WhatsApp Image 2024-06-01 at 4.46.45 PM

ಡೇರಿ ಉದ್ಯಮ ಉತ್ತೇಜನಕ್ಕೆ ವಿಶ್ವ ಹಾಲು ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 1- ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿರುವ ಶಾಲೆಗಳಲ್ಲಿ ಇಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮದಲ್ಲಿ, ರಾಯಚೂರ್ ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಪ್ರಭಾರ ವ್ಯವಸ್ಥಾಪಕರು ( ಮಾರುಕಟ್ಟೆ ) ಎಸ್ ವೆಂಕಟೇಶ್ ಗೌಡ ಅವರು ಮಾತನಾಡಿ ವಿಸ್ವಹಾಲು ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 1 ನೇ ತಾರೀಖಿನಂದು ಆಚರಿಸ ಲಾಗುತ್ತದೆ ಎಂದು, ಎಫ್ಎಓ ಜಾಗತಿಕ ಆಹಾರವಾಗಿ ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಡೈರಿ ವಲಯವನ್ನು ಆಚರಿಸಲು ಪ್ರಾರಂಭಿಸಲಾಯಿತು ಎಂದು ಹಾಗೂ ಡೇರಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬೆಂಬಲಿಸಲು ಅವಕಾಶವನ್ನು ಒದಗಿಸಲು ಈ ದಿನದ ಆಚರಣೆಯ ಗುರಿಯಾಗಿದೆ ಎಂದು ತಿಳಿಸಿದರು.

ಮಾನವನ ಜೀವನದಲ್ಲಿ ಹಾಲಿನ ಅಗತ್ಯ ಮತ್ತು ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡುವದು ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಜೊತೆಯಲ್ಲಿ ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರೊಟೀನ್ ವಿಟಮಿನ್ b2 ಮುಂತಾದ ಪೋಷಕಾಂಶಗಳ ಬಗ್ಗೆ ಜನರಿಗೆ ತಿಳಿಸಲಾಗುವು ದೆಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರ ವ್ಯವಸ್ಥಾಪಕರು ( ಡೇರಿ ) ಪಿ ಮಲ್ಲಿಕಾರ್ಜುನ ರವರು ಮಾತನಾಡಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು ( ಶೇಖರಣೆ ) ಡಾ”, ಮಹೇಶ್ ಲಕ್ಕಣ್ಣನವರ್, ರಾ ಬಾ ಕೋ ವಿ ಒಕ್ಕೂಟದ ಉಪ ವ್ಯವಸ್ಥಾಪಕರು ಕೆಆರ್ ಇಂದು ಕಲ, ರೋಹಿತ್, ಸಿ ಎನ್ ಮಂಜುನಾಥ, ಬಾಬು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಸುವರ್ಣ ಲತಾ, ಪಾರ್ವತಮ್ಮ ಹಾಗೂ ಪೂಜಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗಣ್ಯರಿಗೆ ನಂದಿನಿ ಗುಡ್ ಲೈಫ್ ಹಾಲನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!