
ಗುಡೇಕೋಟೆ ಉತ್ಸವ : ಅದ್ದೂರಿಯ ಶೋಭಾ ಯಾತ್ರೆಯ ಮೆರವಣಿಗೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,25- ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 24 ಮತ್ತು 25ರಂದು ಹಮ್ಮಿಕೊಳ್ಳಲಾದ 2024ರ ಗುಡೇಕೋಟೆ ಉತ್ಸವದ ಅಂಗವಾಗಿ ಶನಿವಾರದಂದು ಗುಡೇಕೋಟೆಯಲ್ಲಿ ಅದ್ದೂರಿಯ ಶೋಭಾ ಯಾತ್ರೆ ಮೆರವಣಿಗೆ ನಡೆಯಿತು.
ಗುಡೇಕೋಟೆಯ ಶಿವಪಾರ್ವತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಕೂಡ್ಲಿಗಿ ಶಾಸಕರಾದ ಡಾ.ಶ್ರೀನಿವಾಸ್ ಎನ್.ಟಿ. ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ., ಉಪವಿಭಾಗಾಧಿಕಾರಿ ಮಹದ್ಅಲಿ ಅಕ್ರಂ ಷಾ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಶೋಭಾ ಯಾತ್ರೆ ಮೆರವಣಿಗೆಯಲ್ಲಿ ಎತ್ತಿನ ಮೆರವಣಿಗೆ, ಕಳಸ ಹೊತ್ತ ಮಹಿಳೆಯರು, ನಂದಿಕೋಲು, ಡೊಳ್ಳು ಕುಣಿತ, ಹಗಲು ವೇಷ, ಕುಣಿತ, ಕೋಲಾಟ, ಚಂಡಿ ವಾದನ ಹಾಗೂ ಇತರ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗುತಂದರು. ಶಾಲೆಯ ಮಕ್ಕಳು, ಊರಿನ ಮುಖಂಡರರು ಮೆರವಣಿಗೆಯಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಂಡು, ಐತಿಹಾಸಿಕ ಗುಡೇಕೋಟೆ ಉತ್ಸವದ ಚಾಲನೆಗೆ ಸಾಕ್ಷಿಯಾದರು.