೧೨

 ನವಂಬರ್ 14 ರಿಂದ 20 ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹ

ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 9- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಇಲಾಖೆ ಹಾಗೂ ಜಿಲ್ಲೆ ವಿವಿಧ ಸಹಕಾರಿ ಸಂಘಗಳು ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ನ14 _ ರಿಂದ 20 ರವೆಗೂ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ತಿಳಿಸಿದರು.
ಅವರು ಹೊಸಪೇಟೆಯ ಪತ್ರಿಕಾಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “5 ಟ್ರಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು” ಎಂಬ ಶಿರ್ಷಿಕೆಯಡಿಯಲ್ಲಿ7ದಿನಗಳ ಕಾಲ ವಿಭಿನ್ನ ವಿಷಯ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ.

ಮೊದಲ ದಿನ ನವಂಬರ್ 14ರಂದು ಬೆಳಿಗ್ಗೆ8.30ಕ್ಕೆ ಅಖಿಲ ಭಾರತ ಸಹಕಾರಿ‌ ಸಪ್ತಾಹದ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಮೊದಲ ದಿನ ಸಹಕಾರಿ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ವಿಷಯವಾಗಿ ಹೊಸಪೇಟೆಯಲ್ಲಿ, ನ15 ರಂದು ಸಾಲೇತರ ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ ವಿಷಯವಾಗಿ ಹರಪನಹಳ್ಳಿ ಯಲ್ಲಿ, ನ16 ರಂದು ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ ವಿಷಯವಾಗಿ ಬಳ್ಳಾರಿಯ ಸಂಗನಕಲ್ಲಿನಲ್ಲಿ, ನ 17 ರಂದು ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು ವಿಷಯವಾಗಿ ಸಂಡೂರು ತಾಲೂಕು ಭುಜಂಗನಗರದಲ್ಲಿ, ನ 18 ರಂದು ಸಾರ್ವಜನಿಕ-ಖಾಸಗಿ-ಸಹಭಾಗೀತ್ವವನ್ನು ಬಲಪಡಿಸುವುದು ವಿಷಯವಾಗಿ ಬಳ್ಳಾರಿಯಲ್ಲಿ, ನ 19ರಂದು ಮಹಿಳೆಯರು, ಯುವಜನರು ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ವಿಷಯವಾಗಿ ಕಂಪ್ಲಿಯಲ್ಲಿ ಮತ್ತು 20ರಂದು ಕೊಟ್ಟೂರಿನಲ್ಲಿ ಸಹಕಾರ ಶಿಕ್ಷಣ ತರಬೇತಿಪರಿಷ್ಕರಣೆ ವಿಷಯವಾಗಿ ನಡೆಸುವ ಮೂಲಕ ಆಚರಿಸಲಾಗುವುದು ಎಂದರು.
ಈ ಭಾರಿ ಜಿಲ್ಲೆಯಿಂದ 9 ಜನ ಸಹಕಾರಿಗಳು ಸಹಕಾರ ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು ಗುರಿಗಳಿಗೆ 8ಜನರನ್ನು ವಿಭಾಗ ಮಟ್ಟಕ್ಕೆ ಕಳುಹಿಸಲಾಗಿದೆ ಆದರೆ ಈ ಭಾರಿ ಸರ್ಕಾರ ಇಭಾಗ ಕ್ಕೆ ಒಬ್ಬರಂತೆ ನೀಡಲು ನಿರ್ಧಾರ ಮಾಡಿದ್ದು ಯಾರಿಗಾಗವುದೊ ಕಾದ ನೋಡಬೇಕು ಎಂದರು.
ಗೋಷ್ಠಿಯಲ್ಲಿ ಹಿರಿಯ ನಿರ್ದೇಶಕರಾದ ಬಿ.ಕೆ.ನಾಗರಾಜ, ಅಯ್ಯಾಳಿ ಶಂಕ್ರಪ್ಪ, ಡಿ.ಹೆಚ್ ರಾಮಣ್ಣ, ಗೌಳಿ ಕುಮಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!