
ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಸಿದ್ದರಾಮಯ್ಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಉದ್ಘಾಟನೆಗಾಗಿ ವಿಜಯನಗರ ಜಿಲ್ಲೆಯ ಹಂಪಿಯ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ನವೆಂಬರ್ 2ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ.
ಅಂದು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಹೊರಟು ಬೆಳಗ್ಗೆ 10.50ಕ್ಕೆ ಗಿಣಿಗೇರಾ ಏರ್‌ಸ್ಟಿçಪ್‌ಗೆ ಆಗಮಿಸುವರು. ಅಲ್ಲಿಂದ ಬೆಳಗ್ಗೆ 10.55ಕ್ಕೆ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಹೊಸಪೇಟೆಗೆ ಪ್ರಯಾಣ ಬೆಳೆಸಿ ಬೆಳಗ್ಗೆ 11.15ಕ್ಕೆ ಹೊಸಪೇಟೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವರು.
ಸಂಜೆ 4.45ಕ್ಕೆ ಹೊಸಪೇಟೆಯಿಂದ ರಸ್ತೆಯ ಮೂಲಕ ನಿರ್ಗಮಿಸಿ ಸಂಜೆ 5 ಗಂಟೆಗೆ ಹಂಪಿಗೆ ಆಗಮಿಸುವರು. ಸಂಜೆ 5.30ಕ್ಕೆ ಹಂಪಿಯ ಶ್ರೀ ವಿರುಪಾಕ್ಷ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸಂಭ್ರಮ -50 ಜ್ಯೋತಿ ರಥದ ದೀಪ ಪ್ರಜ್ವಲನೆ ಮಾಡುವರು. ಸಂಜೆ 5.50ಕ್ಕೆ ಅದೇ ಸ್ಥಳದಲ್ಲಿ ಕನ್ನಡಾಂಬೆಗೆ ನುಡಿನಮನ, ಧರ್ಮಗಳ ಸಂದೇಶ ಹಾಗೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವರು. ರಾತ್ರಿ 7.30ಕ್ಕೆ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡುವರು. ಬಳಿಕ ಹಂಪಿಯಲ್ಲಿ ವಾಸ್ತವ್ಯ ಮಾಡುವರು.
ನವೆಂಬರ್ 3ರ ಬೆಳಗ್ಗೆ 9 ಗಂಟೆಗೆ ಕಮಲಾಪುರದಿಂದ ನಿರ್ಗಮಿಸಿ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ ಅವರು ತಿಳಿಸಿದ್ದಾರೆ.