
ಗ್ರಾಮದೇವತೆ ಶ್ರೀ ಗಾಂಧಮ್ಮ ದೇವಿ ಮತ್ತು ರಾರಾವಿ ಗ್ರಾಮದ ಶ್ರೀ ಹುತ್ತಿನ ಎಲ್ಲಮ್ಮ ದೇವಿಯ ಮಹಾ ರಥೋತ್ಸವಗಳು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,25- ನಗರದ ತುಂಗಭದ್ರಾ ನದಿ ತೀರದ ದೇಶನೂರ ರಸ್ತೆ ಗ್ರಾಮ ದೇವತೆ ಶ್ರೀ ಗಾಂಧಮ್ಮ ದೇವಿ ಜಾತ್ರೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಮಹಾ ರುದ್ರ ಅಭಿಷೇಕ ವಿಶೇಷ ಪೂಜೆ ಬೆಳ್ಳಿ ಆಭರಣಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ಮಾಡಲಾಯಿತು.
ಅಗ್ನಿಕುಂಡ ತುಳಿಯುವ ಕಾರ್ಯಕ್ರಮದಲ್ಲಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಅರ್ಚಕರು ಅಗ್ನಿಕುಂಡ ತುಳಿದ ನಂತರ ಭಕ್ತರು ನಡೆದು ಹರಕೆ ತೀರಿಸಿದರು, ನಂತರ ಮಡಿತೆರನ್ನು ಎಳೆಯಲಾಯಿತು.
ಸಿರುಗುಪ್ಪ ದೇಶನೂರು ಇಬ್ರಾಹಿಂಪುರ್ ಗಡ್ಡೆ ವಿರುಪಾಪುರ ಬಾಗೋಡಿ ಸುತ್ತಮುತ್ತ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನ ಪಡೆದರು ಮತ್ತು ಭರತ ಹುಣ್ಣಿಮೆ ಅಂಗವಾಗಿ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಶ್ರೀ ಹುತ್ತಿನ ಎಲ್ಲಮ್ಮ ದೇವಿಯ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಭಕ್ತರು ಹೂ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು.