
ಕಥೆ ಹೇಳಿ ಸಂಭ್ರಮಿಸಿದ ಮಕ್ಕಳು
ಗ್ರಂಥಾಲಯ ಬಳಸಿದರೆ ಉತ್ತಮ ನಾಗರಿಕರಾಗುತ್ತಾರೆ
ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,22- ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗ್ರಂಥಾಲಯಗಳನ್ನು ಬಳಸಿದರೆ ಉತ್ತಮ ನಾಗರಿಕರಾಗುತ್ತಾರೆ. ಗ್ರಂಥಾಲಯದಲ್ಲಿ ಮಕ್ಕಳಿಗೆ ಇಷ್ಟವಾಗುವ ಚಿತ್ರಕಥೆ, ಕಥೆ, ಶಿಶುಗೀತೆ ಪುಸ್ತಕಗಳೊಂದಿಗೆ, ಪತ್ರಿಕೆಗಳಲ್ಲಿನ ಮಕ್ಕಳ ಅಂಕಣಗಳು ನಿಮ್ಮ ಓದುವಿಕೆಗಾಗಿ ನಮ್ಮ ಗ್ರಂಥಾಲಯಗಳು ಸಿದ್ಧವಾಗಿವೆ, ಗ್ರಂಥಾಲಯಗಳನ್ನು ಬಳಸಿಕೊಳ್ಳಿ ಎಂದುಜಿಲ್ಲಾ ಕೇಂದ್ರ ಗ್ರಂಥಾಲಯ ಕೊಪ್ಪಳದ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ ಹೇಳಿದರು.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತ, ಜಿಲ್ಲಾ ಕೇಂದ್ರ ಗ್ರಂಥಾಲಯ ಕೊಪ್ಪಳ, ಸಂಯುಕ್ತಾಶ್ರಯದಲ್ಲಿ ಮಕ್ಕಳ ಗಟ್ಟಿ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಗಟ್ಟಿ ಓದು, ಕಟ್ಟು ಕಟ್ಟು ಕಥೆ ಕಟ್ಟು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸಲಾಯಿತು.
ಮಕ್ಕಳಿಗೆ ಸಾಹಿತಿ ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಕಂಬಳಿ ಪುಟಾಣಿ ಗೊಂಬೆ, ಮಕ್ಕಳ ಕವನವನ್ನು ಹಾಡಿಸಿದರು. ಸಹ ಗ್ರಂಥಪಾಲಕ ನಾಗರಾಜನಾಯಕ ಡೊಳ್ಳಿನ ಯಾರಿಗೂ ಇದನ ಹೇಳಬಾರದು, ಎಲ್ಲಿರುವೆ ಎಂಟಾಣೆ ಆಯ್ದ ಮಕ್ಕಳ ಕವನಗಳನ್ನು ಮಕ್ಕಳೊಂದಿಗೆ ಹೇಳಿದರು.ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಹೆಚ್.ಎಸ್.ಹೊನ್ನುಂಚಿ ಮಕ್ಕಳಿಗೆ ಕೆಲ ಆಟಗಳನ್ನು ಆಡಿಸಿದರು.
ಗಟ್ಟಿ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮೂರನೇ ತರಗತಿಯಲ್ಲಿ ಸುರಭಿ, ಕೃಷ್ಣ, ಮಂದಾರ, ಅನುಶ್ರೀ ನಾಲ್ಕನೇ ತರಗತಿಯಲ್ಲಿ ಮನೋಜ, ಸ್ವಾತಿ, ಶ್ರೀರಾಮ, ಮಲ್ಲಿಕಾ, ಐದನೇ ತರಗತಿಯಲ್ಲಿ ಅಶ್ವಿನಿ, ಸಂಜನಾ,ರವಿಕುಮಾರ, ಸ್ನೇಹಾ ವಿಜೇತ ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಾರುತಿ ಆರೇರ್, ಶಿಕ್ಷಕಿಯರಾದ ಸಾವಿತ್ರಿ, ಮೀನಾಕ್ಷಿ, ಜಡೇಶ್ವರಿ, ಕೌಶಲ್ಯ, ಮತ್ತಿತ್ತರರು ಭಾಗವಹಿಸಿದ್ದರು. ಕಿನ್ನಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪರಮೇಶ್ವರಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಿನ್ನಾಳ ಗ್ರಾಮ ಪಂಚಾಯತಿ ಕಾರ್ಯದರ್ಶಿ ನೀಲಮ್ಮ ನಿರೂಪಿಸಿದರು. ಕಿನ್ನಾಳ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕಿ ಚಂದ್ರಕಲಾ ವಂದಿಸಿದರು.