
ಕ್ಯಾನ್ಸರ್ ದಿನಾಚರಣೆಯ ಹಾಗೂ ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು ಮತ್ತು ಸ್ಕ್ರೀನ್ನಿಂಗ್ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ವಿಶ್ವ ಕ್ಯಾನ್ಸರ್ ಅರಿವು ಮೂಡಿಸುವ ದಿನ ಮತ್ತು ಸಪ್ತಾಹದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ ಮುನಿರಾಬಾದ, ಕೊಪ್ಪಳ, ಕಲಬುರಿಗಿಯ ಶ್ರೀ ಸ್ವಾಮೀ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರ್ರೀಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ, ಕೋಪ್ಪಳ ಮತ್ತು ಕೊಪ್ಪಳದ ಶ್ರೀ ರೇಣುಕಾ ಡೈಜಿನೊಸ್ಟಿಕ್ಸ್ ಅಂಡ್ ಆರ್. ಸಿ ಇವರ ಸಂಯುಕ್ತಾಶ್ರಯದಲ್ಲಿ ಸತತವಾಗಿ ಮೂರನೇ ವರ್ಷ ವಿಶ್ವ ಕ್ಯಾನ್ಸರ್ ದಿನಾಚರಣೆಯ ಹಾಗೂ ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು ಮತ್ತು ಸ್ಕ್ರೀನ್ನಿಂಗ್ ಕಾರ್ಯಕ್ರಮ ಜರುಗಿತು, ಜನರ ಉಚಿತ ತಪಾಸಣೆ ಮಾಡಲಾಗಿ, ಮಹಿಳೆಯರ ಸರ್ವಿಕಲ್ ಪ್ಯಾಪ್ ಸ್ಮಿಯರ್ ಸ್ಟಡಿ ಮಾಡಲಾಯಿತು.
ತಂಬಾಕು ಬಳಕೆ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಪರಿಸರ ಮಾಲಿನ್ಯ, ಬದಲಾದ ಇಂದಿನ ಜೀವನಶೈಲಿ ಕಾನ್ಸರ್ ರೋಗಕ್ಕೆ ಕಾರಣಗಳೆಂಬ ವಿಷಯ ತಿಳಿಸಲಾಯಿತು.
ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು. ಕ್ಯಾನ್ಸರ್ ತಡೆಗಟ್ಟುವ, ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚುವ ಹಾಗೂ ರೋಗವನ್ನು ಪತ್ತೆ ಹಚ್ಚಿ ಚಿಕೆತ್ಸೆ ನೀಡುವ ಕುರಿತು ಪರಿಣಿತರಿಂದ ಅರಿವು ಮೂಡಿಸಲಾಯಿತು.
ಇಂದು ಸಮುದಾಯ ಆರೋಗ್ಯ ಕೇಂದ್ರ ಮುನಿರಾಬಾದನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಆಚರಣೆ ಮತ್ತು ಕ್ಯಾನ್ಸರ್ ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ ಟಿ ಲಿಂಗರಾಜು ಅವರ ಪ್ರೋತ್ಸಾಹದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ತಪಾಸಣಾ ಶಿಬಿರ ಮಾಡಲಾಯಿತು.
ಘೋಷ ವಾಕ್ಯ : ಆರೈಕೆಯ ಅಂತರವನ್ನು ಮುಚ್ಚಿ ದಿನಾಚರಣೆಯ ಅಂಗವಾಗಿ ಡಾ .ಕೆ.ಹೆಚ್.ತೊಗರಿ ಮಾನ್ಯ ಆಡಳಿತ ವೈದ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಡಾ.ಅನಿರುದ್ಧ ಕುಷ್ಟಗಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ರೋಗನಿದಾನ ಶಾಸ್ತ್ರ ವಿಭಾಗ ಕಿಮ್ಸ್, ಕೊಪ್ಪಳ, ಡಾ.ರಾಜಶೇಖರ ಮಕ್ಕಳ ತಜ್ಞರು ಹಾಗೂ ಡಾ.ಪುಷ್ಪಾವತಿ ದಂತ ತಜ್ಞರ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಕ್ಯಾನ್ಸರ್*ತಪಾಸಣಾ ಶಿಬಿರ ಹಮ್ಮಿಕೊಂಡು ಒಟ್ಟು 105 ಜನರಿಗೆ ಹೊರರೋಗಿ ತಪಾಸಣೆ ಮಾಡಿ ಇದರಲ್ಲಿ ಗರ್ಭಕಂಠ ಕ್ಯಾನ್ಸರ್ ತಪಾಸಣೆಯನ್ನು 24 ಜನರಿಗೆ ಮಾಡಿ ಇದರಲ್ಲಿ 8 ಜನರಿಗೆ ಪ್ಯಾಪ್ ಸ್ಮಿಯರ್ ಟೆಸ್ಟ್ ಮಾಡಲಾಯಿತು ಮತ್ತು ದಂತ ಹೊರರೋಗಿ ತಪಾಸಣೆ ಯನ್ನು 23ಜನರಿಗೆ ಮಾಡಲಾಯಿತು, ಸ್ಥನದ ಕ್ಯಾನ್ಸರ್ ಬಗ್ಗೆ ಅರಿವು ಹಾಗೂ ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂಧಿಗಳು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಶ್ವಿ ಮಾಡಿದರು.