WhatsApp Image 2024-06-26 at 5.53.47 PM

ಪ್ಯಾಟಿ ಲಿವರ್ ಕಾಯಿಲೆಯನ್ನು ನಿರ್ಲಕ್ಷಿಸಬೇಡಿ ಸಾವು ಸಂಭವಿಸಬಹುದು : ಡಾ.ರವಿಕಿರಣ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 26- ಪ್ಯಾಟಿ ಲಿವರ್ ಕಾಯಿಲೆ ಎಲ್ಲಾ ರೀತಿಯ ಜನರಿಗೆ ಬರುವ ಕಾಯಿಲೆಯಾಗಿದ್ದು ಇದನ್ನು ನಿರ್ಲಕ್ಷಿಸಿದಲ್ಲಿ ದೇಹದ ಬಹು ಅಂಗಾಂಗ ವೈಫಲ್ಯದಿಂದ ಸಾವು ಸಹ ಸಂಭವಿಸಬಹುದು ಇದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದು ಎಂದು ನಾರಾಯಣ ಲಿವರ್ ಟ್ರಾನ್ಸ್ಪ್ಲಾಂಟನ ತಜ್ಞ ವೈದ್ಯರಾದ ಡಾ.ರವಿಕಿರಣ್ ತಿಳಿಸಿದರು.

ಅವರು ಇಂದು ನಗರದ ನಕ್ಷತ್ರ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಪ್ಯಾಟಿ ಲಿವರ್ ಕಾಯಿಲೆಯಲ್ಲಿ ಪಿತ್ತ ಜನಕಾಂಗ (ಲಿವರ್) ಹಾನಿಗೊಂಡು ಉಂಟಾಗುವ ಕಾಯಿಲೆಯಾಗಿದ್ದು ಇದು ಮದ್ಯಪಾನಿಗಳಲ್ಲಿ ಮಾತ್ರವಲ್ಲದೆ ಮದ್ಯಪಾನ ಮಾಡದವರಲ್ಲಿಯೂ ಸಹ ಈ ಕಾಯಿಲೆಯನ್ನು ಕಾಣಬಹುದಾಗಿದೆ, ಇದನ್ನು ಆರಂಭದಲ್ಲಿ ರಕ್ತಪರೀಕ್ಷೆ ಮತ್ತು ಅಲ್ಟಾçಸೌಂಡ್ ಸ್ಕಾö್ಯನ್ ಮುಖಾಂತರ ಪತ್ತೆ ಮಾಡಬಹುದು, ಆದರೆ ಇದರ ಯಾವ ಗುಣಲಕ್ಷಣಗಳು ಮೊದಲೇ ತಿಳಿಯುವುದಿಲ್ಲ 40 ವರ್ಷಗಳು ದಾಟಿದ ಎಲ್ಲರೂ ಕಾಲ ಕಾಲಕ್ಕೆ ಪರೀಕ್ಷೆಗಳನ್ನು ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಖಾಳಜಿ ಹೊಂದಿರಬೇಕೆಂದರು.

ಈ ಕಾಯಿಲೆಗೆ ತುತ್ತಾದವರು ಯಕೃತ್ತಿನ ಕಾಯಿಲೆ, ಹೊಟ್ಟೆ ಮತ್ತು ಶ್ವಾಸಕೋಶದಲ್ಲಿ ದ್ರವದ ಶೇಖರಣೆ ಆಗುತ್ತದೆ ಮತ್ತು ಮೂತ್ರಪಿಂಡದ ಕಾರ್ಯವೂ ಅಸಹಜವಾಗಿತ್ತದೆ, ಇವೆಲ್ಲವೂ ಯಕೃತ್ತಿನ ಕಾಯಿಲೆಯ ಲಕ್ಷಣಗಳಾಗಿವೆ. ಆಲ್ಕೊಹಾಲ್ ಸೇವಿಸದಿದ್ದರೂ ಅಥವಾ ಯಾವುದೇ ಹೆಪಟೈಟಿಸ್ ವೈರಸ್ ಸೋಂಕನ್ನು ಹೊಂದಿದ್ದರೂ ಈ ಲಿವರ್ ಕಾಯಿಲೆ ಬಂದರೆ ಆಶ್ಚರ್ಯಪಡುವಂತದ್ದೇನು ಇಲ್ಲ, ನಮ್ಮ ಜೀವನ ಶೈಲಿಯಿಂದ ಇಂತ ಮಾರಣಾಂತಿಕ ರೋಗಗಳಿಗೆ ದೇಹ ತುತ್ತಾಗುತ್ತದೆ ಎಂದರು.

ಪಿತ್ತಜನಕಾಂಗದ ಕಾಯಿಲಿಗೆ ತುತ್ತಾದವರನ್ನು ಉಳಿಸುವ ಏಕೈಕ ಮಾರ್ಗವೆಂದರೆ ಯಕೃತ್ತು ಕಸಿ ಮಾಡುವುದಾಗಿದೆ. ರೋಗಿಯ ಸಂಬAಧಿಕರಿAದ ಲಿವರ್ ದಾನದಿಂದ ಯಕೃತ್ತು ಕಸಿ ಮಾಡಿಸಿಕೊಂಡು ಅವರು ಎರಡನೇ ಜೀವನವನ್ನು ಪಡೆಯಬಹುದಾಗಿದೆ, ಆದರೂ ಕಾಲ ಕಾಲಕ್ಕೆ ಔಷಧಿ ತೆಗೆದುಕೊಳ್ಳುತ್ತಾ ಚೆಕಪ್ ಮಾಡಿಸಿಕೊಳ್ಳತ್ತಾ ಇರಬೇಕಾಗುತ್ತದೆ. ಈಗ ಈ ಚಿಕಿತ್ಸೆ ನಮ್ಮ ನಾರಾಯಣ ಹೃದಯಾಲಯದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂದರೆ 18-20 ಲಕ್ಷ ರೂಪಾಯಿಗಳಲ್ಲಿ ಮಾಡಲಾಗುವುದು ನಮ್ಮಲ್ಲಿ ನುರಿತ ವೈದ್ಯರುಗಳಾದ ಡಾ ಸಂಜಯ್ ಗೋಜಾ, ನಿರ್ದೇಶಕ ಮತ್ತು ಕ್ಲಿನಿಕಲ್ ಲೀಡ್, ಹಿರಿಯ ಸಲಹೆಗಾರ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ, ಡಾ ಮನೋಜ್ ಸಿಂಗ್, ಡಾ ವರುಣ್ ಮಹಾಬಲೇಶ್ವರ್, ಡಾ ರಾಘವೇಂದ್ರ ಸಿ ವಿ (ಯಕೃತ್ತು ಕಸಿ ಶಸ್ತ್ರಚಿಕಿತ್ಸಕರು) ಡಾ ರವಿ ಕಿರಣ್, ಡಾ ವಿನಯ್ (ಹೆಪಟಾಲಜಿಸ್ಟ್ಗಳು) ಮತ್ತು ಡಾ ವಿದ್ಯಾಧರ್ ಮೆಟ್ರಿ ವೈದ್ಯರುಗಳಿದ್ದಾರೆ ಉತ್ತಮವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದೆಂದರು.

ಭಾರತದಲ್ಲಿ 80% ಕ್ಕಿಂತ ಹೆಚ್ಚು ಯಕೃತ್ತಿನ ಕಸಿ ನೇರ ದಾನಿಗಳನ್ನು ಒಳಗೊಂಡಿರುತ್ತದೆ, ಸತ್ತ ದಾನಿಗಳಿಂದ ಪಡೆದ ಲಿವರ್ ಕಸಿಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯ ಧರಗಳು ಕಡಿಮೆಯಿರುತ್ತದೆ ಆಲ್ಕೊಹಾಲಿಕ್ ಯುಕ್ತವಲ್ಲದ ಸಿರೋಸಿಸ್, ಆಲ್ಕೊಹಾಲ್ ಪಿತ್ತ ಜನಕಾಂಗದ ಕಾಯಿಲೆ, ಹೆಪಟೈಟಿಸ್ ಬಿ ಮತ್ತು ಸಿ, ಹೆಪಟೈಟಿಸ್ ಕಾರಣದಿಂದಾಗಿ ತೀವ್ರವಾದ ಪಿತ್ತಜನಕಾಂಗದ ವೈಫಲ್ಯ ಮತ್ತು ಟಿಬಿ ವಿರೋಧಿ ಔಷಧಿಗಳಂತಹ ಔಷಧಿಗಳ ಸೇವನೆಯ ಕಾರಣಗಳಿಂದ ಯಕೃತ್ತಿನ ವೈಫಲ್ಯವು ಉಂಟಾಗಬಹುದು, ಇದಲ್ಲೆದಕ್ಕೂ ನಮ್ಮ ನಾರಾಯಣ ಹೆಲ್ತ್ ಲಿವರ್ ಟ್ರಾನ್ಸ್ಪ್ಲಾಂಟ್‌ನಲ್ಲಿ ಚಿಕಿತ್ಸೆ ಲಭ್ಯವಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿಥುನ್ ಕುಮಾರ್, ಪಿತ್ತ ಜನಕಾಂಗ ಕಸಿ ಮಾಡಿಕೊಂಡ ಸತ್ಯನಾರಾಯಣ, ಲಿವರ್ ದಾನಿಗಳಾದ ಮಾಧವಿ, ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!