3

ಗದಗಿನಲ್ಲಿ ಗವಿ ಶ್ರೀಗಳ ಪ್ರವಚನ ಭಾಗ -೪
ಹುಟ್ಟು ಜಗದ ಜಾತ್ರೆ ನೋಡಲು ಭಗವಂತ ನೀಡಿದ ಆಮಂತ್ರಣ

ಕರುನಾಡ ಬೆಳಗು ಸುದ್ದಿ
ಗದಗ,  – ಹುಟ್ಟು ಜಗದ ಜಾತ್ರೆ ನೋಡಲು ಭಗವಂತ ನಮಗೆ ನೀಡಿದ ಆಮಂತ್ರಣವೆAದರಿತು ಜಗದಲಿ ಯಾತ್ರಿಕನಂತೆ ಬದುಕು ಸಾಗಿಸಿ ಈ ಬದುಕು ನೀ ಕೊಟ್ಟ ಪ್ರಸಾದವೆಂದು ಸ್ವೀಕರಿಸಿದಾಗ ಮಾನವ ಭಾವಬಂಧನದಿಂದ ಮುಕ್ತಿ ಪಡೆಯಲು ಸಾಧ್ಯವೆಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅವರು ಬುಧವಾರ ಸಂಜೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಆಯೋಜಿಸಲಾಗಿರುವ ಆಧ್ಯಾತ್ಮ ಪ್ರವಚನದಲ್ಲಿ ನೆರೆದ ಭಕ್ತರಿಗೆ ಪ್ರವಚನ ನೀಡಿ ಮಾತನಾಡಿದರು. ನಾವೆಲ್ಲ ಜಗದಲಿ ಕಲಾವಿದರಿದ್ದಂತೆ ನಮ್ಮ ಜೀವಿತಾವಧಿಯಲ್ಲಿ ನಮ್ಮ ಕಲೆಯನ್ನು ಪ್ರಸ್ತುತಪಡಿಸಿ ಹೊರಡಬೇಕಿದೆ ಎನ್ನುವುದು ಗಮನದಲ್ಲಿರಿಸಿಕೊಳ್ಳಬೇಕು.

ನನ್ನದು ಎನ್ನುವ ವ್ಯಾಮೋಹ ದುಃಖಕ್ಕೆ ಕಾರಣವಾಗಿದ್ದು, ನನ್ನದು ಎನ್ನುವುದು ಬಂಧನಕಾರಿಯಾಗಿದೆ. ಬಂಧನಗಳಲ್ಲಿ ಈ ಎರೆಡು ಪ್ರಕಾರಗಳಿದ್ದು, ಭೌತ ಬಂಧನದಿಂದ ಬಿಡಿಸಿಕೊಂಡು ಮುಕ್ತಿ ಪಡೆಯಲು ಸಾಧ್ಯವಿದ್ದು, ಆದರೆ ನಾನೂ ಎಂದು ತುಂಬಿಕೊAಡಿರುವ ಭಾವ ಬಂಧನದಿAದ ಮುಕ್ತಿ ಸಾಧ್ಯವಿಲ್ಲ. ಮಾನವ ತನ್ನದಲ್ಲದ ವಸ್ತುಗಳ ಹಿಂದೆ ಬಿದ್ದು ತೊಳಲಾಡುತ್ತಿದ್ದಾನೆ.
ಜಾತಿ, ಸಂಪತ್ತು, ಆಸ್ತಿ, ಬೆಲೆಬಾಳುವ ವಸ್ತುಗಳು ನನ್ನದು ಎನ್ನುವ ಭಾವಭ್ರಮೆಯಲ್ಲಿ ಇರುವ ಮಾನವ ಸಮಾಜದಲ್ಲಿರದಂತಹ ಸಮಾನತೆ ಸ್ಮಶಾನದಲ್ಲಿ ಕಾಣಬಹುದು ಎನ್ನುವುದನ್ನು ಅರಿತು ಬದುಕಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣುವುದೇ ಧರ್ಮ ಮತ್ತು ಆಧ್ಯಾತ್ಮದ ಮೂಲವಾಗಿದೆ. ತನು, ಮನ, ಧನ, ಇದ್ಯಾವುದೂ ನನ್ನದಲ್ಲ ಎನ್ನುವುದನ್ನು ತಲೆಯಿಂದ ಹೊರಗಿಟ್ಟಾಗ ಮಾನವ ಬದುಕು ಸಾರ್ಥಕವಾಗಲಿದೆ. ನನ್ನದು ಎನ್ನುವುದು ಬಂಧನಕಾರಿ, ನಿನ್ನದು ಎನ್ನುವುದು ಮುಕ್ತಿಗೆ ರಹದಾರಿ.
ಜಗತ್ತು ಎನ್ನುವುದು ದೇವನ ಉತ್ಸವವಾಗಿದ್ದು, ನಿತ್ಯದಾಸೋಹಿ ಭಗವಂತ ನಮಗೆ ನೀಡಿದ ಆಮಂತ್ರಣವನ್ನು ಅತಿಥಿಯಂತೆ ಬದುಕು ಸಾಗಿಸಿ ನಡೆಯುವುದೇ ಸಾಕಾರದ ಬದುಕಿಗೆ ದಾರಿಯಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!