
ದುಶ್ಚಟದಿಂದ ದೂರವಿರಿ : ಶಕುಂತಲಾ ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 29- ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ದುಶ್ಚಟದಿಂದ ದೂರವಿರ ಬೇಕೆಂದು ಜಿ.ಪ.ಮಾಜಿ ಸದಸ್ಯೆ ಹಾಗೂ ಜಿಲ್ಲಾ ಜನಜಾಗ್ರತಿ ಸಮಿತಿ ಸದಸ್ಯರಾದ ಶಕುಂತಲಾದೇವಿ ಮಾಲಿಪಾಟೀಲ ಕರೆನೀಡಿದರು.
ತಾಲೂಕಿನ ಕರಮುಡಿ ಗ್ರಾಮದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟಿನವರು ಆಯೋಜಿಸಿದ ಮುಧೋಳ ವಲಯ ಮಟ್ಟದ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಆಟ ಪಾಠದ ಜೋತೆಗೆ ಓದಿನ ಬಗ್ಗೆ ಹೆಚ್ಚು ಗಮನಕೊಡಬೇಕು ಅಂದಾಗ ಭಾವಿ ಜೀವನ ಸುಂದರವಾಗಿರುತ್ತದೆ ಎಂದರು. ಮೋಬೈಲನ್ನು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಕೆ ವಿನಹ ಮೋಜು ಮಸ್ತಿಗಾಗಿ ಬಳಸಿದರೆ ಬಾಳು ಬರ್ಭರವಾಗುವುದು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ˌ ಜಿಲ್ಲಾಜನ ಜಾಗ್ರತಿ ಸಮೀತಿ ಸದಸ್ಯ ಶರಣಬಸಪ್ಪ ದಾನಕೈ ˌ ಮುಖ್ಯ ಗುರುಗಳಾದ ವಿಜಯಕುಮಾರ ಕರಾಟೆ ಇನ್ನೀತರರು ಮತನಾಡುತ್ತಾ ರೋಗಗಳು ಬಂದಾಗ ಒಾಷಧಿ ಸೇವಿ ಸುವದಕ್ಕಿಂತ ರೋಗಗಳು ಬರದೇ ಇರುವಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾದರೆ ದುಶ್ಚಟಗಳ ಬಗ್ಗೆ ಜಾಗೂರಕತೆ ಇರಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ˌಡಿ. ಎಂ.ಸಿ ಅಧ್ಯಕ್ಷ ಶ್ಯಾಮೀದಸಾಬ ಮುಲ್ಲಾ ರವರು ಮಾತನಾಡಿದರು.
ಶರಣಪ್ಪ ಪಾಟೀಲ, ಕಳಕಮ್ಮ, ದೇವಮ್ಮ, ಪ್ರೇಮಾ ಇನ್ನೀತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಲಯ ಮಟ್ಟದ ಮೇಲ್ವಿಚರಕರಾದ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ ವೀರಮ್ಮ ನಿಡಶೇಸಿ ಪ್ರಾರ್ಥಿಸಿದರು.
ಶಿಕ್ಷಕರಾದ ಬಸವರಾಜ ಕೊಂಡಗುರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.