WhatsApp Image 2024-04-30 at 3.52.30 PM

ನಮ್ಮ ನಡೆ ಮತಗಟ್ಟೆ ಕಡೆ ಮತದಾನ ಜಾಗೃತಿ ಧ್ವಜಾರೋಹಣ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 30- ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ಚುನಾವಣಾ ಸ್ವೀಪ್ ಸಮಿತಿ ನಗರಸಭಾ ಸಹಭಾಗಿತ್ವದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ನಡೆ ಮತಗಟ್ಟ ಕಡೆ ಸಿರುಗುಪ್ಪ ನಗರದ ನಗರಸಭಾ ಕಾರ್ಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞ ವಿಧಿ ಬೋಧಿಸಲಾಯಿತು.

ಮೇ 7ರಂದು ಮತದಾನ ಚುನಾವಣೆ ಪರ್ವವೂ ದೇಶದ ಗರ್ವವಾಗಿದೆ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ತಾಲೂಕು ಆಡಳಿತ ಸಜ್ಜಾಗಿದೆ ಎಂದು ತಹಸಿಲ್ದಾರ್ ಶಂಸೇ ಆಲಂ ಅವರು ಅಭಿಪ್ರಾಯ ಪಟ್ಟರು.

ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಅವರು ಮಾತನಾಡಿ ಎಲ್ಲಾ ಮತಗಟ್ಟೆಗಳಲ್ಲಿಯೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಲ್ಲರೂ ನಿರ್ಭಿತ ಇಂದ ಮತ ಚಲಾಯಿಸಬೇಕು ಮತದಾನದಿಂದ ಯಾರು ಹೊರಗೆ ಉಳಿಯುವಂತಿಲ್ಲ ಎಂದು ಅವರು ಕರೆ ಕೊಟ್ಟರು.

ನಗರಸಭಾ ಪೌರಾಯುಕ್ತ ಎಚ್ಎನ್ ಗುರುಪ್ರಸಾದ್ ಅವರು ಮಾತನಾಡಿ ಸಿರುಗುಪ್ಪ ನಗರದ ನಗರಸಭಾ ವ್ಯಾಪ್ತಿಯ 44 ಎಲ್ಲಾ ಮತಗಟ್ಟೆಗಳಲ್ಲಿಯೂ ಧ್ವಜರೋಹಣ ಮಾಡಲಾಗಿದೆ ಉತ್ತಮ ಸೇವೆ ನೀಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಬಸವರಾಜ್ ವ್ಯವಸ್ಥಾಪಕಿ ಸುಜಾತ ಕೋರಿ ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ನಗರಸಭಾ ಸಮುದಾಯ ಸಂಘಟನಾಧಿಕಾರಿ ಅಮರೇಶ್ ಅವರು ಮಾತನಾಡಿದರು ನಗರಸಭಾ ಕಂದಾಯ ಅಧಿಕಾರಿಗಳಾದ ವೆಂಕೋಬ ರಾಜಭಕ್ಷಿ ನಗರ ಸಭೆಯ ಸುರೇಶ ಮಾರುತಿ ಆರೋಗ್ಯ ನಿರೀಕ್ಷಕ ರಂಗಸ್ವಾಮಿ ಪಂಪಾಪತಿ ಭಾಸ್ಕರ್ ಸಿಬ್ಬಂದಿ ವರ್ಗದವರು ಸ್ವೀಪ್ ಸಮಿತಿಯವರು ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!