
ಪ್ರಿಯಾಂಕಾ ಸೇವಾಸಂಘ ಉದ್ಘಾಟನೆ
ಜನರ ಸೇವೆ ಯಿಂದ ಖುಷಿ – ಪ್ರಿಯಾಂಕ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ) ೧೫- ನನ್ನ ಸೇವೆ ಸಮಾಜಕ್ಕಾಗಿ ಜನರ ಸೇವೆ ಮಾಡುತ್ತಿರುವುದು ತುಂಬಾ ಖುಷಿ ತಂದಿದೆ ಎಂದು ಸಂಘದ ಅಧ್ಯಕ್ಷಎ ಪ್ರಿಯಾಂಕ ಹೇಳಿದರು.
ಅವರು ನಗರದ ಮೇನ್ ಬಜಾರ್ ನ, ಜೆಕೆಎಸ್ ಕಂಪ್ಲೆಕ್ಸ್ ನಲ್ಲಿರುವ 2ನೇ ಮಹಡಿಯಲ್ಲಿ ಪ್ರಿಯಾಂಕಾ ಸೇವಾಸಂಘ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇನ್ನು ಮುಂದೆಯೂ “ಪ್ರಿಯಾಂಕ ಸೇವಾ ಸಂಘ ” ದಿಂದ ನನ್ನ ಸೇವೆ ಮುಂದುವರಿಯುತ್ತದೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮ್ಮ ಸೇವಾ ಸಂಘಕ್ಕಿರಲಿ ಎಂದು ಹೇಳಿದರು. ವಸ್ತಿ ಮಲ್ ಜೈನ್, ಶ್ವೇತಾಂಬ್ರಿ ವಕೀಲರು, ಮಗನ್ ಜೈನ್ ಸಂಘದ ಶ್ರೇಯೋಭಿವೃದ್ಧಿ ಬಗ್ಗೆ ಮಾತನಾಡಿದರು.
ಈ ಸಂಧರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, 25ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲೆಯ ಹಿರಿಯ ಪತ್ರಕರ್ತರಾದ ಬಿ ಹೆಚ್ ಎಸ್ ರಾಜು, ಹಾಗೂ ಪ್ರದಾನ ಕಾರ್ಯದರ್ಶಿ ಕಾಕುಬಾಳ್ ಪ್ರಕಾಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ವಸ್ತಿ ಮಲ್ ಜೈನ್, ಶ್ವೇತಾಂಬ್ರಿ ವಕೀಲರು, ಮಗನ್ ಜೈನ್, ಚಂಪಲಾಲ್ ಜಿ, ಅಶೋಕ್ ಮೋದಿ, ಮೈಬುಬ್ ಸಾಬ್, ರಾಕೇಶ್ ಜಿ, ಸೈಯದ್ ಹೈದರ್ ಇತರರಿದ್ದರು.