a5e8e881-3c2d-48f4-af46-ee47cd4e1cba

                                ಬಯಲು ವಿಸರ್ಜನೆಯಿಂದ ಆರೋಗ್ಯಕ್ಕೆ ಕೆಟ್ಟ ಪರಿಣಾಮ – ಸುಬ್ರಮಣ್ಯ

ಕರುನಾಡ ಬೆಳಗು ಸುದ್ದಿ

ಕುಕನೂರ 19-ಬಯಲು ವಿಸರ್ಜನೆಯಿಂದ ಆರೋಗ್ಯಕ್ಕೆ ಹಾಗೂ ಪ್ರಕೃತಿಯ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಸುಬ್ರಮಣ್ಯಅವರು ಹೇಳಿದರು.

ಪಟ್ಟಣದ 8ನೇ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಗಾಳಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಪಟ್ಟಣ ಪಂಚಾಯತಿ ಕಾರ್ಯಾಲಯದಿಂದ ವಿಶ್ವ ಶೌಚಾಲಯ ದಿನಾಚರಣೆ ನಿಮಿತ್ಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ರವಿವಾರ ಹಮ್ಮಿಕೊಂಡಿದ್ದರು.
ಬಯಲು ವಿಸರ್ಜನೆಯಿಂದಾಗುವ ಸಮಸ್ಯೆಗಳ ಬಗ್ಗೆ ಪ ಪಂ. ಮುಖ್ಯ ಅಧಿಕಾರಿ ಸುಬ್ರಮಣ್ಯ ಮಾತನಾಡಿ, ವಿಶ್ವದಾದ್ಯಂತ ಜನರಿಗೆ ಅರಿವು ಮೂಡಿಸಲು ಶೌಚಾಲಯಗಳ ಬಳಕೆಯನ್ನು ಉತ್ತೇಜಿಸಲು ಮತ್ತು ನೈರ್ಮಲ್ಯದ ಮಹತ್ವವನ್ನು ವಿವರಿಸುವ ಉದ್ದೇಶದಿಂದ ಪ್ರತಿ ವರ್ಷ ನವಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ.
ಈ ಆಚರಣೆಯ ಮತ್ತು ಮಹತ್ವದ ಬಗ್ಗೆ ಇಂದಿಗೂ ಜಗತ್ತಿನಲ್ಲಿ ಹಲವು ಹಿಂದುಳಿದ ಪ್ರದೇಶಗಳ ಜನರಿಗೆ ಶೌಚಾಲಯ ವ್ಯವಸ್ಥೆ ಇಲ್ಲ, ಅಷ್ಟು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿ ತಮ್ಮ ಸಂಪ್ರದಾಯವಾದಿ ಚಿಂತನೆಯಿಂದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳು ಸಾಕಷ್ಟಿವೆ. ಇವರೆಲ್ಲ ಹೆಚ್ಚಾಗಿ ಬಯಲು ಪ್ರದೇಶದಲ್ಲಿಯೇ ಮಲ ವಿಸರ್ಜನೆ ಮಾಡುತ್ತಾರೆ. ಈ ಬಯಲು ಮಲ ವಿಸರ್ಜನೆಯಿಂದ ಆರೋಗ್ಯಕ್ಕೆ ಮತ್ತು ಪ್ರಕೃತಿ ಮೇಲೆ ಕೆಟ್ಟ ಪರಿಣಾಗಳು ಬೀರುತ್ತವೆ . ಹೇಗೆಂದರೆ ನೀರಿನ ಮೂಲಗಳ ಬಳಿ ಮಲ ವಿಸರ್ಜನೆ ಮಾಡುವುದರಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತವೆ . ಹಾಗೂ ಈ ಜಲ ಮೂಲಗಳ ಸಮೀಪ ವಾಸಿಸುವ ಜನರು ಅದೇ ನೀರನ್ನು ತಮ್ಮ ದೈನಂದಿನ ಜೀವನಕ್ಕೆ ಬಳಕೆಗೆ ಮಾಡುತ್ತಾರೆ ಇದರಿಂದ ಕಾಲಾರಾ, ಟೈಫಾಯಿಡ್ , ಅತಿಸಾರ ಮುಂತಾದ ಅನೇಕ ರೋಗಗಳು ಬಾದಿಸಬಹುದು.

ಅಲ್ಲದೆ ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ ಮಾಡುವುದರಿಂದ ನೊಣಗಳು ಹಾಗೂ ಇತರ ಕೀಟಗಳು ಸಹ ಅದರ ಮೇಲೆ ನೆಲೆಗೊಳ್ಳುತ್ತವೆ. ಈ ಸೂಕ್ಷ್ಮ ಜೀವಿಗಳು ನಮ್ಮ ದೇಹವನ್ನು ಸೋಕಿದಾಗ ಇದರಿಂದ ಅನೇಕ ಗಂಭೀರ ಕಾಯಿಲೆಗಳು ಉಂಟಾಗಬಹುದು ಇಷ್ಟು ಮಾತ್ರವಲ್ಲದೆ ಕಳಪೆ ಮಟ್ಟದ ಶೌಚಾಲಯ ವ್ಯವಸ್ಥೆಯಿಂದಲೂ ಹಲವಾರು ಕಾಯಿಲೆಗಳು ಬರುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ರಾಜೇಶ್ವರಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ತ್ಯಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಆರ್ ಬೆರಳಿನ್, ಮಂಜುನಾಥ್ ಯಡಿಯಾಪುರ, ಬಸವರಾಜ ಆರ್ ಬೇರಳಿನ್, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!