
ಪತ್ರಿಕಾ ದಿನಾಚಾರಣೆ ನಿಮಿತ್ತ, ವೈದ್ಯರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ಪತ್ರಕರ್ತರು ವಸ್ತು ನಿಷ್ಟೆ ವರದಿಗಳನ್ನು ಪ್ರಕಟಿಸಿ ಅನ್ಯಾಯಕ್ಕೆ ಒಳಗಾದವರ ಕಣ್ಣನ್ನು ತೆರೆಸಬೇಕು, ಯಾವುದೇ ಕಾರಣಕ್ಕೂ ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸವಾಗಬಾರದು, ಸoವಿಧಾನದ ನಾಲ್ಕನೇ ಅಂಗ ಎನ್ನುವ ಪತ್ರೀಕಾರಂಗಕ್ಕೆ ತನ್ನದೇ ಆದ ವೈಶಿಷ್ಟವಿದೆ, ಸುದ್ದಿಗಳನ್ನು ಹೆಚ್ಚು ವೈಭವಿಕರಿಸದೇ ವಾಸ್ತವ, ನಿಖರ ಮಾಹಿತಿ ನೀಡಿದಾಗ ಮಾತ್ರ ಸಮಾಜ ಸ್ವಾಸ್ತ್ಯವಾಗಿರಲಿದೆ ಎಂದು ಆರ್ ವಿಜೆ ಆಸ್ಪತ್ರೆಯ ಡಾ. ವಿ.ಸುರೇಶ್ ಅವರು ಹೇಳಿದರು.
ನಗರದ ಶ್ರೀ ಕುಮಾರಸ್ವಾಮಿ ದೇವಾಲಯದ ಬಳಿ ಪತ್ರಿಕಾ ದಿನಾಚರಣೆ ನಿಮಿತ್ತ ಸೋಮವಾರ ಪತ್ರಕರ್ತರ ಸ್ನೇಹ ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರಳ, ಅರ್ಥಪೂರ್ಣ ಸಮಾರಂಭದಲ್ಲಿ ಪ್ರೀತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಾಡದಿರುವಂತಹ ಕೆಲಸ ಪತ್ರಿಕಾರಂಗ ಮಾಡುತ್ತಿದೆ, ಯಾವುದೇ ಸುದ್ಧಿಗಳಿರಲಿ ವಾಸ್ತವ, ನಿಖರವಾದ ಮಾಹಿತಿ ಇರಬೇಕು. ಪರ್ತ್ರಕರ್ತರು ಬಡವರು, ಮಹಿಳೆಯರು, ವಿಶಿಷ್ಟಚೇತನರು, ದೇಶಕ್ಕೆ ಅನ್ನ ನೀಡುವ ರೈತರು ಸೇರಿದಂತೆ ಎಲ್ಲ ವರ್ಗದವರ ಪರವಾಗಿ ಕೆಲಸ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಬರವಣಿಗೆ ಮೂಲಕ ನ್ಯಾಯ ಕಲ್ಪಿಸಲು ಮುಂದಾಗಬೇಕು ಎಂದರು.
ಡಾ.ಶ್ರೀನಿವಾಸ್ ಅವರು ಮಾತನಾಡಿ, ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೇ ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ನಿಜಕ್ಕೂ ಅವರ ಕಾರ್ಯ ಶ್ಲಾಘನೀಯ, ಸುದ್ದಿ ಸಣ್ಣದು, ದೊಡ್ಡದು ಎನ್ನುವ ಮನೋಭಾವ ಇಲ್ಲದೆ ಸಮಾಜದಲ್ಲಿ ನಡೆಯುವ ಪ್ರಸ್ತುತ ವಿದ್ಯಮಾನಗಳ ಕುರಿತು ಬಿತ್ತರಿಸುತ್ತಿದ್ದಾರೆ, ಪ್ರತಿಯೊಬ್ಬ ವರದಿಗಾರರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವೆ ಎಂದರು.
ಇದಕ್ಕೂ ಮುನ್ನ ಪತ್ರಿಕಾ ದಿನಾಚರಣೆ ನಿಮಿತ್ತ ವೈದ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನಗರದ ಹೆಸರಾಂತ ವೈದ್ಯರಾದ ಡಾ.ವಿ.ಸುರೇಶ್ ಹಾಗೂ ಡಾ.ಶ್ರೀನಿವಾಸ್ ಸೇರಿದಂತೆ ಇತರರನ್ನು ಸನ್ಮಾನಿಸಿ, ಆತ್ಮೀಯವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಇತರರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಜಂಬುನಾಥ್, ವೆಂಕಟೇಶ ದೇಸಾಯಿ, ಆಸ್ಪತ್ರೆಯ ಶ್ರೀಕಾಂತ್, ಸಿಬ್ಬಂದಿಗಳಾದ ಮಲ್ಲಯ್ಯ, ಮಂಜುಳಾ ಮಾಲಿ ಪಾಟೀಲ್, ಪವಿತ್ರ, ಲಕ್ಷ್ಮಿ, ರೋಗಿಗಳ ಸಂಬಂಧಿಕರಾದ ಚಿರಂಜೀವಿ, ರಾಜೇಶ್ ಸೇರಿದಂತೆ ಇತರರು ಇದ್ದರು.