಷ್ಟತೆ ಇಲ್ಲ. ಮಕ್ಕಳ ಶಿಕ್ಷಣ ಬಹಳ ಮುಖ್ಯವಾಗಿದ್ದು, ನರ್ಸರಿ, ಎಲ್.ಕೆ.ಜಿ, ಯುಕೆಜಿ ಹೀಗೆ ಒಂದೇ ಅಂಗನವಾಡಿ ಕಟ್ಟಡದಲ್ಲಿ ಹೇಗೆ ಮುಂದುವರೆಸುವಿರಿ? ಎಂಬುದು ಪಾಲಕರ ವಾದವಾಗಿದೆ. ಇದಕ್ಕೆ ಅಂತ ಕಟ್ಟಡ ಬೇಕಾಗುತ್ತದೆ. ಅದನ್ನು ನಿಭಾಯಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಹಾಗೂ ಸಚಿವ ಮಧು ಬಂಗಾರಪ್ಪ ಆವರು ಸರಿಯಾಗಿ ರೂಪಿಸಿ ಜಾರಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು. 

ಸರಕಾರಿ ಶಾಲಾ ಶಿಕ್ಷಕರ ಮಕ್ಕಳು ದಾಖಾಲಾತಿ ಸರಕಾರಿ ಶಾಲೆಯಲ್ಲಿ!! ಕಲಿಕೆ ಕೋಚಿಂಗ್ ಸೆಂಟರ್ ನಲ್ಲಿ !!! ಬಿಇಓ ಅವರಿಗೆ ಕ್ರಮಕ್ಕೆ ಒತ್ತಾಯ 

ತಾಲೂಕಿನಾಧ್ಯಂತ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿವ ಶಿಕ್ಷಕರ ಮಕ್ಕಳು ಗ್ರಾಮೀಣ, ಕನ್ನಡ ಮಾದ್ಯಮ, ೩೭೧ಜೆ ಮೀಸಲಾತಿ ಪಡೆಯುವ ದುರುದ್ದೇಶದಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ದಾಖಲಿಸಿ ಕಲಿಕೆಗಾಗಿ ಕೋಚಿಂಗ್ ಸೆಂಟರ್ ಗಳಲ್ಲಿ ಸೇರಿಸಿದ್ದಾರೆ. ಇಂತವರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಲು ಸ್ಥಳೀಯ ಬಿಇಓ ರವರಿಗೆ ಮನವಿ ಮಾಡಲಾಗಿದೆ. ಮುಂದೆಯೂ ನಮ್ಮ‌ ಸಂಘಟನೆಯಿಂದ ಇಂಥವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುವುದು ಎಂದರು.

ಕೋಚಿಂಗ್ ಶುಲ್ಕಕ್ಕೆ ಕಡಿವಾಣ ಅಗತ್ಯ:

ಪಟ್ಟಣದಲ್ಲಿ ನಡೆಸುತ್ತಿರುವ ವಸತಿ ಶಾಲೆಗಳ ಕೋಚಿಂಗ್ ಸೆಂಟರ್ ಗಳು ಮನಬಮದಂತೆ ಶುಲ್ಕ ವಸೂಲಿಗೆ ಇಳಿದಿದ್ದು ಕೂಡ ಬಡ ಪಾಲಕರಿಗೆ ಹೊರೆಯಾಗಿದೆ. ಈ ನಿಟ್ಟಿನಲ್ಲಿ ಕೋಚಿಂಗ್ ಸೆಂಟರ್ ಗಳು ತಮ್ಮ ಕಚೇರಿಯಲ್ಲಿ ಅಧಿಕೃತವಾಗಿ ಶುಲ್ಕ ನಾಮಮಫಲಕ ಹಾಕುವುದು ಕಡ್ಡಾಯವಾಗಿದೆ ಈ ಬಗ್ಗೆ ಕೂಡ ಕ್ರಮಕ್ಕೆ ಬಿಇಓರವರಿಗೆ ಒತ್ತಾಯಿಸಲಾಗಿದೆ ಎಂದರು. 

Leave a Reply

Your email address will not be published. Required fields are marked *

error: Content is protected !!