
ಶ್ರೀನಾಥ್ ಭಾಷಣ ವೇಳೆ ಕುರ್ಚಿ ಎಸೆದು ಗಲಾಟೆ ಮಾಡಿದ ಅನ್ಸಾರಿ ಬೆಂಬಲಿಗರು
ಸಿಎಂ ಎದುರೆ ಗಂಗಾವತಿ ಬಣ ರಾಜಕೀಯ ಸಿದ್ದರಾಮಯ್ಯ ಗೆ ಇರುಸು ಮುರಿಸು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಲೋಕಸಭಾ ಕದನ ಕಣ ದಿನೆದಿನೆ ರಂಗೆರುತ್ತಿದ್ದು ಗಂಗಾವತಿ ಕಾಂಗ್ರೆಸ್ ನಲ್ಲಿ ಮಾತ್ರ ಬಣ ಬಡಿದಾಟ ತಣ್ಣಗಾಗಿಲ್ಲ, ಸಿಎಂ ಸಿದ್ದರಾಮಯ್ಯ ಎದುರೆ ಮಾಜಿ ಸಚಿವ ಇಕ್ಬಾಲ ಅನ್ಸರಿ ಹಾಗೂ ವಿಧಾನ ಪರಿಷತ್ ಮಾಜಿ ಸಚಿವ ಹೆಚ್ಚ್ ಆರ್ ಶ್ರೀನಾಥ್ ಬಿನ್ನಮತ ಸ್ಪೋಟಗೊಂಡು ಎಲ್ಲವು ಸರಿ ಇಲ್ಲಾ ಎನ್ನುವುದಕ್ಕೆ ಸಾಕ್ಷಿ ನೀಡಿದಂತಿತ್ತು.
ಗಂಗಾವತಿಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಭಾಷಣ ಮಾಡುವಾಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಮೈಕ್ ಬಳಿ ಬಂದು ಶ್ರೀನಾಥ್ ಮಾತು ಆರಂಭಿಸುತ್ತಿದ್ದಂತೆ ಅನ್ಸಾರಿ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅನ್ಸಾರಿ ಪಕ್ಕದಲ್ಲಿ ಕುಳಿತಿದ್ದ ಸಚಿವ ಬೈರತಿ ಸುರೇಶ್ ಅವರನ್ನು ಸಮಾಧಾನ ಪಡಿಸಿದರು.
ಆಗ ಶ್ರೀನಾಥ್ ಮಾತು ಆರಂಭಿಸಿದಾಗ ಅನ್ಸಾರಿ ಬೆಂಬಲಿಗರು ಖುರ್ಚಿ ಎಸೆದರು. ಮಾತಾಡಬೇಡಿ, ಮಾತಾಡಬೇಡಿ ಎಂದು ಕೂಗಿದರು. ಶ್ರೀನಾಥ್ ಮಾತನಾಡಿದಷ್ಟೂ ಹೊತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು.
ವೇದಿಕೆ ಮೇಲಿದ್ದ ಅನ್ಸಾರಿ ವಿರೋಧ ಮುಂದುವರಿಸಿ ಎಂದು ಕೈ ಸಂಜ್ಞೆ ಮಾಡಿದರು. ಆಗ ವೇದಿಕೆ ಮುಂಭಾಗದಲ್ಲಿದ್ದ ಸಾವಿರಾರು ಬೆಂಬಲಿಗರು ಶ್ರೀನಾಥ್ ಭಾಷಣಕ್ಕೆ ಅಡ್ಡಿಪಡಿಸಿದರು.
ಬಣ ರಾಜಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುಸು ಮುರುಸಾಯಿತು. ಶ್ರೀನಾಥ್ ಭಾಷಣ ಮುಗಿದ ಬಳಿಕವಷ್ಟೇ ಅನ್ಸಾರಿ ಬೆಂಬಲಿಗರು ಸುಮ್ಮನಾದರು.
ಎಲ್ಲವನ್ನು ನೋಡುತ್ತಾ ಮುಖಮಂತ್ರಗಳು ಹಾಗೂ ಮುಖಂಡರು ಮುಖ ಪ್ರೇಕ್ಷಕ ರಂತೆ ಕುಳಿತ್ತಿದ್ದರು.