
ಪಟಾಕಿ ಬದಲು- ಮನೆ ಮನೆಯಲ್ಲಿ ದ್ವೀಪ ಹಚ್ಚಿ – ನಾಗೇಶ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 9 – ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವ ಬದಲು ಪ್ರತಿ ಮನೆ ಮನೆಯಲ್ಲಿ ಎಲ್ಲರೂ ದ್ವೀಪ ಹಚ್ಚುವ ಮೂಲಕ ಈ ನಾಡಿಗೆ ಬೆಳಕನ್ನು ನೀಡುವ ದೀಪಾವಳಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಿರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು
ಸಂಜಿವೀನಿ ಕನಾ೯ಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವಧ೯ನೆ ಸಂಸ್ಥೆ ಬೆಂಗಳೂರು ಕೌಶಲ್ಯಾಭಿವೈದ್ದಿ ಉದ್ದೇಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಪಂಚಾಯತ್ ಕೊಪ್ಪಳ ಮತ್ತು ತಾಲೂಕು ಪಂಚಾಯತ್ ಯಲಬುರ್ಗಾ ವತಿಯಿಂದ
ದೀಪ ಸಂಜೀವಿನಿ ಕಾರ್ಯಕ್ರಮ ಅಂಗವಾಗಿ ಯಲಬುರ್ಗಾ ಪಟ್ಟಣದ ಪಟ್ಟಣ ಪಂಚಾಯಿತಿಯ ಮುಂಭಾಗದಲ್ಲಿ
ದೀಪ ಸಂಜೀವಿನಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮವನ್ನು ದ್ವೀಪ ಹಚ್ಚುವ ಮೂಲಕ ಉದ್ಘಾಟಸಿ
ಮಾತನಾಡಿದ ಅವರು ರಾಜ್ಯ ಸರ್ಕಾರದ ಸೂಚನೆಯಂತೆ, ತಾಲೂಕು ಪಂಚಾಯತ್ ಸಹಯೋಗದೊಂದಿಗೆ, ಸಂಜಿವೀನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರು
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪ್ರತಿ ಮನೆ ಮನೆಯಲ್ಲಿ ಮಣ್ಣಿನಿಂದ ತಯಾರಿಸಲಾದ ದೀಪಗಳನ್ನು ಹಚ್ಚಿ ಬೆಳಕು ಚೆಲ್ಲುವಂತೆ ಮಹಿಳೆಯರು ಮಣ್ಣಿನಿಂದ ತಯಾರಿಸಲಾದ ದೀಪಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲಾಗಿದ್ದು,
ಇದು ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಲಾದ ದೀಪಗಳನ್ನು ಮಾರಾಟ ಮಾಡುವದರಿಂದ ಸದಸ್ಯರುಗಳಿಗೆ ಆದಾಯ ಬರುವದು ಮತ್ತು ಮಹಿಳೆಯರು ಕೈಗೊಂಡ ದೀಪಗಳು.ಮುತ್ತಿನಹಾರಗಳು ಶ್ಯಾಲುಗಳು. ಮತ್ತು ಇತರೆ ಉತ್ಪನ್ನ ಚಟುವಟಿಕೆ ತಯಾರಿಕೆಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಉಪಯೋಗವಾಗಲೆಂದು ದೀಪ ಸಂಜಿವೀನಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ಹೇಳಿದರು ನಂತರ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಕಾಯ೯ಕ್ರಮ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ.ಪಂ. ಮುಖ್ಯಾಧಿಕಾರಿ ನಾಗೇಶ.
ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ.ತಾಲೂಕು ಸಂಜೀವಿನಿ ವ್ಯವಸ್ಥಾಪಕರು ,ಉದಯಕುಮಾರ್ ಎನ್. ಕೆ. ಸಂಜೀವಿನಿ ಸಿಬ್ಬಂದಿಗಳಾದ ಜಾಕೀರಹುಸೇನ. ಶರಣಪ್ಪ. ಪೂಜಾ. ಮತ್ತು ಇತರರು
ತಾಲೂಕಿನ ಸ್ವಸಹಾಯ ಸಂಘಗಳ ಮಹಿಳೆಯರು. , ಶ್ರೀನಿಧಿ ಸ್ವ ಸಹಾಯ ಮಹಿಳಾ ಸಂಘದ ಮಹಿಳೆಯರು. ಶ್ರೀವಿದ್ಯಾ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಸಾ/ಬಳೂಟಿಗಿ ಮಹಿಳೆಯರು ಭಾಗವಹಿಸಿದ್ದರು.ಮತ್ತು ಪ. ಪಂ. ಸದಸ್ಯರಾದ ವಸಂತ ಕುಮಾರ್ ಬಾವಿಮನಿ.
ಅಂದಯ್ಯ ಕಳ್ಳಿಮಠ.ಶಿವಕುಮಾರ ಸರಗಣಾಚಾಯ೯.ತಾಲೂಕು ಪಂಚಾಯಿತಿ. ಪಟ್ಟಣ ಪಂಚಾಯಿತಿ. ಸಿಬ್ಬಂದಿಗಳು ಹಾಗೂ ಇತರರು ಭಾಗವಹಿಸಿದರು