
ಜಿಲ್ಲಾ ಬಿಜೆಪಿ ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೇಶ್ ಊಳೂರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,1- ಬಳ್ಳಾರಿ ಜಿಲ್ಲಾ ಬಿಜೆಪಿ ಓಬಿಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸಿದ್ದೇಶ್ ಊಳುರ್ ನಿಯಾಮಕವಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಭಾರತೀಯಜನತಾ ಪಾರ್ಟಿ ಅಭಿವೃದ್ಧಿಗೆ ಹಿಂದೆ ಸಿದ್ದೇಶ್ ಅವರು ಬಿಜೆಪಿ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಮಿಟಿ ಸದಸ್ಯರಾಗಿ, ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದಿನ ಇವರ ಪಕ್ಷದ ಸೇವೆಗಳನ್ನು ಗುರುತಿಸಿ ಹೈಕಮಾಂಡ್ ಇವರಿಗೆ ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಒದ್ದೆಯ ಜವಾಬ್ದಾರಿಯನ್ನು ನೀಡಿದೆ ಎನ್ನಲಾಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠ ಗೊಳಿಸಲು ಶ್ರಮಿಸಬೇಕೆಂದು, ಬಿಜೆಪಿ ಜಿಲ್ಲಾ ಅಧ್ಯಕ್ಷರು ಅನಿಲ್ ಕುಮಾರ್ ಆದೇಶ ಪತ್ರವನ್ನು ನೀಡಿ ಸಿದ್ದೇಶ್ ಅವರಿಗೆ ಹೇಳಿದರು.
ಸಿದ್ದೇಶ್ ನಿಯಾಮಕದ ಬಗ್ಗೆ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಶುಭ ಹಾರೈಸಿದರು.