WhatsApp Image 2024-07-01 at 6.12.17 PM

ಟಿ 20 ವರ್ಡ್ ಕಪ್ ಫೈನಲ್ ಪಂದ್ಯ ಭಾರತ ಜಯಭೇರಿಗೆ ಬೆಟ್ಟದಲ್ಲಿ ಸಂಭ್ರಮಾಚರಣೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 1- ಕಿಷ್ಕಿಂದ ಯುವ ಚಾರಣ ಬಳಗ, ಲಿವ್ ವಿಥ್ ಹ್ಯುಮಾನಿಟಿ ಟ್ರಸ್ಟ್ ಭಾನುವಾರ ಬೆಳಗ್ಗೆ ಸಮೀಪದ ವಾಣಿಭದ್ರೇಶ್ವರ ಗುಡ್ಡದಲ್ಲಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಸಮಾಜಮುಖಿ ಕಾರ್ಯಗಳ ಕುರಿತು ಬೆಟ್ಟದ ಮೇಲೆ ಬ್ರೇಕ್ ಪಾಸ್ಟ್ ಮೂಲಕ ವಿಭಿನ್ನವಾಗಿ ಸದಸ್ಯರ ಸಭೆ ನಡೆಸಿತು.

ತಂಡದ ಸದಸ್ಯರು ವಾಣಿಭದ್ರೇಶ್ವರ ಬೆಟ್ಟದ ಮೇಲೆ ಉಪಾಹಾರಕ್ಕೆ ಬೇಕಾದ ಎಲ್ಲ ಸಾಮಗ್ರಿ ಕೊಂಡೊಯ್ದು, ದೋಸೆ, ಕೇಸರಿ ಬಾಥ್, ಅವಲಕ್ಕಿ ಉಪಾಹಾರ ವನ್ನು ಸಿದ್ಧಪಡಿಸಿಕೊಂಡು ಗುಂಪಾಗಿ ಕುಳಿತು ಸವಿದರು. ಇದಕ್ಕೂ ಮುನ್ನ ಭಾರತ ತಂಡ ಟಿ 20 ವಿಶ್ವಕಪ್ ಫೈನ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿದರು. ಚಕ್ ದೇ ಇಂಡಿಯಾ, ಭಾರತ ಮಾತಕೀ ಜೈ, ಮೇರಾ ಭಾರತ್ ಮಹಾನ್ ಎಂದ ಜಯಘೋಷ ಕೂಗಿ ಸಂಭ್ರಮಿಸಿದರು.

ಈ ವೇಳೆ ಖ್ಯಾತ ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕಾರ್ ಅವರು ಮಾತನಾಡಿ, ವಾಣಿಭದ್ರೇಶ್ವರ ಐತಿಹಾಸಿಕವಾಗಿ ಮಹತ್ವ ಪಡೆದಿದ್ದು, ಈ ಸ್ಥಳದ ಅಭಿವೃದ್ಧಿಯಾಗಬೇಕಿದೆ. ಯುವ ಸಮುದಾಯ ಸುತ್ತಮುತ್ತಲಿನ ಐತಿಹಾಸಿಕ ಹಿನ್ನೆಲೆ ಅರಿಯಬೇಕು ಎಂದರು.

ಕಿಷ್ಕಿಂದ ಯುವ ಚಾರಣ ಬಳಗ, ಲಿವ್ ವಿಥ್ ಹ್ಯುಮಾನಿಟಿ ಟ್ರಸ್ಟ್ ಪ್ರತಿ ವಾರ ಚಾರಣ ಜೊತೆಗೆ ಐತಿಹಾಸಿಕ ಸ್ಥಳಗಳ ಪರಿಚಯಿಸುವ ಕೆಲಸ ಮಾಡುತ್ತಿದೆ. ಯುವ ಬಳಗ 200 ಸದಸ್ಯರನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಲಿ ಎಂದರು.

ವಾಣಿಭದ್ರೇಶ್ವರ, ಕಣಿವಿ ಆಂಜನೇಯ, ಬಸಾಪಟ್ಟಣ ದರ್ವಾಜ, ಪ್ರಾಗೈತಿಹಾಸಿಕ ಕಾಲದ ಮಹತ್ವವನ್ನು ಚಾರಣ ಬಳಗದ ಸದಸ್ಯರಿಗೆ ತಿಳಿಸಿದರು.

ಮಕ್ಕಳ ವೈದ್ಯರು ಹಾಗೂ ಕಿಷ್ಕಿಂದ ಯುವ ಚಾರಣ ಬಳಗದ ಸದಸ್ಯರಾದ ಡಾ.ಅಮರ್ ಪಾಟೀಲ್ ಅವರು ಮಾತನಾಡಿ, ಕಿಷ್ಕಿಂದ ಯುವ ಚಾರಣ ಬಳಗ, ಲಿವ್ ವಿಥ್ ಹ್ಯುಮಾನಿಟಿ ಸಂಸ್ಥೆ ನಿಸ್ವಾರ್ಥ ಸೇವೆ ಮಾಡುತ್ತಾ ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿದೆ. ಈಡೀ ರಾಜ್ಯದಲ್ಲೇ ಇಂಥ ಕಾರ್ಯ ಎಲ್ಲೂ ನಡೆಯುತ್ತಿಲ್ಲ. ಪ್ರತಿವಾರ ಒಂದಿಲ್ಲೊಂದು ಸಾಮಾಜಿಕ ಕಾರ್ಯ ಮಾಡುತ್ತಾ ಬೇರೆಯವರಿಗೆ ಮಾದರಿಯಾಗಿದೆ. ಅಂಜನಾದ್ರಿಯಲ್ಲಿ ಸ್ವಚ್ಛತಾ ಕಾರ್ಯ, ವಾನರ ವನ ನಿರ್ಮಾಣ ಕಾರ್ಯ, ಬೀಜದುಂಡೆ ಅಭಿಯಾನ ಹೀಗೆ ವಿಭಿನ್ನ ಚಟುವಟಿಕೆಗಳನ್ನು ಮಾಡುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಸನ್ಮಾನ : ದಕ್ಷಿಣ ಭಾರತದಾದ್ಯಂತ ಸೈಕ್ಲಿಂಗ್ ಮಾಡಿದ ಗಂಗಾವತಿಯ ಅಭಿಷೇಕ ಹಾಗೂ ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಜಿಂಜೇರ ಬೆಟ್ಟದ ಜೈಲನ್ನು ಅನ್ವೇಷಣೆ ಮಾಡಿದ ಖ್ಯಾತ ಸಂಶೋಧಕರಾದ ಡಾ.ಶರಬಸಪ್ಪ ಕೋಲ್ಕಾರ್ ಅವರನ್ನು ಕಿಷ್ಕಿಂದ ಯುವ ಚಾರಣ ಬಳಗ ಹಾಗೂ ಲಿವ್ ವಿಥ್ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದಂತವೈದ್ಯರಾದ ಡಾ.ಶಿವಕುಮಾರ್ ಮಾಲಿಪಾಟೀಲ್, ಸಾಹಿತಿಗಳಾದ ಪವನ್ ಕುಮಾರ್ ಗುಂಡೂರು, ಜನಕವಿ ರಮೇಶ ಗಬ್ಬೂರು, ಪತ್ರಕರ್ತ ಮಂಜುನಾಥ ಗುಡ್ಲಾನೂರು, ಕೆವೈಟಿಸಿಯ ಪ್ರಮುಖರಾದ ಜಿ.ಆರ್. ಅರ್ಜುನ್, ಸೌಮ್ಯ ಎಸ್. ಪಿ, ಪ್ರಸನ್ನ ಮಿಶ್ರೀಕೋಟಿ, ಮಂಜುಳಾ ಶೆಟ್ಟಿ, ಮಂಜುನಾಥ ಇಂಡಿ, ಆಕಾಶ ನಾಗಲಿಕರ್, ಪ್ರಕಾಶ, ಪಂಪಾಪತಿ, ನಾಗರಾಜ, ಸಂತೋಷ ಕುಂಬಾರ, ಹರನಾಯಕ, ಅಭಿಜಿತ್ ತಾಂಡೂರು, ಮಂಜುನಾಥ ಮಸ್ಕಿ, ರಾಜಾಸಾಬ್ ಗುಮಗೇರಿ, ಹಿರಿಯರಾದ ರಾಜೇಶ್ವರಿ, ಲೀಲಾವತಿ ಇನ್ನೂಳಿದ ತಂಡದ ಎಲ್ಲ ಸದಸ್ಯರು ಇದ್ದರು.

Leave a Reply

Your email address will not be published. Required fields are marked *

error: Content is protected !!