
ಪೌರಾಯುಕ್ತರ ವಿರುದ್ದ ಅಶ್ಲಿಲ ಪದ ಬಳಕೆ : ಕಾರ್ಮಿಕರಿಂದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 13- ನಗರದ ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ ವಿರುದ್ದ ನಗರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಮಾಲಾಶ್ರೀ ಯವರ ಪತಿ ಕಾಂಗ್ರೇಸ್ ಮುಖಂಡ ಸಂದಿಪ ಮೋಬೈಲ ವಾಟ್ಸಪ್ ಗ್ರೂಪ್ ಗೆ ಅವಾಚ್ಛ ಶಬ್ದಗಳ ಪದ ಬಳಕೆ ಮಾಡಿದ ಆಡಿಯೋ ವೈರಲ್ ಆಗುತ್ತಿದ್ದಂತೆ ನಗರಸಭೆ ಪೌರಕಾರ್ಮಿಕರು ನಗರ ಪೋಲಿಸಠಾಣೆ ಎದುರು ಸಂದಿಪ ಬಂಧಿಸಲು ಒತ್ತಾಯಿಸಿ ನಗರಸಭೆ ಆವರಣದಲ್ಲಿ ಪ್ರತಿಭಟನೆಗೆ ಇಳಿದರು.
ವಿಷಯ ತಿಳಿಯುತ್ತಿದಂತೆ ಪಕ್ಷಾತೀತವಾಗಿ ನಗರಸಭೆ ಸದಸ್ಯರು ಪ್ರತಿಭಟನೆಗೆ ಬೆಂಬಲಸಿ ಶ್ಯಾಮಿದ ಮನಿಯಾರ,ಮನೋಹರಸ್ವಾಮಿ ಮುದೆನೂರ,ಖಾಸಿಂಸಾಬ ಗದ್ವಾಲ್,ರಮೇಶ ಚೌಡ್ಕಿ,ಉಸ್ಮಾನ ಬಿಚಗತ್ತಿ,ಸುನಿತಾ ಶ್ಯಾವಿ,ವಾಸುದೇವ ನವಲಿ,ಜುಬೇರ,ಮಸ್ತಾಕ ಅಲಿ,ಉಮೇಶ ಸಿಂಗನಾಳ ಮಾತನಾಡಿ ಕಾಂಗ್ರೇಸ್ ಮುಖಂಡ ಸಂದಿಪ ಪದ ಬಳಕೆ ಆಡಿಯೋ ವೈರಲ್ ನಿಂದ ಇಡಿ ಮಾನವ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ತಕ್ಷಣವೇ ಪೋಲುಸರು ಕೇಸು ದಾಖಲಿಸಿಕೋಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ರು ಪೋಲಿಸಠಾಣೆ ತೆರಳಿ ಕೇಸು ದಾಖಲಿಸಲು ಒತ್ತಾಸಿದರು.
ನಗರಸಭೆ ಸದಸ್ಯರುಗಳಾದ ಸೋಮನಾಥ ಭಂಡಾರಿ,ಶರಭೋಜಿ,ನಿಲಕಂಠ,ಮೌಲಾಸಾಬ,ರಾಜಮಹಮ್ಮದ,ಅಮರೆಗೌಡ,ರಾಚಪ್ಪ ಸಿದ್ದಾಪೂರ,ದೆವಪ್ಪ,ಹುಸೆನಪ್ಪಹಂಚಿನಾಳ,ಬಸವರಾಜ ಮ್ಯಾಗಳಮನಿ,ನಾಗರಾಜ ಕೋತ್ವಾಲ ಮುಂತಾದವರು ಉಪಸ್ಥಿತರಿದ್ದು ಖಂಡಿಸಿದರು.
ಕೇಸು ದಾಖಲು-ನಗರ ಪೋಲಿಸ ಠಾಣೆಯಲ್ಲಿ ಸಂದಿಪ ವಿರುದ್ಧ ಪೌರಾಯುಕ್ತರು ಕೋಟ್ಟ ದೂರಿನ್ವಯ ಕೇಸು ದಾಖಲಿಸಲಾಗಿದೆ ಎಂದು ನಗರ ಪೋಲಿಸಠಾಣೆ ಪಿಐ ಪ್ರಕಾಶ ಮಾಳಿ ತಿಳಿಸಿ ತನಿಖೆ ಕೈಗೋಂಡಿದ್ದವೆ ಎಂದರು.
ಖಂಡನೆ-ದಲಿತಮುಖಂಡ ಹುಸೆನಪ್ಪ ಹಂಚಿನಾಳ, ನಗರಸಭೆ ಸದಸ್ಯ ಸೋಮನಾಥ ಭಂಡಾರಿ ಪ್ರಕರಣ ಖಂಡಿಸಿ ಸಂದಿಪ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿದರು.