
ಗಿರಿಜನ ಉತ್ಸವ ಕಾರ್ಯಕ್ರಮ ಯಶಸ್ವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,2- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023-24ನೇ ಸಾಲಿನ ಗಿರಿಜನ ಉಪಯೋಜನೆಯಡಿ ಗಿರಿಜನ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ.30 ರಂದು ಭಾಗ್ಯನಗರದ ಶೀಮತಿ ಗಂಗಮ್ಮ ಲಕ್ಷ್ಮಣ ಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಭಾಗ್ಯನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಸುರೇಶ್ ಬಬಲಾದ್ ಅವರು ಉದ್ಘಾಟಿಸಿದರು. ಈ ಸಂದರ್ಭ ಹಿರಿಯ ಜಾನಪದ ಕಲಾವಿದರಾದ ಬಸಪ್ಪ ಚೌಡ್ಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಾಸ್ತಿçÃಯ ಸಂಗೀತ, ಬಾನ್ಸುರಿವಾದನ, ಚೌಡ್ಕಿ ಪದಗಳು, ಜಾನಪದ ಸಂಗೀತ, ರಂಗಗೀತೆಗಳು, ಸುಗಮ ಸಂಗೀತ, ತತ್ವಪದಗಳು, ಸೋಬಾನೆ ಪದಗಳು, ಸಮೂಹ ನೃತ್ಯ, ನಗಾರಿ ಹಾಗೂ ಗೊಂಬೆಕುಣಿತ ಕಲಾಪ್ರಕಾರಗಳನ್ನು ಕಲಾವಿದರು ಪ್ರಸ್ತುತ ಪಡಿಸಿದರು.