
ತಾಯ್ತನದಲ್ಲಿಯೇ ಸುಖ ಕಾಣುವವಳು ಹೆಣ್ಣ
ರಕ್ತ ಹೀನತೆ ನಿರ್ಲಕ್ಷ್ಯ ಬೇಡ
ಡಾ.ಕವಿತಾ
ಕರುನಾಡ ಬೆಳಗು ಸುದ್ದಿ
ತಾಯ್ತನದಲ್ಲಿಯೇ ಸುಖ ಕಾಣುವವಳು ಹೆಣ್ಣು, “ತಂದೆ ಸತ್ತರೆ ಮಕ್ಕಳು ಅನಾಥರಾಗುವುದಿಲ್ಲ, ಆದರೆ ತಾಯಿ ಸತ್ತರೆ ಮಕ್ಕಳು ಅನಾಥರಾಗುತ್ತಾರೆ” ಎನ್ನುತ್ತಾರೆ ನಮ್ಮ ಪೂರ್ವಿಕರು. ಅಮ್ಮ ಎಂಬ ಶಬ್ದ ಕಿವಿಗೆ ಬಿಳುತ್ತಿದ್ದಂತೆಯೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮನಸ್ಸಿನಲ್ಲಿ ಗೌರವಾನ್ವಿತ ಭಾವನೆಗಳು ಮೂಡುತ್ತವೆ. ಹೀಗಿರುವಾಗ ಮುಂದೆ ಆಗುವ ತಾಯಂದಿರ ಸುರಕ್ಷತೆಯ ಕಡೆಗೆ ಏಕೆ ಹೆಚ್ಚು ಗಮನಹರಿಸಬಾರದು? ಹಾಗಾದರೆ ಇಲ್ಲಿ ಮೊದಲನೆಯದಾಗಿ ಸಮಸ್ಯೆಯಾಗಿ ಕಾಡುತ್ತಿರುವುದು ರಕ್ತ ಹೀನತೆ, ಅದನ್ನು ಹೇಗೆ ತಡೆಗಟ್ಟಬಹುದೆಂದು ತಿಳಿಯೋಣ.
ಗರ್ಭಾವಸ್ಥೆಯಲ್ಲಿ ದೇಹವು ಹೆಚ್ಚು ರಕ್ತವನ್ನು ತಯಾರಿಸಬೇಕಾಗಿದೆ. ಆದರಿಂದ ಹಿಮೋಗ್ಲೋಬೊನ ಎಂಬ ಕೆಂಪು ರಕ್ತ ಕಣಗಳಲ್ಲಿ ಪ್ರೋಟೀನ್ ಅನ್ನು ಉತ್ಪಾದಿಸಲು ಹೆಚ್ಚಿನ ಕಬ್ಬಿಣ ಮತ್ತು ವಿಟಮಿನ್ಗಳ ಅಗತ್ಯವಿರುತ್ತದೆ ಈ ಪ್ರೋಟೀನ ದೇಹದ ಇತರೆ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ. ಇಲ್ಲಿಯವರೆಗೆ ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಹೇಗೆ ಆಗುತ್ತದ್ದೆ ಎಂಬುವದ್ದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಇನ್ನು ರಕ್ತಹೀನತೆಗೆ ಕಾರಣಗಳಾವವು ಎಂಬುವುದನ್ನು ತಿಳಿದುಕೊಳ್ಳೊಣಾ.
ಮೊದಲನೆಯದಾಗಿ ಹೆಣ್ಣು ಮಕ್ಕಳು ಋತುಮತಿ ಆದಾಗಿನಿಂದ ಪ್ರತಿ ತಿಂಗಳು ಮುಟ್ಟಿನಲ್ಲಿ ಆಗುವಂತ ರಕ್ತಸ್ರಾವ ಅದಕ್ಕೆ ತಕನಾಗಿ ಪೌಷ್ಟಿಕ ಆಹಾರ ಸೇವಿಸದೆ ಇದ್ದಾಗ. ಮನೆಯ ಎಲ್ಲ ಸದಸ್ಯರ ಆಹಾರ ಮತ್ತು ಆರೋಗ್ಯದ ಕಾಳಜಿವಹಿಸುವದರಲ್ಲಿ ತನ್ನ ಆಹಾರ ಮತ್ತು ಆರೋಗ್ಯದ ಕಡೆ ಗಮನಹರಿಸದೆ ಇದ್ದಾಗ
ಆಹಾರದಲ್ಲಿ ಕಬ್ಬಿಣಾಂಶದ ಕೊರತೆ ಒಂದು ಕಾರಣವಾದರೆ. ಸೇವಿಸಿದ ಕಬ್ಬಿಣಾಂಶ ಜೀರ್ಣವಾಗಿ ದೇಹಸೆರದೆ ಹೋಗಬಹುದು ಇದು ಇನ್ನೊಂದು ಕಾರಣ ರಕ್ತಹೀನತೆಗೆ. ಈ ಸಮಸ್ಯಗಳಿಗೆ ನಮ್ಮ ಆಹಾರದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.ಅದು ಹೇಗೆಂದರೆ ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಖರ್ಜೂರವನ್ನು ಸೇವಿಸಬೇಕು, ಮೂರಕ್ಕಿಂತ ಹೆಚ್ಚು ಸೇವಿಸಿದರೆ ಮಲಬದ್ದತೆ ಉಂಟಾಗಬಹುದು.
ಒಂದು ಹಿಡಿ ಶೇಂಗಾ ಬೀಜಗಳು ಹಾಗೂ ಬೆಲ್ಲವನ್ನು ದಿನನಿತ್ಯ ಸೇವಿಸಬೇಕು. ಒಂದು ಹಿಡಿಗಿಂತ ಜಾಸ್ತಿಯಾಗಿ ಶೇಂಗಾ ಬೀಜ ಸೇವಿಸಿದ್ದರೆ ಅತಿಸಾರ, ಬೇದಿ ಉಂಟಾಗಬಹುದು.*ಕಬ್ಬಿನ ಹಾಲಿನೊಂದಿಗೆ ನಿಂಬೆ ರಸ ಸೇರಿಸಿ ಸೇವಿಸಿಬೇಕು. ಕರಿಬೇವಿನ ಚಟ್ಟಣಿ ಮಾಡಿಕೊಂಡ ಸೇವಿಸಬೇಕು ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪ, ಮಂತ್ಯ ಸೊಪ್ಪು ಹಾಗೂ ಹಸಿರು ತರಕಾರಿಗಳನ್ನು ಸೇವಿಸಬೇಕು.
ಈ ಮೇಲೆ ಹೇಳಿದ ಆಹಾರಗಳನ್ನು ಆದಷ್ಟು ಹೆಣ್ಣು ಮಕ್ಕಳು ಋತುಮತಿಯಾದ ದಿನದಿಂದ ಸೇವಿಸಿದರೆ ಶೇ 90% ಗರ್ಭಿಣಿಯಾದಾಗ ರಕ್ತಹೀನತೆಯಿಂದ ಬಳಲುವುದನ್ನು ತಡೆಗಟ್ಟಬಹುದು. ಅದೇ ರೀತಿ ಗರ್ಭಿಣಿಯರು ನಿತ್ಯ ಸೇವಿಸಿದರೆ ಅವರಿಗೆ ಉಂಟಾಗುವ ರಕ್ತಹೀನತೆ, ಪ್ರಸವದ ಸಮಯದಲ್ಲಿ ಹಾಗೂ ಬಾಣಂತಿಯರಲ್ಲಿ ಉಂಟಾಗುವ ರಕ್ತಹೀನತೆಯನ್ನು ತಡೆಗಟ್ಟಬಹುದು.
ರಕ್ತಹೀನತೆಗೆ ಮತ್ತೊಂದು ಕಾರಣವಾದ ಕಬ್ಬಿಣದಾಂಶ ಜೀರ್ಣವಾಗಿ ದೇಹ ಸೇರಿದೆ ಹೋರಹೋಗುವುದು, ಇದಕ್ಕೆ ಕಾರಣಗಳು ಹಾಗು ಪರಿಹಾರಗಳ ಕಡೆ ಗಮನಹರಿಸೋಣ. ಆಹಾರದಲ್ಲಿ ಕಬ್ಬಿಣದ ಅಂಶವಿದ್ದರು ರಕ್ತಹೀನತೆಯಿಂದ ಬಳಲುತ್ತಾರೆ ವಿಟಮಿನ್ ‘ಬಿ’ ಹಾಗೂ ವಿಟಮಿನ್ ‘ಸಿ’ ಗಳ ಕೊರತೆ ಇದ್ದಾಗ.
ಮೊದಲಿಗೆ ವಿಟಮಿನ್ ‘ಬಿ’ ಹೇರಳವಾಗಿ ಇರುವ ಆಹಾರಗಳೆಂದರೆ ಮೊಳಕೆ ಒಡಿಸಿದ ಕಾಳುಗಳು, ಮೊಟ್ಟೆ, ಮೀನು, ಹಾಲು ಇವುಗಳಲ್ಲಿ ಯಾವುದಾದರೂ ಒಂದಲ್ಲಾ ಒಂದನ್ನು ದಿನನಿತ್ಯಸೇವಿಸಬೇಕು. ಹಾಗೆ ವಿಟಾಮಿನ್ ‘ಸಿ’ ಹೆಚ್ಚು ಇರುವಂತ ಆಹಾರಗಳೆಂದರೆ ನಿಂಬೆ, ಕಿತ್ತಳೆ, ಮೊಸಂಬಿ, ಬೆಟ್ಟದ ನೆಲ್ಲಿಕಾಯಿ. ಇವುಗಳನ್ನು ಹೇಗೆ ಸೇವಿಸಬೇಕು ಎಂದರೆ ದಿನ ನಿತ್ಯ ನಿಂಬೆಹಣ್ಣಿನ ಪಾನಕ್, ಆದಷ್ಟೂ ಸಕ್ಕರೆ ಕಡಿಮೆ ಪ್ರಮಾದಲ್ಲಿ ಇರಲಿ. ಬಿಸಿ ಅನ್ನ ತುಪ್ಪದಲ್ಲಿ ನಿಂಬೆರಸವನ್ನು ಸೇವಿಸಬಹುದು.
ಬೆಟ್ಟದ ನೆಲ್ಲಿಕಾಯಲ್ಲಿ ವಿಟಮಿನ್ “ಸಿ” ಹೇರಳವಾಗಿ ಇದೆ. ಇದನ್ನು ಜಾಮ್ ಮಾಡಿಟ್ಟುಕೊಂಡು ದಿನ ನಿತ್ಯ ಉಪಯೋಗಿಸಬಹುದು. ನೆಲ್ಲಿಕಾಯನ್ನು ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಮತ್ತೆ ಕುದಿಸಿ ಇಟ್ಟುಕೊಳಬೇಕು. ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಸೇವಿಸಿ ಮೇಲೆ ಸ್ವಲ್ಪ ಬೆಚ್ಚಗಿನ ನೀರು ಅಥವಾ ಹಾಲನ್ನು ಸೇವಿಸಬೇಕು. ಹೊಟ್ಟೆಯಲ್ಲಿ ಜಂತು ಹುಳುಗಳು ಇದ್ದರು ಆಹಾರದಲ್ಲಿ ಕಬ್ಬಿಣಾಂಶವಿದ್ದರು ರಕ್ತಹೀನತೆ ಉಂಟಾಗುತ್ತದೆ.
ಇದಕ್ಕೆ ಮನೆಯಲ್ಲಿ ಒಂದು ಚಿಟಿಗೆ ಓಂ(ಅಜಿವಾನ)ಕಾಳುಗಳನ್ನು ೧೦ ಎಮ್. ಎಲ್. ನೀರಿನಲ್ಲಿ ಕುದಿಸಿ ಅದುನ್ನು ಅರ್ಧಕ್ಕೆ ಇಳಿಸಿ ನಿತ್ಯ ರಾತ್ರಿ ಮೂರು ದಿನಗಳು ಉಪಯೋಗಿಸಬಹುದು.ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವ ಮೂಲಕ ಗರ್ಭಧಾರಣೆ ಸಂದರ್ಭದಲ್ಲಿ, ಗರ್ಭಾವಸ್ಥೆಯಲ್ಲಿ ಹಾಗು ಬಾಣಂತಿಯರಲ್ಲಿ ರಕ್ತಹಿನತೆ ಸಮಸ್ಯಯನ್ನು ಕಡಿಮೆ ಮಾಡಬಹುದು. ಮರ ಒಳ್ಳೆಯ ಫಲ ನೀಡಬೇಕಾದರೆ ನೀರು, ಗೊಬ್ಬರ ಮತ್ತು ಆರೈಕೆ ಹೇಗೆ ಪ್ರಮುಖವಾಗುತ್ತದೊ ಹಾಗೆ ಆರೋಗ್ಯವಂತ ಮಗು ಬೇಕಾದರೆ ತಾಯಿಗೆ, ತಾಯಿಯಾಗುತ್ತಿರುವ ಒಟ್ಟಿನಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರೈಕೆ ನೀಡಬೇಕಾಗುತ್ತದೆ.