ಜು.28ಕ್ಕೆ ಕೇಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಮದಲ್ಲಿ ನೂತನವಾಗಿ ರಚನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ಜನ ನಿರ್ದೇಶಕರ ಚುನಾವಣೆಯು ಜು.28ರಂದು ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ.
ಈ ಚುನಾವಣೆಯ ಅಂಗವಾಗಿ ನಾಮಪತ್ರವನ್ನು ಜು 13ರಿಂದ ಜು 20 ರವರೆಗೆ ಸಲ್ಲಿಸಬಹುದಾಗಿದೆ ನಂತರ ಮುಂದಿನ ಪ್ರಕ್ರೀಯೆ ನಡೆಯಲಿದೆ ಎಂದು ಸಹಕಾರ ಸಂಘದ ರಿಟರ್ನಿಂಗ್ ಅಧಿಕಾರಿ ಎಸ್ ಬಿ ಬಿರಾದಾರ ಪಾಟೀಲ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!