
ದಲಿತರು ತಿಪ್ಪನಾಳ ಕೆರೆ ಪ್ರಕರಣ : ದಲಿತರಿಗೆ ಗೆಲುವು
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ಕಳೆದ 6-7 ವರ್ಷಗಳ ಹಿಂದೆ ಕನಕಗಿರಿ ತಾಲೂಕಿನ ತಿಪ್ಪನಾಳ ಕೆರೆಯಲ್ಲಿ ಸಾಗು ಮಾಡುತ್ತಿರುವ ದಲಿತರು ಬಿತ್ತಿದ ಫಸಲನ್ನು ಕಟಾವಿಗೆ ಬಂದಾಗ ಸರ್ಕಾರ ಪೊಲೀಸರ ಮುಖಾಂತರ ಬೆಳೆ ನಾಶ ಮಾಡಿಸಿದ್ದಲ್ಲದೇ 19 ಜನ ದಲಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನದಲ್ಲಿಟ್ಟಿದ್ದನ್ನು ವಿರೋಧಿಸಿ ಹೋರಾಟ ಮಾಡಿದ ಪ್ರಕರಣದಲ್ಲಿ ಕನಕಗಿರಿ ದಲಿತರಿಗೆ ಏಪ್ರಿಲ್-24 ರಂದು ಗಂಗಾವತಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಎಂದು ಸಿಪಿಐ(ಎಂಎಲ್) ಲಿಬರೇಶನ ರಾಜ್ಯ ಸಮಿತಿ ಸದಸ್ಯ ಭಾರಧ್ವಾಜ್ ತಿಳಿಸಿದ್ದಾರೆ.
ದಲಿತರಿಗೆ ಆದ ಅನ್ಯಾಯ ಸರಿಪಡಿಸಲು ೨೬ ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ 03 ಎಕರೆಯಂತೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಹೋರಾಟ ಮಾಡುವುದಾಗಿ ತಿಳಿಸಿ, ದಲಿತರಿಗೆ ಭೂಮಿ ಸಿಗುವವರೆಗೂ ಮಾಡುವ ಹೋರಾಟಕ್ಕೆ ರಾಜ್ಯಮಟ್ಟದ ಎಲ್ಲಾ ಪ್ರಗತಿಪರ ಮುಖಂಡರು ಹಾಗೂ ಸಂಘಟನೆಗಳು ಬೆಂಬಲಿಸಲು ಕೋರಿದ್ದಾರೆ.