
ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಪ್ರತಿಯೊಬ್ಬರ ಕಲಾವಿದರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ : ಮುರಾರಿ ಭಜಂತ್ರಿ
ಕರುನಾಡ ಬೆಳಗು ಸುದ್ದಿ
ಕುಕನೂರು,2-ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಪ್ರತಿಯೊಬ್ಬರ ಕಲಾವಿದರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶ್ರೀಪಂಚಾಕ್ಷರ ಸಂಗೀತ ಪಾಠಶಾಲೆಯ ಅಧ್ಯಕ್ಷ ಹಾಗೂ ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಹೇಳಿದರು.
ಪಟ್ಟಣದ ಶ್ರೀ ಪಂಚಾಕ್ಷರಿ ಸಂಗೀತ ಪಾಠಶಾಲೆಯಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ಕ್ರೀಡೆ ಗ್ರಾಮಾಭಿವೃದ್ಧಿ ಸಂಸ್ಥೆ ಕುಕನೂರು ವತಿಯಿಂದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 132 ನೇ ಜಯಂತೋತ್ಸವ ನಿಮಿತ್ಯ ಭಾವಚಿತ್ರಕ್ಕೆ ಪುಷ್ಪಾಪಣೆ ಮಾಡಿ ಮಾತನಾಡಿದ ಅವರು, ಹಾನಗಲ್ಲ ಕುಮಾರೇಶ್ವರರ ಶಿಷ್ಯರಾಗಿ ಅವರ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿ ಮಹಾನ್ ಗಾಯಕರಾಗಿ ರಾಜ್ಯದ ಉದ್ದಗಲಕ್ಕೂ ಸಂಚಾರ ಕೈಗೊಂಡು ಸಂಚಾರಿ ಸಂಗೀತದ ಮೂಲಕ ಅಲ್ಲಲ್ಲಿ ಸಂಗೀತ ಪಾಠಶಾಲೆಯನ್ನ ಪ್ರಾರಂಭಿಸಿ ಅಲ್ಲೊಬ್ಬ ಸಂಗೀತ ಶಿಕ್ಷಕರನ್ನು ನೇಮಿಸಿ ಸಂಗೀತಕ್ಕಲೆಯನ್ನು ನಾಡಿನ ಮೂಲೆ ಮೂಲೆಗೂ ಪಸರಿಸಿದ ಕೀರ್ತಿ ಇವರದು. ಗದುಗಿನಲ್ಲಿ ವೀರೇಶ್ವರ ಪುಣ್ಯಶ್ರಮವನ್ನು ಪ್ರಾರಂಭಿಸಿ ಲಕ್ಷಾಂತರ ಸಂಗೀತ ಕಲಾವಿದರನ್ನು ತಯಾರು ಮಾಡಿದ್ದಾರೆ.
ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸ್ವೀಕರಿಸಿ ತಮ್ಮ ವಿದ್ಯೆಯನ್ನು ಸಂಪೂರ್ಣವಾಗಿ ಅವರಿಗೆ ದಾರಿಯರದು ನಾಡಿಗೆ ನಡೆದಾಡುವ ದೇವರನ್ನು ಕೊಟ್ಟು ಹೋಗಿದ್ದಾರೆ. ಸಂಗೀತ ಇರೋವರೆಗೂ ಅವರ ಕೀರ್ತಿ ಅಜರಾಮರವಾಗಿದೆ ಎಂದರು.
ಈ ಸಂದರ್ಭದಲ್ಲಿ ಜನಪದ ಸಹನಾಯಿ ಕಲಾವಿದ ಬಸವರಾಜ ಕಿತ್ತೂರ್, ಹಿಂದುಸ್ತಾನಿ ಕ್ಲಾರಿನೆಟ್ ವಾದಕ ಸಣ್ಣ ಯಮನೂರಪ್ಪ ಕುಕನೂರ, ಯುವ ಕಲಾವಿದ ಮುಕುಂದ ಭಜಂತ್ರಿ, ಯುವ ಮುಖಂಡ ರಫೀಸಾಬ್ ಜೋಕಾಲಿ, ಸುಮಂತ್ ಭಜಂತ್ರಿ, ಚಿದಾನಂದ ಮಡಿವಾಳ, ಸೇರಿದಂತೆ ಪಂಚಾಕ್ಷರಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು