
ನಗರ ಸಭೆಯ ತುರ್ತು ಸಭೆ : ಖಾಸಗಿ ವಾಟರ್ ಟ್ಯಾಂಕ್ ಗಳಿಗೆ ನೀರು ಕೊಡಲೇಬೇಕೆಂದು ಹೈ ಡ್ರಾಮ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ನಗರದಲ್ಲಿ ಭಾನುವಾರ ಹಾಲಿ ಶಾಸಕ ಹಾಗೂ ಮಾಜಿ ಸಚಿವರ ನಡುವೆ ಖಾಸಗಿ ವಾಹನಗಳ ನೀರಿನ ಟ್ಯಾಂಕ್ ಮೂಲಕ ಜನರಿಗೆ ನೀರೊದಗಿಸಲು ಫೋನಿನ ಮೂಲಕ ನಡೆದ ಜಟಾ ಪಟಿ ತಾರಕಕ್ಕೇರಿ ತುರ್ತು ಸಭೆ ನಡೆಸುವ ಹಂತಕ್ಕೆ ಹೋಗಿತ್ತು.
ಈ ಕುರಿತು ನಗರಸಭೆ ಅಧ್ಯಕ್ಷರು ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಗರ ಸಭೆಯ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆಯನ್ನು ಮಂಗಳವಾರ ಕರೆದಿದ್ದರು. ಸಭೆಯಲ್ಲಿ ಸದಸ್ಯರ ಮತ್ತು ಪೌರಾಯುಕ್ತರ ನಡುವೆ ವಾದ ವಿವಾದಗಳು ಜೋರಾಗಿ ನಡೆದವು. ಖಾಸಗಿ ವಾಟರ್ ಟ್ಯಾಂಕ್ ಗಳಿಗೆ ನೀರು ಕೊಡಲೇಬೇಕೆಂದು ಹೈ ಡ್ರಾಮವೇ ನಡೆಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸದಸ್ಯೆರಿಗೆ ಸಾತ್ ನೀಡಿದರು. ನಾಮ ನಿರ್ದೇಶಿತ ಸದಸ್ಯರಾದ ರಾಘವೇಂದ್ರ ಮತ್ತು ಅಬ್ದುಲ್ ಖಧೀರ್ ಮಾತನಾಡಿ ಖಾಸಗಿ ವಾಹನ ಗಳಿಂದ ನೀರು ಕೊಡಲು ವಿರೋಧಿಸಿ ದರು.
ಪೌರಾಯುಕ್ತರು ನೀತಿ ಸಂಹಿತೆ ಇರುವುದರಿಂದ ಸರ್ಕಾರದ ಸುತ್ತೋಲೆಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಸಭೆಯ ನಡವಳಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂಧರ್ಭದಲ್ಲಿ ಕೆಲವು ಸದಸ್ಯರು ಸಭೆಯ ಭಾವಿಗಿಳಿದು ಆಕ್ರೋಶವ್ಯಕ್ತಪಡಿಸಿದರು. ಸುಧಿರ್ಘ ಚರ್ಚೆಯ ನಂತರ ಅಧ್ಯಕ್ಷರ ತೀರ್ಮಾನದಂತೆ ಪೌರಾಯುಕ್ತರಾದ ಚಂದ್ರಪ್ಪ ಸಭೆಯ ತೀರ್ಮಾನ ಕುರಿತು ನಡವಳಿ ಬರೆದು ಓದಿದರು.
ನಡವಳಿ : ಸರ್ಕಾರದ ಸುತ್ತೋಲೆಗಳ ಪ್ರಕಾರ ಮತ್ತು ಪೌರಾಯುಕ್ತರ ಅಭಿಪ್ರಾಯವನ್ನು ಕ್ರೂಡಿಕರಿಸಿ ಸರ್ಕಾರದ ಸುತ್ತೋಲೆ ಸಂಖ್ಯೆ ಸಿ ಎಸ್ 114 ಎಸ್ ಸಿ ಎಂ 2024.2 ದಿನಾಂಕ 17.5.2024. ಸಭೆಗೆ ತಿಳಿಸಿ ವಿಷಯ ಕುರಿತು ನಗರದ 28ಜನ ಸದಸ್ಯೆರು 1ನೇ ಹಂತದ ಜಲ ಶುದ್ದೀ ಕರಣಘಟಕದಿಂದ ಸಾರ್ವಜನಿಕರಿಗೆ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನಿರು ಒದಗಿಸುವ ಬಗ್ಗೆ ನಮ್ಮ ಒಪ್ಪಿಗೆ ಇದೆ ಎಂದು ಒಪ್ಪಿಗೆ ಸೂಚಿಸಿದರು. ಸದಸ್ಯರಾದ ಅಬ್ದುಲ್ ಖಧೀರ್ ಖಾಸಗಿ ವ್ಯಕ್ತಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿಯಮಗಳಲ್ಲಿ ಯಾವುದೇ ಅವಕಾಶ ರುವುದಿಲ್ಲ ಎಂದು ತಿಳಿಸಿದರು. ಪೌರಾಯುಕ್ತರು ಎಲ್ಲಾ ವಾರ್ಡ್ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆಇದೆ ತೊಂದರೆ ಇರುವ ಕಡೆ ಪ್ರತಿನಿತ್ಯ ಸುಮಾರು 30ಟ್ಯಾಂಕ್ ಗಳಷ್ಟು ನೀರು ಸರಬರಾಜು ಮಾಡುತ್ತಿರುತ್ತೇವೆ.
ಸಮಸ್ಯೆ ತಲೆದೂರಿದಲ್ಲಿ ಹೆಚ್ಚಿನ ಟ್ಯಾಂಕರ್ ಗಳನ್ನು ಬಳಸಬಹುದಾಗಿದೆ. ಆಗೂಮ್ಮೆ ಈಗೋಮ್ಮೆ ಕೇವಲ 2 ಟ್ಯಾಂಕರ್ ಗಳ ಸರಬರಾಜಿಗೆ ಮಾತ್ರ ಸಭೆ ಕೋರುತ್ತಿದ್ದು ನಂತರ ದಿನಗಳಲ್ಲಿ ಎಲ್ಲಾ ಖಾಸಗಿ ಟ್ಯಾಂಕರ್ ಗಳಿಗೆ ಉಚಿತವಾಗಿ ನೀರು ತುಂಬಿಸುವುದೆಂದರೆ ನೀತಿ ಸಂಹಿತೆ ಜಾರಿಯಲ್ಲಿರುವ ಹಂತದಲ್ಲಿ ಈ ರೀತಿಯ ತೀರ್ಮಾನ ಉಚಿತವಲ್ಲ ಎಂದು ತಿಳಿಸಲಾಯಿತು. ಹಾಗಾಗಿ ಅಧ್ಯಕ್ಷರು ಮತ್ತು 28ಸದಸ್ಯರು ಒಪ್ಪಿರುವುದರಿಂದ ಖಾಸಗಿ ಟ್ಯಾಂಕರ್ ಗೆ ನೀರು ತುಂಬಿಸಲು ಇಂದಿ ನಿಂದಲೇ ಅನುವು ಮಾಡಿಕೊಡಬೇಕೆಂದು ತೀರ್ಮಾನಿಸಿದ್ದನ್ನು ಸಭೆಯು ಒಪ್ಪಿತು ಎಂದು ನಡವಳಿಯನ್ನು ಓದಿದರು ನಡವಳಿಯನ್ನು ಜಿಲ್ಲಾಧಿಕಾರಿಗಳ ನಿರ್ಣಯಕ್ಕೆ ಕಳುಹಿಸಲಾಯಿತು.
ಸಭೆ ನಡೆಯುವಾಗ ಬಿಜೆಪಿ ಕಾರ್ಯಕರ್ತರೇ ಸಭಾಂಗಣದಲ್ಲಿ ತುಂಬಿದ್ದರು. ನಗರ ಸಭೆ ಅದ್ಯಕ್ಷೆ ಆದಾಗಿನಿಂದಲೂ ಮೌನ ದಿಂದಲೇಇರುತ್ತಿದ್ದ ಲತಾ. ಅವರು ಸಭೆಯಲ್ಲಿ ನಿರ್ಣಯಗಳನ್ನು ತೆಗೆದು ಕೊಳ್ಳಲು, ಅವರ ಸಹೋದರ ಪೋನ್ ಮುಖಾಂತರ ತಿಳಿಸುತ್ತಿದ್ದು ಕಂಡು ಬಂದಿತು. ಯಾವುದೇ ಅಹಿತಕರ ಘಟನೆ ಜರುಗದಂತೆ ನಗರ ಸಭೆ ಕಚೇರಿಯ ಆವರಣದ ಮುಂಬಾಗದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಶೆಕ್ಷಾವಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಎಲ್. ಮತ್ತು ಸರ್ವಸದಸ್ಯರು ಬಿಜೆಪಿ ಕಾರ್ಯಕರ್ತರು ಉಪ ಸ್ಥಿತರಿದ್ದರು.