18gvt1

 ಬಲಿಷ್ಟ ಭಾರತ ದೇಶ ನಿರ್ಮಾಣಕ್ಖಾಗಿ ಮೋದಿಯವರನ್ನು ಬೆಂಬಲಿಸಿ  ಸೂಲಿಬೆಲಿ

ಕರುನಾಡ ಬೆಳಗು ಸುದ್ದಿ
ಗಂಗಾವತಿ,19- ಬಲಿಷ್ಠ ಭಾರತ ದೇಶ ನಿರ್ಮಾಣಕ್ಕಾಗಿ ಮತ್ಮೋಮೆ ದೇಶಧ ಪ್ರಧಾನಮಂತ್ರಿಯನ್ನಾಗಿಸಲು ನರೆಂದ್ರ ಮೋದಿಯವರನ್ನು ಒಕ್ಕೋರಲಿನಿಂದ ಬೆಂಬಲಿಸೋಣ ಎಂದು  ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲಿ  ಹೇಳಿದರು.
ಅವರು ನಗರದ ನಮೋ ಬ್ರೀಗೆಡ್‌ವತಿಯಿಂದ ಸೋಮವಾರ ನಗರದ ಐಎಂಎ ಭವನದಲ್ಲಿ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಆರ್ಥಿಕ ಸ್ಥಿತಿಯಲ್ಲಿ ಅತ್ಯಂತ ಹೀನಾಯವಾಗಿತ್ತು.  ಮನಮೋಹನ್‌ಸಿಂಗ್ ಆಡಳಿತದಲ್ಲಿ ಮುಂಬೈನಲ್ಲಿ ಪಾಕಿಸ್ತಾನ ಉಗ್ರರು ಬಾಂಬ್ ದಾಳಿಯಿಂದಾಗಿ ೨೫೦ ಜನ ಭಾರತೀಯರು ಮೃತಪಟ್ಟಿದ್ದರು.
ಮೋದಿ ಪ್ರಧಾನಿಯಾದ ನಂತರ ಈ ದೇಶದ ಚಿತ್ರಣವೇ ಬದಲಾಯಿತು.  40 ಜನ ಸೈನಿಕರನ್ನು ಕೊಂದ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು 250೦ ಉಗ್ರರನ್ನು ಅವರ ದೇಶಕ್ಕೆ ನುಗ್ಗಿ ಹೊಡೆದು ಬಂದಿರುವುದು ಮೋದಿ ಅವರ ಆಡಳಿತದ ಸಾಮರ್ಥ್ಯ.  ನೋಟ್ ಬ್ಯಾನ್ ನಂತರ ಭಾರತ ಜಗತ್ತಿನ 5ನೇ ಆರ್ಥಿಕ ರಾಷ್ಟçವಾಗಿ ಹೊರ ಹೊಮ್ಮಿದೆ.  ದೇಶದ ಐವತ್ತು ಕೋಟಿ ಜನರಿಗೆ ಜನ್‌ಧನ್ ಖಾತೆ ಮಾಡಿ ಬ್ಯಾಂಕ್ ಮೂಲಕ ವ್ಯವಹಾರ ಮಾಡುವಂತೆ ಮಾಡಿರುವುದು ಮೋದಿ ಆಡಳಿತ.
ಕಳೆದ ಹತ್ತು ವರ್ಷದ ಪ್ರಧಾನಮಂತ್ರಿ ನರೇಂದ್ರಿ ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಟ ರಾಷ್ಟçವಾಗಿ ಹೊರ ಹೊಮ್ಮಿದೆ.  ಶತೃ ರಾಷ್ಟç ಪಾಕಿಸ್ತಾನ್  ಸೌಂಡ್ ಇಲ್ಲದಂತೆ ಮೋದಿ ಮಾಡಿದ್ದಾರೆ.
 ಅಂತರಾಷ್ಟಿçÃಯ ನ್ಯಾಯಾಲಯದಲ್ಲಿ ಭಾರತದ ಪ್ರತಿನಿಧಿಗೆ ಗೆಲುವಾಗುವಂತೆ ಮಾಡಿರುವ ಮೋದಿ ಆಡಳಿತದಿಂದ ಜಗತ್ತಿನ ಎಲ್ಲಾ ದೇಶಗಳು ಇಂದು ಭಾರತದ ಮಾರ್ಗದರ್ಶನ ಬಯಸುತ್ತಿವೆ.  ಹೀಗಾಗಿ ಮೂರನೇ ಅವಧಿಗೂ ಅವರು ಪ್ರಧಾನಿಯಾಗಿ ಮುಂದುವರೆಯಬೇಕು.
 ಮೋದಿಗಾಗಿ ನಿಮ್ಮ ಕ್ಷೇತ್ರದಲ್ಲಿ ಕಮಲದ ಗುರುತಿಗೆ ಮತ ಹಾಕಬೇಕು. ಆದರೆ ಭಾರತದ ಜನರಿಗೆ ಉಚಿತವಾಗಿ ಕೊವಿಡ್ ವ್ಯಾಕ್ಸಿನ್ ಹಾಕುವ ಮೂಲಕ 140 ಕೋಟಿ ಜನರ ಪ್ರಾಣ ಉಳಿಸುವ ಕೆಲಸ ಮೋದಿ ಮಾಡಿದ್ದರು.  ರೂ.೧೫ ಲಕ್ಷ ಹಣ ಹಾಕಿಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ಮೋದಿ ವ್ಯಾಕ್ಸಿನ್ ಮೂಲಕ ಕೋಟಿಗಟ್ಟಲೆ ಬೆಲೆ ಬಾಳುವ ಜೀವವನ್ನು ಉಳಿಸಿರುವುದು ನೆನಪು ಮಾಡಬೇಕಿದೆ.
80 ಕೋಟಿ ಜನರಿಗೆ ಉಚಿತ ಪ್ರತಿ ತಿಂಗಳು ೫ ಕೆಜಿ ಅಕ್ಕಿ ನೀಡುತ್ತಿದ್ದಾರೆ.  ೧೨ ಕೋಟಿ ಜನರಿಗೆ ೫ ಲಕ್ಷದವರೆಗೆ ಆರೋಗ್ಯ ಚಿಕಿತ್ಸೆ ನೀಡುವ ಆಯುಸ್ಮಾನ್ ಕಾರ್ಡ್ ನೀಡಲಾಗಿದೆ.  ಮೋದಿ ಆಡಳಿತದಿಂದ ಭಾರತ ಮೋಬೈಲ್ ತಯಾರಿಕೆಯಲ್ಲಿ ಜಗತ್ತಿನ ಎರಡನೇ ಅತೀ ದೊಡ್ಡ ರಾಷ್ಟçವಾಗಿದೆ. ಆರ್ಟಿಕಲ್ 370 ರದ್ದು, 500 ವರ್ಷದ ಹಿಂದುಗಳ ಕನಸು ನನಸಾಗಿರುವ ರಾಮಮಂದಿರ ನಿರ್ಮಾಣ ಮಾಡಿರುವ ಹೆಮ್ಮೆಯ ಮೋದಿಗೆ ಸಲ್ಲುತ್ತದೆ.
ಮೋದಿ ಆಡಳಿತದಲ್ಲಿ ದೇಶದ ೪ ಕೋಟಿ ಜನರಿಗೆ ಮನೆ ನಿರ್ಮಿಸಿದ್ದಾರೆ. 5 ಗ್ಯಾರಂಟಿಗಳಿಗಾಗಿ ಕರ್ನಾಟಕದ ಪ್ರಬುದ್ಧ ಮತದಾರ ಮೋದಿಯನ್ನು ಮರೆಯಬಾರದು.
400 ಸ್ಥಾನಗಳ ಗುರಿಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯು ಇರಬೇಕು.  ಎಂಪಿಯನ್ನು ಉಲ್ಟಾ ಮಾಡಿ ನೋಡಿ ಪಿಎಂಗಾಗಿ ಬಿಜೆಪಿಗೆ ಮತ ಹಾಕಿ.  ರಾಜ್ಯದ ಅಭಿವೃದ್ದಿಗಾಗಿ ೨೮ ಮತ ಕ್ಷೇತ್ರದಲ್ಲಿ ಕಮಲ ಚಿನ್ಹೆಗೆ ಮತನೀಡಿ ದೇಶದ ಭದ್ರತೆಗಾಗಿ ಸಮಗ್ರ ಅಭಿವೃದಿಗಾಗಿ ಮೋದಿಯವನ್ನು ಪ್ರತಿಯೋಬ್ಬರು ಬೆಂಬಲಿಸಿ ಎಂದರು.
 ನಗರದ ಹಿರಿಯ ವೈದ್ಯ ಡಾ.ಶಿವಾನಂದ ಭಾವಿಕಟ್ಟಿ ಅಧ್ಯಕ್ಷತೆವಹಿಸಿದ್ದರು.
 ಸಮಾರಂಭದಲ್ಲಿ ಕೋಪ್ಪಳ ಬಿಜೆಪಿ ಲೋಕಸಭೆ ನಿಯೋಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಡಾ.ಕೆಜಿ ಕುಲಕರ್ಣಿ ಕೊಪ್ಪಳ, ನೆಕ್ಕಂಟಿ ಸೂರಿಬಾಬು ನಗರಸಭೆ ಸದಸ್ಯರುಗಳು, ಸಂಘದ ಪರಿವಾರದ ಮುಖಂಡರುಗಳು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!