
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಾನಸಿಕ ತಜ್ಞ ಡಾಕ್ಟರ್ ಲಕ್ಷ್ಮಿ ದೇವಿಯ ಪಾಟೀಲ
ಯಲಬುರ್ಗಾ, 21- ಪ್ರತಿನಿತ್ಯ ಮನುಷ್ಯನ ಒತ್ತಡ ಬದುಕಿ ನಲ್ಲಿ ಇತ್ತೀಚೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾ ಗುತ್ತಿವೆ. ಮಾನಸಿಕ ಒತ್ತಡ, ಆತಂಕ ಅನಾರೋಗ್ಯಕ್ಕೆ ಕಾರಣ ವಾಗಿದೆ ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೇ ಕಾಳಜಿ ವಹಿಸಬೇಕು ಎಂದು ಮನೋವೈದ್ಯ ಡಾಕ್ಟರ ಲಕ್ಷ್ಮೀದೇವಿ ಪಾಟೀಲ್ ಹೇಳಿದರು.
ತಾಲೂಕಿನ ಹಿರೆವಂಕಲಕುಂಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುನ್ನಾಳ ಗಾಣಧಾಳ ಹಾಗೂ ಹಿರೆ ವಂಕಲಕುಂಟಾ ಆರೋಗ್ಯ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯ ಕಡೇ ಹೆಚ್ಚು ಗಮನಹರಿಸಬೇಕು ನಮ್ಮಲ್ಲಿ ನಾನು ಎಂಬ ಭಾವನೆ ಹೆಚ್ಚಾಗುತ್ತಿದ್ದು, ದುಃಖ ಮತ್ತು ನೋವುಗಳಿಗೂ ಕಾರಣವಾಗುತ್ತಿದೆ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ವಿಪರೀತ ಕಾಳಜಿ ತೆಗೆದುಕೊಂಡು ಅನಗತ್ಯ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆತಂಕವು ಭಯವಾಗಿ ಕಾಡಲಾರಂಭಿಸುತ್ತದೆ.
ಇದೇ ಸ್ಥಿತಿಯಿಂದ ಕ್ರಮೇಣ ಪ್ರತಿ ಸಣ್ಣ ವಿಷಯಗಳಿಗೂ ಭಯ ಪಡುವಂತಾಗುತ್ತದೆ. ಪೋಷಕರ ಪರಿಸ್ಥಿತಿ ಮಕ್ಕಳಲ್ಲೂ ಭಯ ಹುಟ್ಟಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ಸಾರ್ವಜನಿಕರು ದಿನನಿತ್ಯದ ಒತ್ತಡ ಬದುಕಿನಲಿ ಸಂಯಮ, ಸಮಾಧಾನ ಗಣನೀಯ ವಾಗಿ ಕಡಿಮೆಯಾಗುತ್ತಿದೆ. ಅನಗತ್ಯವಾಗಿ ಕೋಪಗೊಳ್ಳುತ್ತಿ ರುವುದು ಸಾಮಾನ್ಯವಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ದೇಹದ ಆರೋಗ್ಯ ದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿ ದರು, ಇದೇ ವೇಳೆ ವಿವಿಧ ಗ್ರಾಮಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸೈಕಾಲಾಜೀಷ್ಟ ಡಾಕ್ಟರ್ ಪುಷ್ಪಾ, ಹಿರೇವಂಕಲಕುಂಟಾ ಸಮುದಾಯ ಆರೋಗ್ಯ ಆಡಳಿತಾಧಿಕಾರಿ ಡಾಕ್ಟರ ರಮೇಶ ಟಿ.ಜೆ. ಗುನ್ನಾಳ, ಪ್ರಾಥ ಮೀಕ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ ದಯಾನಂ ದ, ಗಾಣಧಾಳ ಪ್ರಾಥಮೀಕ ಆರೋಗ್ಯ ಕೇಂದ್ರದ ವೈದ್ಯರಾ ದ ಡಾಕ್ಟರ ರವಿಕಟ್ಟಿಮನಿ, ಹಿರೇವಂಕಲಕುಂಟಾ ವೈದ್ಯರು ಗಳಾದ ಡಾ,ತುಳಜಾರಾಂ ಘಾಟ್ಗೆ, ಹಿರೇವಂಕಲಕುಂಟಾ ದಂತ ವೈಧ್ಯರಾದ ಡಾಕ್ಟರ ಪುಷ್ಪಾವತಿ, ಕ್ಷಯ ರೋಗ ಇಲಾ ಖೆಯ ರಾಘವೇಂದ್ರ ದೇಸಾಯಿ, ಬಸವರಾಜ ಮೇಣಸಗಿ, ಯಶೋಧಾ ಗಡಾದ, ಶೊಸ್ರರತ ಅಧಿಕಾರಿ ಭಾಗ್ಯಲಕ್ಷ್ಮಿ ಬಂ ಗಾರಿ ಗೀತಾ, ರೂಪಾ, ಅಶೋಕ ಹನುಮಂತಪ್ಪ, ಪ್ರಗತಿ, ದಾವಲಸಾಬ, ಗಂಗಮ್ಮ ಅಬೀದಾ, ಚನ್ನಬಸವ ಜಗದೀ ಶ್ ಶಿವಯ್ಯ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು