
ನಾಳೆ ಕೊಪ್ಪಳಕ್ಕೆ ಕೆಎಸ್ ಈಶ್ವರಪ್ಪ
ಸಂಗಣ್ಣ ಕರಡಿ ಉಪವಾಸಕ್ಕೆ ಬೆಂಬಲ
ಕೊಪ್ಪಳ, 06- ನಾಳೆ ಮಂಗಳವಾರ ದಿ. 07 ಬೆಳಿಗ್ಗೆ 10 ಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಕೊಪ್ಪಳಕ್ಕೆ ಆಗಮಿಸಲಿದ್ದಾರೆ.
ಬಿಜೆಪಿ ರಾಜ್ಯ ನಾಯಕರಾದ ಕೆ ಎಸ್ ಈಶ್ವರಪ್ಪ ಅವರು ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲಿಸಲಿದ್ದಾರೆ.
ನಂತರ ಬರ ಅಧ್ಯಯನಕ್ಕಾಗಿ ಕೊಪ್ಪಳ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.