
ಪಾವತಿಸಿದ್ದು 20 ರೂಪಾಯಿ ಪಡೆದಿದ್ದು ಎರಡು ಲಕ್ಷ
ಕರುನಾಡ ಬೆಳಗು ಸುದ್ದಿ
ಕುಕನೂರು, 3- ತಾಲೂಕಿನ ದ್ಯಾಂಪರ ಗ್ರಾಮದ ರಾಮಪ್ಪ ಮಲ್ಲಪ್ಪ ನೋಟಗಾರ್ ಎಂಬುವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ರಾಮಪ್ಪ ನೋಟಗಾರ ಕುಕನೂರಿನ ಎಸ್‌ಬಿಐ ಬ್ಯಾಂಕ್ ಬ್ಯಾಂಕಿನಲ್ಲಿ ತಮ್ಮ ಉಳಿತಾಯ ಖಾತೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯಲ್ಲಿ 20 ರೂಪಾಯಿ ಕೊಟ್ಟು ವರ‍್ಷಿಕ ಯೋಜನೆಯಲ್ಲಿ ಚಂದಾದಾರರಾಗಿದ್ದರು, ಈ ಯೋಜನೆಯಲ್ಲಿ ಚಂದಾದರಾದವರಿಗೆ ಅವರ ಮರಣದ ನಂತರ ಆ ಖಾತೆ ನಾಮಿನಿಗೆ ಎರಡು ಲಕ್ಷ ರೂಪಾಯಿ ಸಂದಾಯವಾಗುತ್ತದೆ.
ಈ ಯೋಜನೆಯ ಪ್ರಕಾರ ರಾಮಪ್ಪ ನೋಟಗಾರ ಎಂಬವರ ಮಗನಾದ ಮಲ್ಲಿಕರ‍್ಜುನ್ ನೋಟಗಾರ ಅವರಿಗೆ ಕುಕನೂರು ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಶಿವಕುಮಾರ್, ಪ್ರಸಾದ್ ಎರಡು ಲಕ್ಷ ರೂಪಾಯಿದ ಕ್ರೆಡಿಟ್ ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಆನಂದ್, ಸುಪ್ರಿಯಾ, ವಾಸು, ಗೋಪಾಲ್, ಅರೀಫ್ ಇತರರು ಇದ್ದರು.