WhatsApp Image 2024-05-11 at 17.06.58_6c5be7f1

ನಾಟಕ, ಸಾಹಿತ್ಯ,ಗಮಕ ಕಲೆಗೆ ಸೇವೆ ಮಾಡಿದ ಡಾ.ಜೋಳದ ರಾಶಿ ದೊಡ್ಡನಗೌಡರು :ಎನ್ ಬಸವರಾಜ್ ಅಭಿಪ್ರಾಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 11- ನಾಟಕ, ಸಾಹಿತ್ಯ, ಗಮಕ ಕಲೆಗೆ ವಿಶೇಷ ಸೇವ ಸಲ್ಲಿಸಿದವರು, ಡಾ. ಜೋಳದ ರಾಶಿ ದೊಡ್ಡನಗೌಡರು ಎಂದು, ಮುನ್ಸಿಪಲ್ ಕಾಲೇಜ್ ನಿವೃತ್ತ ಉಪನ್ಯಾಸಕ ಎನ್ ಬಸವರಾಜ್ ಅಭಿಪ್ರಾಯ ಪಟ್ಟರು.

ಅವರು ಶುಕ್ರವಾರ ಸಂಜೆ, ಬಳ್ಳಾರಿ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಹಮ್ಮಿಕೊಂಡಿದ್ದ ಡಾ.ಜೋಳದರಾಶಿ ದೊಡ್ಡನಗೌಡರ 29ನೇ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಗೌಡರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರೂ ಹಾಗೂ ಮುನ್ಸಿಪಲ್ ಕಾಲೆಜ್ ನಿವೃತ್ತ ಅರ್ಥಶಾಸ್ತ್ರ ಉಪನ್ಯಾ ಸಕರು ಆದ ಏನ್.ಬಸವರಾಜ್ ರವರು ಮಾತನಾಡುತ್ತಾ ಜೋಳದರಾಶಿ ದೊಡ್ಡನಗೌಡರೂ ನಾಟಕ,ಸಾಹಿತ್ಯ, ಗಮಕ,ಕಲೆಗೆ ಮಾಡಿದ ಅಪಾರ ಸೇವೆಯನ್ನು ಸ್ಮರಿಸಿದರು. ತಾಯಿ ರುದ್ರಮ್ಮ ಹಾಗೂ ತಂದೆ ಪಂಪನಗೌಡರ ಮಗನಾಗಿ 1910 ಜುಲೈ 27 ರಂದು ಜನಿಸಿದರು.

ಜೋಳದರಾಶಿಯ ಅಯ್ಯಾ ನವರ ಶಾಲೆ ಅಥವ ಗುಡಿ ಬಡಿ ಯಲ್ಲಿ 4ನೇ ತರಗತಿ ವರೆಗೆ ಓದಿದರು.ಆದರೆ ಮುಂದೆ ಅವರು ನಾಟಕ,ರಂಗಭೂಮಿಯ ಸೇವೆಯಲ್ಲಿ ತೊಡಗಿಕೊಂಡರು.ಗಡಿ ಭಾಗದಲ್ಲಿದ್ದುದರಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ ಸಾಹಿತ್ಯ ರಚನೆ ಮಾಡಿದರು.40 ಪುಸ್ತಕಗಳನ್ನು ಬರೆದಿದ್ದಾರೆ.ಗಮಕ ಕಲೆಗೆ ಅವರಿತ್ತ ಕೊಡುಗೆ ಅಪಾರ. ಬಳ್ಳಾರಿ ರಾಘವ ರ ಶಿಷ್ಯರಾಗಿ ನಾಟಕ ರಂಗಕ್ಕೆ ಅಪಾರ ಸೇವೆ ಮಾಡಿದರು.1994 ರ ಮೇ 10 ರಂದು ಇಹಲೋಕ ತ್ಯಜಿಸಿದರು. ಹೋಗಿ ಬರ್ತೀನಯ್ಯ ನಮ್ಮಊರಿಗೆ ಎಂಬ ಹಾಡನ್ನು ಇದನ್ನೇ ತೆಲುಗುನಲ್ಲಿ ಪೋಯಿ ವಸ್ತಾ ನಂದಿ ಮಾ ಇಂಟಿಕಿ ಎಂಬ ಹಾಡನ್ನು ಬ ರೆದು ಅದರಂತೆ ಮರಳಿ ಬಾರದಊರಿಗೆ ತೆರಳಿದರು. ಆದರೆ ಅವರು ಮಾಡಿದ ಸೇವೆ ಅಪಾರವೆಂದರು.
ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಹಾಗು ಆಂದ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಗೌಡರ ಕುಟುಂಬದವರದ ಶ್ರೀ ಕೆ ಪೊಂಪನಗೌಡರುರವರು ಗೌಡರ ಸಾದನೆಗಳನ್ನು ಸ್ಮರಿಸಿದರು. ವಂದನಾರ್ಪಣೆಯನ್ನು ಸಹ ಕಾರ್ಯದರ್ಶಿ ಎಂ.ರಾಮಾಂಜನೇಯುಲು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಕೆ ಚನ್ನಪ್ಪ, ಉಪಾಧ್ಯಕ್ಷ ರಾದ ಶ್ರೀ ರಮೇಶ್ ಗೌಡ ಪಾಟೀಲ್,ಗೌರವ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್,ಕೆ.ರಾಮಾಂಜನೇಯಲು, ಎನ್ ಪ್ರತಾಪ್ ರೆಡ್ಡಿ,ಕೆ ಕೃಷ್ಣ, ಸಿ ಎ ಚೌದರಿ, ಜಿ ಪ್ರಭಾಕರ,ಕೆ ಶ್ಯಾಮ ಸುಂದರ್,ಕೆ ಪೊಂಪನ ಗೌಡ, ಬಿ ಎಂ ಬಸವರಾಜ್,ಪಿ ಶ್ರೀನಿವಾಸಲು, ಎನ್ ಶ್ರೀನಿವಾಸ ರೆಡ್ಡಿ, ಶಿವಶ್ವರ ಗೌಡ, ಶೇಷ ರೆಡ್ಡಿ, ಕಾಳಿದಾಸ,ಭೀಮನೇನಿ ಭಾಸ್ಕರ್ ,ಕಪ್ಪಗಲ್ಲು ಪ್ರಭುದೇವ,ಜಿ ಆರ್ ವೆಂಕಟೇಶಲು, ರಮಣಪ್ಪ ಭಜಂತ್ರಿ ಮತ್ತು ಗೌಡರ ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!