IMG-20231116-WA0025

ದೇವರ ನಿರ್ದೇಶನವಿಲ್ಲದೇ ಯಾವ ನಾಟಕವೂ ನಡೆಯಲ್ಲ :                        ಶ್ರೀ ಗವಿಸಿದ್ಧೇಶ್ವರ  ಸ್ವಾಮಿಗಳು

           ಸಂಪತ್ತಿಗೆ ಸವಾಲು ನಾಟಕ ಪ್ರದರ್ಶನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 16- ಜಗತ್ತು ಒಂದು ನಾಟಕ ಮಂದಿರ, ಜೀವಿಗಳು ಪಾತ್ರಧಾರಿಗಳು. ದೇವರು ನಿರ್ದೇಶಕ, ದೇವರ ನಿರ್ದೇಶನವಿಲ್ಲದೇ ಈ ಜಗತ್ತಿನಲ್ಲಿ ಯಾವ ನಾಟಕವು ನಡೆಯುವುದಿಲ್ಲವೆಂದು ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಿ. ಶ್ರೀಮತಿ ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ರ‍ ಮೆಮೋರಿಯಲ್ ಟ್ರಸ್ಟ್, ಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಸಹಯೋಗದಲ್ಲಿ ದಿ. ನೀಲನಗೌಡ ಹಿರೇಗೌಡರ್ ಭಾನಾಪೂರ ಇವರ ಸ್ಮರಣಾರ್ಥ, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಗುರುವಾರ ಸಂಜೆ ಏರ್ಪಡಿಸಿದ್ದ ದಿ. ಪಿ.ಬಿ ಧುತ್ತರಗಿ ವಿರಚಿತ ‘ಸಂಪತ್ತಿಗೆ ಸವಾಲ್’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಭೂಮಿ ಮೇಲೆ ಎಲ್ಲರದ್ದೂ ಪಾತ್ರಗಳಿವೆ. ಆದರೆ, ಅವರವರ ಪಾತ್ರ ಸೂಕ್ತವಾಗಿ ನಿರ್ವಹಿಸಿದರೆ ಅರ್ಥಪೂರ್ಣ ಎಂದರು.

ಮನುಷ್ಯ ಬಂಗಾರ ತಯಾರಿಸುವ ಫ್ಯಾಕ್ಟರಿ ನಿರ್ಮಿಸುತ್ತಾನೆ. ನಿಸರ್ಗ ನಿರ್ಮಿಸಲು ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಆದಾಯದ ಬರದಲ್ಲಿ ಆರೋಗ್ಯ ಹಾಗೂ ಸಂಪತ್ತು ಗಳಿಸುವ ಬರದಲ್ಲಿ ಸಂತೋಷ ಕಳೆದುಕೊಂಡಿದ್ದಾನೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸಿದ್ದನಗೌಡ ಹಿರೇಗೌಡರ, ಚನ್ನಬಸಮ್ಮ ಹಿರೇಗೌಡರ, ಬಸವರಾಜ ಬಿನ್ನಾಳ, ಅಂತರಾಷ್ಟ್ರೀಯ ಜನಪದ ಕಲಾವಿದ ಡಾ. ಜೀವನ್ ಸಾಬ ಬಿನ್ನಾಳ, ಗಾಯಕ ಭಾಷಾಸಾಬ ಹಿರೇಮನಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರಡ್ಡಿ, ಎಸ್ಪಿ ಯಶೋಧಾ ವಂಟಗೋಡಿ, ಎಡಿಸಿ ಸಾವಿತ್ರಿ ಬಿ. ಕಡಿ, ಎಸಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಸಾಬ, ಜೆಡಿಎಸ್ ಕೋರ್ ಕಮೀಟಿ ಸಮಿತಿ ಸದಸ್ಯ ಸಿ.ವಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಮಂಜುಳಾ ಕರಡಿ,ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಾಹಾಂತಯ್ಯನಮಠ. ಕ.ರಾ.ಸ.ನೌ.ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ ಕಣವಿ, ಹಿರಿಯ ವಕೀಲ ಆರ್.ಬಿ ಪಾನಘಂಟಿ, ವಿ.ನೌ.ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಸೇರಿದಂತೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಲಾ ಪ್ರೇಮಿಗಳು ಇನ್ನಿತರರಿದ್ದರು.


—–

Leave a Reply

Your email address will not be published. Required fields are marked *

error: Content is protected !!