
ತಂಬಾಕು ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕುಕನೂರ,22- ಜಿಲ್ಲಾ ಪಂಚಾಯತಿ ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣೆ ಘಟಕ ಹಾಗು ಜಿಲ್ಲಾ ತಂಬಾಕು ನಿಯಂತ್ರಣ ಘಟಕ ವತಿಯಿಂದ ಸಮುದಾಯ ಆರೋ ಗ್ಯ ಕೇಂದ್ರ ಕುಕುನೂರ ವತಿಯಿಂದ ನಗರದ ದ್ಯಂಪೂರ್ ಕ್ರಾಸ್ ರಸ್ತೆ ಉದ್ದಕು ಸ.ಪ್ರೌ.ಶಾಲೆಯ ಮಕ್ಕಳಿಂದ. ಜಾತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಮಾನ್ಯ ಆಡಳಿತ ವೈದ್ಯಾಧಿಕಾರಿಮಂಜುನಾಥ್ ಬ್ಯಾಲ ಹುಣಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಂಬಾಕು ನಿಂದ ಆಗುವ ದುಷ್ಪರಿಣಾಮಗಳು ಹಾಗೂ ಅದರಿಂದ ಬರುವ ಕಾಯಿಲೆಗಳ ಬಗ್ಗೆ ವಿವರಿಸಿದ್ದರು ದಂತ ವೈದ್ಯ ಅಧಿಕಾರಿಗಳಾದ ಡಾ.ಸುಷ್ಮಾ ಭಾಗವಹಿ ಮಾತನಾಡಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮಾತುಗಳಾಡಿದರು.
ಜಿಲ್ಲಾ ನಿಯಂತ್ರಣ ಘಟಕ ವತಿಯಿಂದ ಶ್ರೀಮತಿ ಶಾಂತಮ್ಮ ಕಟ್ಟಿಮನಿ, ಜಿಲ್ಲಾ ತಂಬಾಕು ವೆಸನ ಮುಕ್ತ ಕೇಂದ್ರ ಜಿಲ್ಲಾ ಆಸ್ಪತ್ರೆ ಕೊಪ್ಪಳ ಇವರು ಭಾಗವಹಿಸಿ ತಂಬಾಕು ಕಾಯ್ದೆ 2003 ಬಗ್ಗೆ ವಿವರಿಸಿದರು.
NCD ಸಿಬ್ಬಂದಿಗಳು, ಕಾಳಪ್ಪ ಕುಂಬಾರ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರವೀಣ್ ಕುಮಾರ್, STS ಕುಕನೂರ್ ಶಾಲೆಯ ಮುಖ್ಯಗುರುಗಳು, ಸಿಬ್ಬಂದಿ ವರ್ಗ, ಮಕ್ಕಳೂ ಭಾವಹಿಸಿದ್ದು ತಂಬಾಕು ಸೇವನೆಯಿಂದ ಅರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿನುತಾನ ಕಾರ್ಯಕ್ರಮದಿಂದ ಗುಲಾಬಿ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು