2c136fae-be38-4577-97e1-318669006cc9

ಜನಸ್ಪಂದನ : ಹೊಸಪೇಟೆ ನಗರ, ಗ್ರಾಮೀಣ ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು

ಕರುನಾಡ ಬೆಳಗು ಸುದ್ದಿ

ವಿಜಯನಗರ, 2- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 2 ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಹೊಸಪೇಟೆ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಹೊಸಪೇಟೆ ನಗರ ಸೇರಿದಂತೆ ಹೊಸಪೇಟೆ ಗ್ರಾಮೀಣ ಭಾಗದ ಜನರು ಭಾಗಿಯಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಜನತಾ ದರ್ಶನದ ಸಮಾರಂಭದ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಲಾಗಿ ಟೇಬಲ್‌ಗಳು ಮತ್ತು ಗಣಕಯಂತ್ರಗಳನ್ನು ಅಳವಡಿಸಿ ಅರ್ಜಿಗಳನ್ನು ನೋಂದಾಯಿಸಿಕೊAಡರು.
ಅರ್ಜಿಗಳ ವಿವರ: ಜನಸ್ಪಂದನ ಕಾರ್ಯಕ್ರಮದಲ್ಲಿ ಪೌರಾಡಳಿತ ಇಲಾಖೆಗೆ 17, ಕಂದಾಯ ಇಲಾಖೆಗೆ 11, ಪಂಚಾಯತ್ ರಾಜ್ ಎಂಜಿನಿಯರಿAಗ್ ಇಲಾಖೆಗೆ 7, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 4, ಇಂಧನ ಇಲಾಖೆಗೆ ಮತ್ತು ಆರ್‌ಟಿಓ ಇಲಾಖೆಗೆ ತಲಾ 3, ಕೆಎಸ್‌ಆರ್‌ಟಿಸಿಗೆ 2 ಮತ್ತು ಪುರಸಭೆಗೆ 1 ಅರ್ಜಿ ಸೇರಿ ಒಟ್ಟು 48 ಅರ್ಜಿಗಳು ಸ್ವೀಕೃತಿಯಾದವು. ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ 8 ಅರ್ಜಿಗಳನ್ನು ವಿಲೇಗೊಳಿಸಿದರು.

ಸೌಲಭ್ಯಗಳ ವಿತರಣೆ : ಜನಸ್ಪಂದನಾ ಕಾರ್ಯಕ್ರದಲ್ಲಿ ರಾಷ್ಟಿçÃಯ ಸಾಮಾಜಿಕ ಭದ್ರತಾ ಯೋಜನೆಯಡಿಯ ವಿವಿಧ ಫಲಾನುಭವಿಗಳಾದ ಟಿ.ರೇಣುಕಾ ದೇವಿ ಅವರಿಗೆ ನಿರ್ಗತಿಕ ವಿಧವಾ ವೇತನ, ಶರಣ ನಾಯ್ಕ್ ಅವರಿಗೆ ಇಂದಿರಾ ಗಾಂಧಿ ವೃದ್ದಾಪ್ಯ ವೇತನ, ರಾಮಾಂಜನೇಯ ಅವರಿಗೆ ವಿಕಲಚೇತನರ ವೇತನ ಮತ್ತು ಧರ್ಮನಾಯ್ಕ್ ಹಾಗೂ ಚಂದ್ರನಾಯ್ಕ್ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಮಂಜೂರಾತಿ ಆದೇಶ ಪತ್ರಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಇದೆ ವೇಳೆ ಮಕ್ಕಳಿಗೆ ಭಾಗ್ಯಲಕ್ಷಿö್ಮ ಹಾಗೂ ಸುಕನ್ಯ ಸಮೃದ್ದಿ ಯೋಜನೆಯ ಪಾಸ್ ಪುಸ್ತಕಗಳನ್ನು ಸಹ ವಿತರಿಸಿದರು. ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ಕಿಟ್‌ಗಳನ್ನು ವಿತರಿಸಿದರು.

ನಿರಂತರ ಅಹವಾಲು ಸ್ವೀಕಾರ : ಹೊಸಪೇಟೆ ನಗರದ ತಮ್ಮ ಕಚೇರಿಯಲ್ಲಿ ಪ್ರತಿನಿತ್ಯ ಸಾರ್ವಜನಿಕರ ಅಹವಾಲು ಆಲಿಸಿ ಅವರ ಅರ್ಜಿ ಮತ್ತು ಮನವಿಯ ಬಗ್ಗೆ ಸ್ಪಂದನೆ ನೀಡಲಾಗುತ್ತದೆ. ದೂರದ ತಾಲೂಕುಗಳಿಂದ ಸಾರ್ವಜನಿಕರು ಹೊಸಪೇಟೆಗೆ ಬಂದು ಅಹವಾಲು ಸಲ್ಲಿಸುವುದು ಕಡಿಮೆ. ಹೊಸಪೇಟೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಹೊಸಪೇಟೆ ನಗರದಲ್ಲಿನ ಜಿಲ್ಲಾಡಳಿತ ಭವನವು ಹತ್ತಿರ ಇರುವು ಕಾರಣಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಸ್ಥಳೀಯ ಸಾರ್ವಜನಿಕರಿಗೆ ಪ್ರತಿನಿತ್ಯ ಸ್ಪಂದನೆ ನೀಡಲಾಗುತ್ತದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಸಹಾಯಕ ಆಯುಕ್ತರಾದ ಮಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಮ್ ಪಾಶಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ತಹಸೀಲ್ದಾರ ವಿಶ್ವಜೀತ್ ಮೆಹತಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹರೀಶ್, ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಯಲಿಗಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು. ಶಿಕ್ಷಕರಾದ ಬಸವರಾಜ ಅವರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!