
ಜಿಲ್ಲೆಯ ಅಂಚೆ ಕಚೇರಿಗಳಲ್ಲಿ 30 ರಂದು ಬಟವಾಡೆ ಹೊರತುಪಡಿಸಿ ಇತರೆ ಸೇವೆ ಲಭ್ಯವಿಲ್ಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ಕೊಪ್ಪಳದಲ್ಲಿ ನೂತನ ಅಂಚೆ ವಿಭಾಗೀಯ ಕಾರ್ಯಾಲಯವು ಏಪ್ರಿಲ್ 1 ರಿಂದ ಚಾಲನೆಗೊಳ್ಳುತ್ತಿದ್ದು, ಪ್ರಸ್ತುತ ಗದಗ ಅಂಚೆ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಗಂಗಾವತಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಚೆ ಕಛೇರಿಗಳಲ್ಲಿ ತಾಂತ್ರಿಕ ಪೂರ್ವಸಿದ್ಧತೆಗಳಿಗಾಗಿ 30 ರಂದು ಬಟವಾಡೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಅಂಚೆ ಸೇವೆಗಳು ಲಭ್ಯವಿರುವುದಿಲ್ಲ.
ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಗದಗ ವಿಭಾಗದ ಅಂಚೆ ಅಧೀಕ್ಷಕರಾದ ಎನ್.ಜಿ.ಭಂಗಿಗೌಡರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.