
ದುರ್ಗಣಗಳನ್ನು ತ್ಯಜಿಸಿ ಸದ್ಗುಣಗಳ ಖಣಿಯಾಗಿ
– ಜಯಂತಿ ಅಕ್ಕಾ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೩೦- ಏಕಾಗ್ರತೆಯಿಂದ ಮನಸ್ಸನ್ನು ಸ್ಥಿರಗೊಳಿಸಿದಾಗ ದುರ್ಗಣಗಳು ಅಳೆದು ಸದ್ಗು ಣಗಳು ಬೆಳೆಯಲು ಸಹಕಾರಿ ಆಗುತ್ತವೆ ಎಂದು ಗದಗ ವಿಭಾಗದ ಬ್ರ.ಕು. ವಿಶ್ವವಿದ್ಯಾಲಯಲದ ಮುಖ್ಯಸ್ತೆ ರಾಜಯೋಗಿನಿ ಬ್ರ.ಕು.ಜಯಂತಿ ಅಕ್ಕಾರವರು ಹೇಳಿದರು.
ಪಟ್ಟಣದ ಈಶ್ವರಿ ವಿಶ್ಶವಿದ್ಯಾಲಯದಲ್ಲಿ ಆಯೋಜಿಸಿದ ಹೊಸ ವರುಷದ2024 ರ ಪಾಕೇಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಜ್ಞಾನದ ಶಕ್ತಿ ಅಪಾರವಾದದ್ದು ಅದರಿಂದ ಸಂಸ್ಕಾರಗೊಂಡ ಮನಸ್ಸು ಎಲ್ಲರನ್ನು ಗೆಲ್ಲಲು ಸಾಧ್ಯ ಅಂತಹ ಶಿಕ್ಷಣವನ್ನು ಈಶ್ವರಿ ವಿಶ್ವವಿದ್ಯಾಲಯ ಜಾತಿಬೇಧವಿಲ್ಲದೆ ಕೊಡಮಾಡುತ್ತದೆ ಎಂದರು.ಹೊಸ ವರುಷ ಎಲ್ಲರ ಬಾಳಲ್ಲಿ ಬೆಳಕನ್ನು ಚೆಲ್ಲಲಿ ಎಂದು ಆಶಿಸಿದರು.
ನಿ. ಶಿಕ್ಷಕ ಮಹಾಗುಂಡಪ್ಪ ಕಟಗೇರಿ ಮಾತನಾಡಿದರು.ಸಿದ್ದಯ್ಯ ಕೊಣ್ಣರ ˌ ಫಕೀರಪ್ಪ ಗಾಣಗೇರ ˌ ಕಲ್ಲಿನಾಥ ದೇಸಾಯಿˌ ಶಿವಕುಮಾರ ನಿಡಗುಂದಿ ˌ ರೇಣುಕಪ್ಪ ಅಬ್ಬಿಗೇರಿ ˌರುದ್ರಗೌಡ ಗೋಣಿ ˌ ಮಂಜಯ್ಯ ಕೊಣ್ಣೂರ! ಮುತ್ತಯ್ಯ ಮಲಕಸಮುದ್ರ ˌ ಶರಣಬಸಪ್ಪ ದಾನಕೈ ˌ ದೊಡ್ಡಬಸಪ್ಪ ಹಕಾರಿ ಹಾಗೂ ಅಪಾರ ಅಕ್ಕನ ಪರಿವಾರದವರು ಉಪಸ್ಥಿತರಿದ್ದರು.ಬ್ರಹ್ಮಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಬ್ರ.ಕು. ಉಮಾ ಅಕ್ಕನವರು ಸ್ವಾಗತಿಸಿ ವಂದಿಸಿದರು