IMG-20231219-WA0010

ಜಿಲ್ಲೆಯ ಅಂಜನಾದ್ರಿ, ಹುಲಿಗೆಮ್ಮ ಪ್ರಾಧಿಕಾರ ರಚನೆಗೆ ಚಿಂತನೆ

ಮುಜರಾಯಿ‌ಸಚಿವ ರಾಮಲಿಂಗಾರೆಡ್ಡಿ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ ,೧೯- ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುವ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ
ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂಜನಾದ್ರಿ, ಹುಲಿಗೆಮ್ಮ ಪ್ರಾಧಿಕಾರ ರಚನೆಗೆ ಚಿಂತನೆ ನಡೆದಿದೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ಮಂಗಳವಾರ ಹುಲಿಗೆಯಲ್ಲಿ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿನಾಡುದರು.
ರಾಜ್ಯದ ಹಲವು ಕಡೆ ಅಭಿವೃದ್ಧಿ ಪ್ರಾಧಿಕಾರ ಮಾಡಿದಂತೆ ಹುಲಿಗಿ ಹಾಗೂ ಅಂಜನಾದ್ರಿ ಅಭಿವೃದ್ದಿ ಪ್ರಾಧಿಕಾರ ಆರಂಭಿಸುವ ಸರ್ಕಾರ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಹುಲಿಗಿಯಲ್ಲಿ ಶೌಚಾಲಯ, ಕುಡಿಯುವ ನೀರು, ಸಿಬ್ಬಂದಿ ಕೊರತೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ತ್ವರಿತವಾಗಿ ಈ ಕುರಿತು ಪ್ರಸ್ತಾವ ಕಳಿಸಲು ಸೂಚಿಸಿದ್ದೇನೆ ಎಂದರು.
ಹುಲಿಗಿ ದೇವಸ್ಥಾನಕ್ಕೆ ಅನುದಾನದ ಕೊರತೆಯಿಲ್ಲ. ದೇವಸ್ಥಾನದ ಖಾತೆಯಲ್ಲಿಯಲ್ಲಿಯೇ ಕೋಟ್ಯಂತರ ರುಪಾಯಿ ಹಣವಿದೆ. ಮೂಲ ಸೌಕರ್ಯ ಕಲ್ಪಿಸಲು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲಾಗುವುದು. ಮಾಸ್ಟರ್ ಪ್ಲಾನ್ ಯೋಜನೆಯಂತೆ ಎರಡು ವರ್ಷಗಳಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ಸಚಿವ ರಾಮಲಿಂಗ ರೆಡ್ಡಿ  ಹಾಗೂ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ದೇವಿ ದರ್ಶನ ಪಡೆದರು.

ದೇವಸ್ಥಾನದಲ್ಲಿ  ಪುರೋಹಿತರಾದ ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಶರ್ಮಾ ಮತ್ತು ನಾಗರಾಜ ಭಟ್ ವಿಶೇಷ ಪೂಜೆ ನೆರವೇರಿಸಿದರು‌ .

 

ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್., ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಮುಖಂಡರಾದ ಬಸವರಾಜ ಹಿಟ್ನಾಳ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ದೇವಾಲಯದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!