IMG-20231025-WA0019
  •                    ಬಳ್ಳಾರಿ ನಗರ ಶಾಸಕ
    ನಾರಾಭರತ್ ರೆಡ್ಡಿ ಅದ್ದೂರಿಯಿಂದ ಜನ್ಮದಿನ ಆಚರಣೆ
  • ಕರುನಾಡ ಬೆಳಗು ಸುದ್ದಿ
    ಬಳ್ಳಾರಿ, 25- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಶಾಸಕರು, ನಾರಾ ಸೂರ್ಯ ನಾರಾಯಣ ರೆಡ್ಡಿ ಅವರ ಪುತ್ರ ಬಳ್ಳಾರಿ ಸಿಟಿ ಶಾಸಕ, ನಾರಾ ಭರತ್ ರೆಡ್ಡಿ ಅವರ ಜನ್ಮ ದಿನಾಚರಣೆ ಇಂದು ನಗರದ ನಾನಾ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಅದ್ದೂರಿಯಿಂದ ಆಚರಿಸಲಾಗಿತ್ತು.
    ಈ ಕಾರ್ಯಕ್ರಮವನ್ನು ಕಣ್ತುಂಬ ವೀಕ್ಷಿಸಲು, ನಾರಾ ಕುಟುಂಬದ ಅಭಿಮಾನಿಗಳು ಮತ್ತು ಕಾಂಗ್ರೆಸ್ ನಾಯಕರು ಸಾವಿರಾರು ಮಂದಿ ನಾನಾ ಭಾಗಗಳಿಂದ ಉಪಸ್ಥಿತರಿದ್ದರು.. ನಗರದ ಮುಖ ರೋಡ್ ವ್ಯಾಪ್ತಿಯಲ್ಲಿ ಎಮ್ ಆರ್ ವಿ ಲೇಔಟ್ ನಲ್ಲಿ ಇರುವ ಅಖಿಲ ಕರ್ನಾಟಕ ಲಾಳಗೊಂಡರ ಸಂಘದ ವತಿಯಿಂದ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಗಜಮಾಲೆಯನ್ನು ಹಾಕಿ ಗೌರವದಿಂದ ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ, ಯಾಲ್ಪಿ ಪಂಪನಗೌಡ,, ಮೀನಳ್ಳಿ ಚಂದ್ರಶೇಖರ್ ಗೌಡ, ಹೆಚ್ ತಿಮ್ಮನಗೌಡ, ಶಾಸಕರಾ ಭಾರತ್ ರೆಡ್ಡಿ ಅವರ ಆಪ್ತರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಬಳ್ಳಾರಿ ವಿಜಯನಗರ ಜಿಲ್ಲಾಧ್ಯಕ್ಷ ಚಾನಾ ಳ್,ಶೇಖರ್, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
    ಅದೇ ರೀತಿಯಾಗಿ ಬರತ್ ರೆಡ್ಡಿ ಅವರ ಜನ್ಮ ದಿನಾಚರಣೆಯನ್ನು ಎಪಿಎಂಸಿ, ತಾಳೂರು ರೋಡ್, ಶ್ರೀರಾಂಪುರ ಕಾಲೋನಿ ಮತ್ತು ಇತರ ಭಾಗಗಳಲ್ಲಿ ಬಂದ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಅದ್ಧೂರಿಯಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
    ಒಡಾಗಿತ್ತು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು, ಯುವಜನ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಸಚಿವರು,ಬಿ. ನಾಗೇಂದ್ರ ಅವರು, ನಾರಾಭರತ್ ರೆಡ್ಡಿ ಅವರನ್ನು ಸನ್ಮಾನಿಸಿ, ಮಾತನಾಡಿದರು. ನಾರಾ ಭರತ್ ರೆಡ್ಡಿ ಅವರು ಹಿಂದೆ ಟಚ್ ಫಾರ್ ಲೈಫ್ ಫೌಂಡೇಶನ್ ಸೇವಾ ಸಂಸ್ಥೆಯಿಂದ, ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮಾಡಿ ಜನರ ಅಭಿಮಾನವನ್ನು ಹೊಂದಿದ್ದಾರೆ ಎಂದರು.
    ಅತಿ ಸಣ್ಣ ವಯಸ್ಸಿನಲ್ಲಿ ಶಾಸಕರಾದರು, ಎಲ್ಲರ ಸಹಕಾರಗಳಿಂದ ಜನರ ಅಭಿಮಾನವನ್ನು ಗೆದ್ದ ನಾರಾ ಭರತ್ ರೆಡ್ಡಿ, ಜನರ ಸಮಸ್ಯೆಗಳ ಪರಿಷ್ಕರಿಸಲು ಶ್ರಮಿಸುತ್ತಿರುವದಾಗಿ ತಿಳಿಸಿದರು. ಕಾರ್ಯಕ್ರಮಗಳಲ್ಲಿ ಸಚಿವರ ಸಹೋದರ ಕಾಂಗ್ರೆಸ್ ಮುಖಂಡ ವೆಂಕಟೇಶ್ವರ, ಮಹಾನಗರ ಪಾಲಿಕೆಯ ಸದಸ್ಯರು ಶ್ರೀನಿವಾಸ್, ಕುಬೇರ, ಪ್ರಬಂದ ಕುಮಾರ್, ಮಾಜಿ ಮೇಯರ್ ರಾಜೇಶ್ವರಿ,, ಗಳ ಜೊತೆಗೆ ಸಾವಿರಾರು ಮಂದಿ ಪಾರ್ಟಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!