ನ,16 ರಂದು ವಿದ್ಯುತ್ ವ್ಯತ್ಯಯ

ಕರುನಾಡ ಬೆಳಗು ಸುದ್ದಿ
ಕೊಪ್ಪಳ , 15- ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯಲ್ಲಿ ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ ನವೆಂಬರ್ 16 ರಂದು ಎಫ್-3 ಎಸ್.ಜಿ ಕಾಲೇಜ್ ಫೀಡರ್, ಎಫ್-4 ಎಲ್.ಐ.ಎಸ್ ಐ.ಪಿ ಸೆಟ್, ಎಫ್-9 ಬನ್ನಿಕಟ್ಟಿಫೀಡರ್‌ಗೆ ಒಳಪಡುವ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-3 ಎಸ್.ಜಿ ಕಾಲೇಜ್ ಫೀಡರ್ ವ್ಯಾಪ್ತಿಯ ದೇವರಾಜ ಅರಸ ಕಾಲೋನಿ, ಕೆ.ಸಿ ಸರ್ಕಲ್, ಫಿಶ್ ಮಾರ್ಕೆಟ್ ಏರಿಯಾ, ಅಂಬೇಡ್ಕರ್ ಸರ್ಕಲ್, ಸಜ್ಜಿಹೊಲ, ಜೆ.ಪಿ ಮಾರ್ಕೆಟ್ , ವಾರಕರ್‌ಓಣಿ, ಕೋಟೆ ಏರಿಯಾ, ಸೈಲಾನಪೂರ ಏರಿಯಾ, ಎಫ್-4 ಎಲ್.ಐ.ಎಸ್ ಐ.ಪಿ ಸೆಟ್‌ಗೆ ಒಳಪಡುವ ಬಹದ್ದೂರಬಂಡಿ, ಹ್ಯಾಟಿ ಮುಂಡರಗಿ, ಚುಕ್ಕನಕಲ್, ಮುದ್ದಾಬಳ್ಳಿ ಮತ್ತು ಬಿ ಹೊಸಳ್ಳಿ, ಎಫ್-9 ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ಬಿ.ಟಿ. ಪಾಟೀಲ ನಗರ, ಕೆ.ಎಸ್ ಆಸ್ಪತ್ರೆ ಹಿಂದುಗಡೆ, ಹಳೆ ತಹಶೀಲ್ದಾರ ಕಛೇರಿ, ಎಸ್.ಪಿ ಕಛೇರಿ, ಎಸ್.ವಿ.ಎಮ್.ಎಸ್ ಶಾಲೆ, ಬಸ್‌ಸ್ಟಾö್ಯಂಡ್ ಏರಿಯಾ, ರೈಲ್ವೇ ಸ್ಟೇಷನ್ ಏರಿಯಾ, ಗಾಂಧಿನಗರ ಮತ್ತು ಗದಗ ರಸ್ತೆ ಒಳಪಡುವ ಎಲ್ಲಾ ಏರಿಯಾಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕು.
ಮೇಲಿನ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಆರ್. ಸಲೀಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!