WhatsApp Image 2024-04-20 at 6.40.39 PM

ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ : ಇ ತುಕಾರಾಮ್

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ ಏ.21: ಬಳ್ಳಾರಿ ಮತ್ತು ವಿಜಯನಗರ ಲೋಕಸಬಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯಾರ್ಥಿ ಇ ತುಕಾರಾಂ ಡಾನಾಪುರ ಗ್ರಾಮದಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಅವರು ಹೇಳಿರುವ ಮಾತನ್ನು ನೆನಪಿಸುತ್ತ ಮಾತನ್ನು ಪ್ರಾರಂಭಿಸಿದ ಅವರು ಈ ದಿನ ಇತಿಹಾಸ ತಿಳಿದುಕೊಳ್ಳುವ ಸಮಯ ಬಂದಿದೆ ಇಂದಿರಾ ಗಾಂಧಿ ಇದ್ದಾಗ ಉಳುವವನೆ ಒಡೆಯ ಯೋಜನೆಯತಂದು ಮೂರು ಎಕರೆ ಜಮೀನು ಕೊಟ್ಟಿದ್ದಾರೆ ಅದು ಕಾಂಗ್ರೇಸ್ ಸರ್ಕಾರ ಅಲ್ವೇನಪ್ಪ ಎಂದು ನೆರೆದಿದ್ದ ಹಿರಿಕರನ್ನು ಮಾತನಾಡಿಸುತ್ತಾ ಮಾತನ್ನು ಮುಂದುವರೆಸಿದರು.

ಕಾಂಗ್ರೇಸ್ ಸರ್ಕಾರ ಟಿಬಿಡ್ಯಾಮ್ ಸೇರಿದಂತೆ ದೇಶದಲ್ಲಿ ಹಲವಾರು ಆಣೆಕಟ್ಟು ಗಳನ್ನು ಕಟ್ಟಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಮನಮೋಹನ ಸಿಂಗ್ ರವರು ಕೇಂದ್ರದ ಆರ್ಥಿಕ ಸಚಿವರಾಗಿದ್ದರು ಆಗ ಆರ್ಥಿಕ ಸುಧಾರಣೆ ತಂದು ಔದ್ಯೋಗಿಕರಣ ತರುವುದರ ಮೂಲಕ ಉದ್ಯೋಗ ಸೃಷ್ಟಿಮಾಡಿ ಇಡೀದೇಶವನ್ನ 57ನೇ ಸ್ಥಾನಕ್ಕೆ ತಂದಂಹ ಕೀರ್ತಿ ಕಾಂಗ್ರೇಸ್ ಸರ್ಕಾರಕ್ಕಿದೆ.

ಇಂತಹ ಕೆಲಸಗಳನ್ನು ಯಾರಾದರೂ ಬಿಜೆಪಿಯವರು ಒಬ್ಬರಾದರೂ ಮಾಡಿದ್ದಾರಾ, 15ಲಕ್ಷ ಅಕೌಂಟ್ ಗೆ ಹಾಕುತ್ತೇವೆ ಎಂದು ಹೇಳಿದ್ದರು ಇವತ್ತಿಗೂ ಯಾರ ಖಾತೆಗೂ ಬಂದಿಲ್ಲ. ಗ್ಯಾಸ್, ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ ಬೆಲೆ ಜಾಸ್ತಿ ಯಾಗಿದೆ. ವಿದೇಶದಲ್ಲಿ ಸುಮಾರು 3ಲಕ್ಷಕೋಟಿಗೂ ಅಧಿಕ ಕಪ್ಪು ಹಣ ಇದೆ ಅದನ್ನು ಭಾರತಕ್ಕೆ ತರುತ್ತೇವೆಂದು ಸುಳ್ಳು ಹೇಳಿ ನೋಟ್ ಬ್ಯಾನ್ ಮಾಡಿದರು. ಇದರಿಂದ ಜನ ತತ್ತರಿಸಿ ಹೋದರು ದೇಶದ ಅಭಿವೃದ್ಧಿಗೆ ಏನೋ ಮಾಡುತ್ತಾರೆ ಎಂದು ಸುಮ್ಮನಿದ್ದರೂ ಭ್ರಷ್ಟಚಾರ ಮಾತ್ರ ನಿಲ್ಲಲಿಲ್ಲ. ಸರ್ ದಾರ್ ವಲ್ಲಭ ಬಾಯ್ ಪಟೇಲ್ ಅವರ 4ಸಾವಿರ ಕೋಟಿ ರೂ.ಯ ಪ್ರತಿಮೆ ಮಾಡಲು ಚೀನಾದೇಶಕ್ಕೆ ಗುತ್ತಿಗೆ ಕೊಟ್ಟಿದ್ದರು. ಯಾಕೆ ನಮ್ಮದೇಶದಲ್ಲಿ ಅದನ್ನು ಮಾಡಲು ಯಾರು ಇರಲಿಲ್ವಾ. ಮೇಕ್ ಇನ್ ಇಂಡಿಯಾ ಎಂದರೆ ಇದೇನಾ, ಅದು ಹೇಗೆ ಇರಲಿ ನಮ್ಮದೇಶದಲ್ಲೇ ತಯಾರು ಮಾಡಬೆಕಿತ್ತಲ್ವಾ. ಇಂದು ದೇಶದಲ್ಲಿ ಉದ್ಯೋಗ ಸೃಷ್ಟಿಮಾಡುತ್ತೇವೆದು ಹೇಳಿದ್ದರು ಇಂದು 14ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಬಿಜೆಪಿಯ ಕೇಂದ್ರಸರ್ಕಾರದ ವಿರುದ್ಧ ಆರೋಪ ಮಾಡಿದರು.

ಕಾಂಗ್ರೇಸ್ ಸರ್ಕಾರ ಮತ್ತು ನಂಜುಂಡಪ್ಪ ವರದಿ ಪ್ರಕಾರ ವಿಜಯನಗರ ಜಿಲ್ಲೆ ಸೇರಿ ಏಳು ಜಿಲ್ಲೆಗಳಿಗೆ ವಿಶೇಷ ಆರ್ಟಿಕಲ್ 371ಜೆ ಹೈದ್ರಾಬಾದ್ ಕರ್ನಾಟಕ ಕಕ್ಕೆ ಸ್ಥಾನಮಾನ ಕೊಟ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಇದನ್ನು ಎಲ್ ಕೆ ಅಡ್ವಾನಿ ತಿರಸ್ಕರಿಸಿದ್ದರು. 2013ರಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗ ಮನಮೋಹನಸಿಂಗ್ ರವರು ಕಾನೂನಿಗೆ ತಿದ್ದುಪಡಿ ತಂದು ಜಾರಿಗೋಳಿಸಿದ್ದಾರೆ ಇದು ಇತಿಹಾಸ ಪುಟದಲ್ಲಿ ಸೇರಿರುವಂತದ್ದು. ಇದರಿಂದಾಗಿ ಇಂಜಿನಿಯರಿಂಗ್ ನಲ್ಲಿ 4ಸಾವಿರ, ಮೆಡಿಕಲ್ ನ 10 ಸಾವಿರ ಸೀಟ್ ಗಳಲ್ಲಿ 2ಸಾವಿರ ಸೀಟ್ ಸಿಗುತ್ತಿವೆ. ಈ ಯೋಜನೆಗೆ ಸಿದ್ದರಾಮಯ್ಯ ನವರು ಮೊದಲನೆಯದಾಗಿ 1000ಕೋಟಿ ಅನುದಾನ ಕೊಟ್ಟಿದ್ದಾರೆ. ಮನಮೋಹನ್ ಸಿಂಗ್ ರವರು 75, ಸಾವಿರಕೋಟಿ ರೂ.ರೈತರ ಸಾಲಮನ್ನಾ ಮಾಡಿದರು, ಈ ಋಣ ತೀರಿಸುವ ಸಮಯ ಮತದಾರರಿಗೆ ಬಂದೊದಗಿದೆ ಹಾಗಾಗಿ ತಮ್ಮ ಪಾದಗಳಿಗೆ ನಮಸ್ಕರಿಸುತ್ತಾ ಮತವನ್ನು ಕೇಳುತ್ತಿದ್ದೇನೆ ಎಂದು ಮತ ಯಾಚಿಸಿದರು.

ನಂತರ ಮಾಜಿ ಶಾಸಕ ಭೀಮಾನಾಯ್ಕ್ ಮಾತನಾಡಿ ರಾಜ್ಯದ ಕಾಂಗ್ರೇಸ್ ಸರ್ಕಾರದ ಕಾರ್ಯವೈಕರ್ಯಗಳ ಕುರಿತು ಮತ್ತು 5ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿ ಕಮಲ ಕೆಸರಿನಲ್ಲಿದ್ದರೆ ಚೆಂದ, ಜೆಡಿಎಸ್ ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೆ ಚೆಂದ, ಕೈ ಅಧಿಕಾರದಲ್ಲಿದ್ದರೆ ಚೆಂದ ಹಾಗಾಗಿ ತಾವೆಲ್ಲರೂ ಕಾಂಗ್ರೇಸ್ ಅಭ್ಯಾರ್ಥಿ ತುಕಾರಾಮ ಅವರಿಗೆ ಮತಹಾಕಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಕಾಂಗ್ರೆಸ್ ಪಕ್ಷದ  ಜಿಲ್ಲಾಧ್ಯಕ್ಷ ಬಿ ಎಂ ಶಿವಯೋಗಿ , ಕೆಪಿಸಿಸಿ ಸಂಯೋಜಕಿ ವಿದ್ಯಾ ಹಿರೇಮಠ್, ಡಣಾಪುರ ಗ್ರಾ.ಪಂ  ಅಧ್ಯಕ್ಷ ಮಲ್ಲೇಶ್, ಜಿ.ಪಂ ಮಾಜಿ ಸದಸ್ಯಗೋವಿಂದರ ಪರಶುರಾಮ,  ತಾ.ಪಂ. ಮಾಜಿ ಸದಸ್ಯ ಯು ಸೋಮಪ್ಪ , ಮಹಿಳಾ  ಘಟಕದ ಅಧ್ಯಕ್ಷೆ ಭಾನಮ್ಮ, ಡಣಾಪುರ ಗ್ರಾ ಪಂ ಮಾಜಿ ಅಧ್ಯಕ್ಷ ಸಿ ಎ ಗಾಳೆಪ್ಪ, ಕೆಪಿಸಿಸಿ ಮಾಜಿ ಸದಸ್ಯ ಬೋಸಪ್ಪ, ಎನ್ . ಸತ್ಯನಾರಾಯಣ,ಡಿಸಿಸಿ ಬ್ಲಾಕ್ ಅದ್ಯಕ್ಷ ರಪೀಕ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!