WhatsApp Image 2024-02-23 at 6.58.29 PM

ಜಿಲ್ಲೆಯಾದ್ಯಾಂತ ನಿವೇಶನ ಮತ್ತು ಮನೆಗಳನ್ನು ಮಂಜೂರು ಮಾಡುವಂತೆ ಆಗ್ರಹಿ ಸಿಪಿಐ ಧರಣಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,23- ಜಿಲ್ಲೆಯಾದ್ಯಾಂತ ನಿವೇಶನ ಮತ್ತು ಮನೆಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಧರಣಿ ನಡೆಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ತಾಲೂಕಾ ಘಟಕ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ವತಿಯಿಂದ ಗಂಗಾವತಿ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿಯಲ್ಲಿ ತಮ್ಮ ಗಮನಕ್ಕೆ ಕರ್ನಾಟಕ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಂಕಿ ಅಂಶಗಳ ಪ್ರಕಾರ ಒಟ್ಟು ವಸತಿ ಹೀನರ ಸಂಖ್ಯೆ 27 ಲಕ್ಷಕ್ಕೂ ಅಧಿಕ ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಇನ್ನು ಹೆಚ್ಚಾಗಿದೆ. ಇವರಲ್ಲಿ ಬಹುತೇಕ ಕುಟುಂಬಗಳು ಭೂ ರಹಿತ, ಕೃಷಿ ಕೂಲಿಕಾರರು ಆಗಿದ್ದು, ದಲಿತ, ಆದಿವಾಸಿ. ಹಿಂದುಳಿದ ಮತ್ತು ಅಲ್ಪ ಸಂಖ್ಯಾಯತ, ದೇವದಾಸಿ ಮಹಿಳೆಯರ ಕುಟುಂಬಗಳಾಗಿವೆ. ಈ ಕುಟುಂಬಗಳು ನಿವೇಶನ ಹೊಂದಿಲ್ಲ ಅಲ್ಲದೆ ಅವಿದ್ಯಾವಂತರಾಗಿದ್ದಾರೆ. ಇವರಿಗೆ ಸರಕಾರದ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಸಾಧ್ಯವಾಗುತ್ತಿಲ್ಲ. ಆದುದರಿಂದ ಸದರಿ ಕುಟುಂಬಗಳಿಗೆ ನಿವೇಶನ ನೀಡುವುದು ಸರ್ಕಾರದ ಮೊದಲನೆಯ ಆದ್ಯತೆ ಆದಲ್ಲಿ ಈ ಕುಟುಂಬಗಳಿಗೆ ವಸತಿ ಹಕ್ಕನ್ನು ನೀಡಲು ಸಾಧ್ಯ, ರಾಜ್ಯದ ಬಹುತೇಕ ಸ್ಥಳಿಯ ಸಂಸ್ಥೆ ಮತ್ತು ಗ್ರಾಮ ಪಂಚಾಯತಿಗಳಲ್ಲಿ ವಸತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ದಶಕಗಳಿಂದ ಬಾಕಿ ಉಳಿದಿವೆ.

ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗಳಲ್ಲಿ ವಸತಿ ಸಮಸ್ಯೆ ಪರಿಹಾರಕ್ಕೆ ಭೂಮಿ ಲಭ್ಯತೆ ತೊಡಕಾಗಿದೆ ಎಂದು ಗುರುತಿಸಿದೆ. ಆದುದರಿಂದ ಈ ಬಗ್ಗೆ ಅಧ್ಯಯನ ಮತ್ತು ಪರಿಹಾರಕ್ಕೆ ಕಂದಾಯ ಇಲಾಖೆ. ವಸತಿ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಉನ್ನತ ಮಟ್ಟದ ಸಭೆ ಅಗತ್ಯ ಇರುತ್ತದೆ.ತಾವು ಈಗಾಗಲೇ 2024-25 ಬಜೆಟ್‌ನಲ್ಲಿ ಘೋಸಿಸಿರುವ ವಸತಿ ರಹಿತರ ಸಮೀಕ್ಷೆ ಕಾರ್ಯವನ್ನು ನಾವು ಸ್ವಾಗತಿಸಿ ಅದಕ್ಕಾಗಿ ತಮ್ಮನ್ನು ಅಭಿನಂದಿಸುತ್ತೇವೆ. ಮತ್ತು ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಗಂಗಾವತಿ ತಾಲೂಕಿನ ವಸತಿ ರಹಿತರು ತಹಶೀಲ್ದಾರರ ಕಛೇರಿಗೆ ಮೆರವಣಿಗೆ ಮುಖಾಂತರ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದ್ದೇವೆ.

ಕೊಪ್ಪಳ ಜಿಲ್ಲೆಯಲ್ಲಿ 73,966 ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ರಾಜೀವ ಗಾಂಧಿ ವಸತಿ ನಿಗಮದ ಅಂಕಿ ಅಂಶ ಹೇಳುತ್ತಿದೆ. ಅದರಲ್ಲಿ ನಿವೇಶನಕ್ಕಾಗಿ 16,791 ಅರ್ಜಿ ನಿವೇಶನಕ್ಕಾಗಿ ಹಾಗೂ 57,175 ಅರ್ಜಿ ವಸತಿಗಾಗಿ ಸಲ್ಲಿಕೆಯಾಗಿದೆ.ಸರ್ಕಾರ ವಸತಿ ಯೋಜನೆಗೆ ನಿಗದಿ ಮಾಡಿರುವ ಸಹಾಯಧನದಲ್ಲಿ ಮನೆ ನಿರ್ಮಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಹಾಯಧನದ ಮೊತ್ತವನ್ನು ಕನಿಷ್ಟ 5 ಲಕ್ಷ ರೂಪಾಯಿಗಳಿಗೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ. ತಾವು 2024-25ರ ಬಜೆಟ್ ನಲ್ಲಿ ಘೋಷಿಸಿರುವಂತೆ ಕೂಡಲೇ ರಾಜ್ಯಾದಾದ್ಯಂತ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆ ಕಾರ್ಯ ಆರಂಭಿಸುವುದು.ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ನಗರಪಾಲಿಕೆ ಗಳಿಗೆ ವಸತಿ ರಹಿತರು ಈಗಾಗಲೇ ಸಲ್ಲಿಸಿರುವ ಹಾಗೂ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ರಾಜೀವ ಗಾಂಧಿ ವಸತಿ ನಿಗಮದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲು ಸೂಚಿಸಿ ಆದೇಶ ನೀಡುವುದು.

ವಸತಿ ಯೋಜನೆಗೆ ಅಗತ್ಯ ವಿರುವ ಸರ್ಕಾರಿ ಭೂಮಿಯನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುರುತಿಸಿ ಆಶ್ರಯ ನಿವೇಶನಕ್ಕೆ ಕಾಯ್ದಿರಿಸಲು ಸದರಿ ಸ್ಥಳೀಯ ಸಂಸ್ಥೆಗಳು ತಮ್ಮ ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಕೈ ಗೊಂಡು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ಮೂಲಕ ಸುತ್ತೋಲೆ ಹೊರಡಿಸಿ, ಲಭ್ಯ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಬೇಕು. ವಸತಿ ಯೋಜನೆಯ ಸಹಾಯಧನದ ಮೊತ್ತವನ್ನು ಕನಿಷ್ಟ 5 ಲಕ್ಷ ರೂಪಾಯಿಗಳಿಗೆ ಎರಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್. ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ಜಿಲ್ಲಾ ಉಸ್ತುವಾರಿ ಡಾ. ಕೆ.ಎಸ್. ಜನಾರ್ಧನ, ಜಿಲ್ಲಾ ಮುಖಂಡ ಹುಲುಗಪ್ಪ ಅಕ್ಕಿರೊಟ್ಟಿ, ಬಸವರಾಜ ನಾಯಕ, ಜಿಲ್ಲಾ ಮುಖಂಡ ಏ.ಎಲ್. ತಿಮ್ಮಣ್ಣ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುನೀತಾ ಕಾರಟಗಿ, ಶೇಖಮ್ಮ, ಸೋಮಮ್ಮ, ಗಂಗಮ್ಮ, ದುರುಗಮ್ಮ. ಗಂಗಾವತಿ ತಾಲೂಕಾ ಕಾರ್ಪೆಂಟರ್ ಯೂನಿನ ಅಧ್ಯಕ್ಷ ಮೊಹಮ್ಮದ್ ಖಾಸಿಮ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ, ಕೊಪ್ಪಳದ ಭಾಗ್ಯನಗರದಲ್ಲಿಯ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ ಮುಂತಾದವರು ಒತ್ತಾಯಿಸಿ ಧರಣಿ ನಡೆಸಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!